ಬಳ್ಳಾರಿ ಮೇ .06 : ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಇರುವ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಗುರು ಪರಂಪರೆಯ ಶಾಖಾ ವಿರಕ್ತಮಠಕ್ಕೆ ಪೂಜ್ಯಶ್ರೀ ಸಿದ್ದಲಿಂಗ ದೇಶಕರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಶೂನ್ಯ ಸಿಂಹಾಸನರೋಹಣ ಕಾರ್ಯಕ್ರಮ ಜರುಗಲಿದೆ ಎಂದು ಗರಗ ನಾಗಲಾಪುರ ಮಠ ಕುರುಗೋಡಿನ ಶ್ರೀ ಒಪ್ಪತ್ತೆಶ್ವರಮಠದ ಮ.ನಿ.ಪ್ರ ನಿರಂಜನ ಪ್ರಭು ಮಹಾಸ್ವಾಮಿಗಳು ತಿಳಿಸಿದರು.
ಅವರು ಇಂದು ಸೋಮಸಮುದ್ರ ಗ್ರಾಮದ ಶ್ರೀ ಕೊಟ್ಟೂರು ಸ್ವಾಮಿ ಗುರು ಪರಂಪರೆಯ ಶಾಖ ವಿರಕ್ತ ಮಠದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಮೇ 8 ಗುರುವಾರದಂದು ಮುಂಜಾನೆ 9 ಗಂಟೆಗೆ ಮಹಿಳಾ ಘೋಷ್ಠಿ ಮತ್ತು ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭ ಕಾರ್ಯಕ್ರಮವನ್ನು ನಡೆಸಲಾಗುವುದು, ಈ ಸಮಾರಂಭದ ಸಾನಿಧ್ಯವನ್ನು ಶ್ರೀ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜ ಯೋಗೇಂದ್ರ ಶ್ರೀ ಮಹಾಸ್ವಾಮಿಗಳು ಮೂರು ಮಠ ಹುಬ್ಬಳ್ಳಿ ಇವರು ವಹಿಸಿಕೊಳ್ಳಲಿದ್ದಾರೆ,
ಈ ಕಾರ್ಯಕ್ರಮದ ನೇತೃತ್ವವನ್ನು ಉತ್ತಂಗಿ ಸಂಸ್ಥಾನ ಮಠದ ಜಗದ್ಗುರು ಸೋಮಶೇಖರ ಮಹಾಸ್ವಾಮಿಗಳು ವಹಿಸುವರು. ಹಾಗೂ ಹೂವಿನ ಹಡಗಲಿಯ ಗವಿಮಠದ ಶಾಂತವೀರ ಮಹಾಸ್ವಾಮಿಗಳು, ಹಂಪಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ ಹಾಗೂ ಈ ಕಾರ್ಯಕ್ರಮದಲ್ಲಿ ವಿರಕ್ತ ಮಠ ನೀಲಗುಂದದ ಚನ್ನಬಸವ ಮಹಾಸ್ವಾಮಿಗಳು, ಹಿರೇ ಹಡಗಲಿ ನಿಡಗುಂದಿ ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ನಂದಿಪುರದ ಮಹೇಶ್ವರ ಮಹಾಸ್ವಾಮಿಗಳು ಸಮ್ಮುಖದಲ್ಲಿ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲಾಧಿಕಾರಿಗಳು ಬಳ್ಳಾರಿ, ಜಿಲ್ಲಾ ಎಸ್ ಪಿ ಶೋಭಾ ರಾಣಿ, ಜಿಲ್ಲಾ ಪಂಚಾಯತಿ ಮಹಮ್ಮದ್ ಯಾರಿ ಸುಮೀರ್ ವಿಶೇಷ ಹಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಎಂಪಿ ಲತಾ ಮಲ್ಲಿಕಾರ್ಜುನ ಶಾಸಕರು ಅವರಪ್ಪನಹಳ್ಳಿ, ಅರುಣ ಲಕ್ಷ್ಮಿ, ಶ್ರೀದೇವಿ ಗಣೇಶ್, ದೀಪಾ ಸುರೇಶ್ ಬಾಬು ಸಮಾಜ ಸೇವಕರು ಇವರು ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಭಾ ನಿರ್ವಹಣೆಯನ್ನು ಮಧುಮತಿ ಪಾಟೀಲ್ ನಡೆಸಿಕೊಡುವರು.
