ಶ್ರೀ ಲಕ್ಷ್ಮಿದೇವಿ ಮಂದಿರ ಲೋಕಾರ್ಪಣೆ ಹಾಗೂ ಜಾತ್ರೋಮಹೋತ್ಸ

Ravi Talawar
ಶ್ರೀ ಲಕ್ಷ್ಮಿದೇವಿ ಮಂದಿರ ಲೋಕಾರ್ಪಣೆ ಹಾಗೂ ಜಾತ್ರೋಮಹೋತ್ಸ
WhatsApp Group Join Now
Telegram Group Join Now
ಮುಗಳಖೋಡ:  ಪಟ್ಟಣದ ನೀರಲಖೋಡಿ ಗಸ್ತಿ ತೋಟದಲ್ಲಿ ಶ್ರೀ ಲಕ್ಷ್ಮಿ ದೇವಿಯ ನೂತನ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಜುಲೈ 31ರಿಂದ ಆಗಸ್ಟ್ 1 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಜುಲೈ 31ರಂದು ಮುಂಜಾನೆ 9 ಗಂಟೆಗೆ ಕಂಟೆಪ್ಪನವರ ಶಾಲೆಯಿಂದ ಲಕ್ಷ್ಮೀದೇವಿ ದೇವಸ್ಥಾನದವರೆಗೆ ಮುತ್ತೈದೆಯರಿಂದ ಕುಂಭ, ಆರತಿ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಲಕ್ಷ್ಮಿದೇವಿ ಮೂರ್ತಿಯ ಮೆರವಣಿಗೆ ನಡೆಯಲಿದೆ.
ಆಗಷ್ಟ 1 ರಂದು ಮುಂಜಾನೆ 6 ಗಂಟೆಗೆ ಶ್ರೀ ಷಡಕ್ಷರಿ ಶಿವಯೋಗಿ ಬಸವರಾಜೇಂದ್ರ ಮಹಾಸ್ವಾಮಿಜಿ ಅಚಲೇರಿ ಜಿಡಗಾ ಮಠ ಇವರಿಂದ ಮೂರ್ತಿ ಪ್ರತಿಷ್ಠಾಪನೆ ನಂತರ ಮಹಾಪೂಜೆ, ಮಹಾಭಿಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವವು.
 ಅಹ್ವಾನಿತರಾಗಿ ಪರಮಪೂಜ್ಯ ಶ್ರೀ ಸೋಮಯ್ಯ ಸ್ವಾಮೀಜಿ ತಮ್ಮದಡ್ಡಿ, ಪರಮಪೂಜ್ಯ ಶ್ರೀ ಶಶಿಕಾಂತ ಪಡಸಲಗಿ ಗುರುಗಳು, ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಇಟನಾಳ, ಶ್ರೀ ಕಲ್ಲಪ್ಪ ಸ್ವಾಮೀಜಿ ಡವಳೇಶ್ವರ ಹಾಗೂ ಶ್ರೀ ಸದಾಶಿವ ರಗಟಿ ಗುರುಸ್ವಾಮಿಗಳು ಮುಗಳಖೋಡ ಹಾಗೂ ಇಟನಾಳ ಗ್ರಾಮದ ಗುರು ಹಿರಿಯರು ಸದ್ಭಕ್ತರು ಭಾಗವಹಿಸಲಿದ್ದಾರೆ.ಕಾರ್ಯಕ್ರಮ ನಿಮಿತ್ಯ ಅ 1 ರಂದು 55 ಕೆಜಿ ಬಾಲಕರ ಕಬಡ್ಡಿ ಪಂದ್ಯಾವಳಿಗಳು ನಡೆಯಲಿವೆ ಎಂದು ಅಶೋಕ ಗಸ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
WhatsApp Group Join Now
Telegram Group Join Now
Share This Article