ಸಂಕೇಶ್ವರ : ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ, ಸಡಗರದಿಂದ ಮಂಗಳವಾರ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದಲ್ಲಿ ಆಚರಿಸಲಾಯಿತು.
ಗ್ರಾಮದಲ್ಲಿ ಶ್ರೀ ಮಹರ್ಷಿ ಶ್ರೀವಾಲ್ಮೀಕಿ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಪತ್ರಕರ್ತರು ಕಲ್ಲಪ್ಪಾ ಪಾಮನಾಯಿಕ ಹಾಗೂ ವಾಲ್ಮೀಕಿ ಕಮಿಟಿಯ ಸದಸ್ಯರು ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಶ್ರೀ ಮಹರ್ಷಿ ವಾಲ್ಮೀಕಿ ರಾಮ ಮಂದಿರದಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಮಹರ್ಷಿ ವಾಲ್ಮೀಕಿ ಮಂದಿರಕ್ಕೆ ಮೆರವಣಿಗೆ ಜರುಗಿತು ಮೆರವಣಿಗೆ ಉದ್ದಕ್ಕೂ ಡಿಜೆ ಸಂಗೀತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.
ಮೆರವಣಿಗೆ ನಂತರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಕಲ್ಲಪ್ಪಾ ಪಾಮಾನಾಯಿಕ್ ಶ್ರೀ ಮಹರ್ಷಿ ವಾಲ್ಮಿಕಿ ಒಂದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಕ್ಕೂ ಸೇರಿದವರಾಗಿದ್ದಾರೆ. ವಾಲ್ಮೀಕಿ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ದಯಾನಂದ್ ಪಾಟೀಲ್, ಗ್ರಾಮದ ಮುಖಂಡರಾದ ಪ್ರಮೋದ್ ರಘಶೇಟ್ಟಿ, ಸಂದೀಪ್ ಮಾನೆ,
ಕಮಿಟಿ ಅಧ್ಯಕ್ಷರು ನಿಂಗಪ್ಪ ತೆಗೀನಾಳಿ, ಲಗಮಾ ಪಾಮನಾಯಿಕ,ಪರಶುರಾಮ್ ನಾಯಿಕ, ರಾಮಚಂದ್ರ ಪಾಮನಾಯಿಕ, ಪಪ್ಪು ದೇಸನಾಯಿಕ, ಲಕ್ಷ್ಮಣ್ ಪೂಜೇರಿ, ಬಾಳಪ್ಪ ಪಾಮನಾಯಿಕ, ಹನಮಂತ ನಾಯಕ್, ಶಂಕರ್ ಘಸ್ತಿ, ಲಗಮಾ ನಾಯಿಕ,ಭರಮಾ ನಾಯಿಕ, ರಾಜು ನಾಯಿಕ, ಮಧುಕರ್ ನಾಯಕ್, ರಾಜು ಲಕ್ಕು, ಸಂಭಾಜಿ ರೇಡೇಕರ, ರಾಮಚಂದ್ರ ದೇಸನಾಯಿಕ, ಪರಶುರಾಮ್ ಸನ್ನದಿ, ಅಪ್ಪಣ್ಣಾ ಬಡಗಾವಿ, ಪರಶುರಾಮ್ ಬಾ ನಾಯಿಕ, ರಾಮಾ ಪಾಮನಾಯಿಕ, ಸಾತು ಘಸ್ತಿ, ಸುರೇಶ ತೆಗೀನಾಳಿ, ನಾಗೇಶ್ ನಾಯಿಕ, ಸುರೇಶ ನಾಯಿಕ, ಲಗಮಾ ನಾಯಿಕ, ಶಿವರಾಮ ಘಸ್ತಿ, ಲಕ್ಕಪ್ಪಾ ತಳವಾರ, ಲಕ್ಕಣ ಪೂಜೇರಿ, ಸತ್ಯಪ್ಪ ವಾಲಿಕರ,ರಾಜು ತಳವಾರ, ಸಂಜು ತಳವಾರ, ಶಿವಾಜಿ ರೇಡೇಕರ,ಮಾರುತಿ ಪಾಮನಾಯಿಕ, ಬಾಳೇಶ್ ನಾಯಿಕ,ಪರಶುರಾಮ ಪಾಮನಾಯಿಕ, ಹಾಗೂ ಸಮಾಜದ ಉಪಸ್ಥಿತರಿದ್ದರು.