ಸಂಜೆ 7:00 ಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಜೀವನ ದರ್ಶನ ಪ್ರವಚನ ಮಂಗಳೋತ್ಸವ ಕಾರ್ಯಕ್ರಮ ನಡೆಯುವುದು. ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿಜೆಡ್ ಜಮೀರ್ ಅಹ್ಮದ್ ಖಾನ್, ವೈ ಎಂ ಸತೀಶ್, ನಗರ ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಸಚಿವ ಅಲ್ಲಮ ವೀರಭದ್ರಪ್ಪ, ಬಿ ಶ್ರೀರಾಮುಲು, ಮಸೀದಿಪುರ ಸಿದ್ದರಾಮನಗೌಡ, ಚಾನಾಲ್ ಶೇಖರ್ ಸೇರಿದಂತೆ ಹಲವಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವರು.
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಗೆ ತರಲು ಶ್ರಮಿಸಿದ ಬಳ್ಳಾರಿ ಜಿಲ್ಲಾ ಕಾಸಪ ಅಧ್ಯಕ್ಷ ನಿಷ್ಠೆ ರುದ್ರಪ್ಪ ಮತ್ತು ದರೂರ್ ಪುರುಷೋತ್ತಮ ಗೌಡ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಮೇ 9ನೇ ತಾರೀಕು ಶುಕ್ರವಾರದಂದು ಮುಂಜಾನೆ ಆರು ಗಂಟೆಗೆ ಸಟಸ್ಥಲ ಬ್ರಹ್ಮ ಉಪದೇಶ ನಂತರ 11 ಗಂಟೆಗೆ ಶೂನ್ಯ ಸಿಂಹಾಸನರೋಹಣ, ಹಾಗೂ ಅಡ್ಡ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಸಲಾಗುವುದು ಅಂದು ರಾತ್ರಿ 7 ಗಂಟೆಗೆ, ಅಭಿನವ ಬಸವಣ್ಣ ಎಂಬ ಧಾರ್ಮಿಕ ರಂಗ ನಿರ್ದೇಶಕ ಜಗದೀಶ್ವರ ನೇತೃತ್ವದಲ್ಲಿ ಸಾದರ ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಲಿಂಗ ನಾಯಕನಹಳ್ಳಿ ಮಠದ ಚೆನ್ನವೀರ ಮಹಾಸ್ವಾಮಿಗಳು, ಅಕ್ಕಿಆಲೂರು ಮಠದ ಶಿವಬಸವ ಮಹಾಸ್ವಾಮಿಗಳು, ಸುವರ್ಣ ಗಿರಿ ಮಠದ ಬಸವಲಿಂಗ ಮಹಾಸ್ವಾಮಿಗಳು, ದರೂರು ವಿರಕ್ತ ಮಠದ ಕೊಟ್ಟೂರು ಮಹಾಸ್ವಾಮಿಗಳು, ಬೂದುಗುಂಪ ಮಠದ ಸಿದ್ದೇಶ್ವರ ಮಹಾಸ್ವಾಮಿಗಳು, ಶಿದರಗಡ್ಡಿ ಮಠದ ಮರಿ ಕೊಟ್ಟೂರು ದೇಶಕರು, ಸಂಗನಾಳ ಗ್ರಾಮದ ಅನ್ನದಾನೇಶ್ವರ ಶಾಖ ಮಠದ ವಿಶ್ವೇಶ್ವರ ದೇವರು, ಮತ್ತು ಸೋಮಸಮುದ್ರ ಗ್ರಾಮದ ಈರನಗೌಡ, ಶಿವಲಿಂಗ ಶಾಸ್ತ್ರಿ ಸೇರಿದಂತೆ ಇತರರಿದ್ದರು.