ಶ್ರೀ ಗಾಳೇಶ್ವರ ಮಠ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ : ಬಾಬಾಸಾಹೇಬ ಪಾಟೀಲ

Sandeep Malannavar
ಶ್ರೀ ಗಾಳೇಶ್ವರ ಮಠ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ : ಬಾಬಾಸಾಹೇಬ ಪಾಟೀಲ
WhatsApp Group Join Now
Telegram Group Join Now
ನೇಸರಗಿ ಫೆ., ೦೨-  ಪ್ರಸಕ್ತವಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇನ್ನು 45 ದಿನ ಹೆಚ್ಚಿನ ಸಮಯ ಓದಿಗೆ ಇದ್ದು, ಗಮನ ಹರಿಸಿ ಹೆಚ್ಚಿನ ಅಂಕ ಪಡೆದು ತಾವು ಓದಿದ ಶಾಲೆಗೆ, ಗ್ರಾಮಕ್ಕೆ, ತಮ್ಮ ಮನೆಗೆ ಹೆಸರು ತರುವ ಹಾಗೆ ತಾವು ಶ್ರಮ ವಹಿಸಿ ಅಭ್ಯಾಸ ಮಾಡಿ ಜೀವನದಲ್ಲಿ ಮುಂದೆ ಬರಬೇಕು  ಎಂದು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
   ಅವರು ರವಿವಾರದಂದು ಇಲ್ಲಿನ ನೇಸರಗಿ- ಮಲ್ಲಾಪೂರ ಗ್ರಾಮದ  ಶ್ರೀ ಗಾಳೇಶ್ವರ ಶಿಕ್ಷಣ ಸಂಸ್ಥೆಯ  ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ 22  ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ದೇಸಿಸಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಎಸ್ ಎಲ್ ಎಲ್ ಸಿ ವರೆಗೆ ಗ್ರಾಮೀಣ ಮಟ್ಟದಲ್ಲಿ ಓದುವ ಅವಕಾಶ ನಿಮಗೆಲ್ಲರಿಗೆ ಇದ್ದು , ಈ ಸಮಯದಲ್ಲಿ ಓದು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮೀಣ ಕ್ರೀಡೆಗಳಲ್ಲಿ ತಾವು ಪಾಲ್ಗೊಳ್ಳಬೇಕು  ಈ ಒಂದು ಶ್ರೀ ಗಾಳೇಶ್ವರ ಮಠದಲ್ಲಿ ಕಳೆದ 22 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಕಾರಣ ಮಠದ ಶ್ರೀ ಚಿದಾನಂದ ಶ್ರೀಗಳ ಸಹಕಾರ ಹಾಗೂ ಶಿಕ್ಷಕ ಸಿಬ್ಬಂದಿ ಪರಿಶ್ರಮ ಎಂದರು.
     ಕೆ ಎಲ್ ಇ ನಿರ್ದೇಶಕರಾದ ವಾಯ್ ಎಸ್ ಪಾಟೀಲ ಮಾತನಾಡಿ ನಾವು ಬಾಲ್ಯದಲ್ಲಿ ಹೊಲಕ್ಕೆ ಹೋಗುವಾಗ ಈ ಮಠದಲ್ಲಿ ಆಟ ಆಡಿದ್ದೇವೆ, ಕೇವಲ ಮಠ ಅಷ್ಟೇ ಇದ್ದ ಅಂದು, ಇಂದು ಹೆಮ್ಮರವಾಗಿ ಬೆಳೆದು  22 ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ಶಾಲೆ ಸ್ಥಾಪನೆ ಮಾಡಿ ಶ್ರೀಗಳು ಹಾಗೂ ಹಿರಿಯರು ಸ್ಥಾಪನೆ ಮಾಡಿ ಇಂದು ಬೃಹತ್ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.
   ಮಠದ ಕಾರ್ಯಧ್ಯಕ್ಷರಾದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಈ ಶಾಲೆಯ ಬೆಳವಣಿಗೆಗೆ ಅನೇಕ ಭಕ್ತರು, ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಮಠ ಹಾಗೂ ಶಾಲೆ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂಡುತ್ತಿದ್ದು ಈ ಆಂಗ್ಲ ಮಾಧ್ಯಮ ಶಾಲೆಯ ಸದುಪಯೋಗ ಈ ಭಾಗದ ಜನರು ಪಡೆಯಬೇಕು ಎಂದರು.
   ಕಾರ್ಯಕ್ರಮದಲ್ಲಿ ಶ್ರೀ ಗಾಳೇಶ್ವರ ಶಿಕ್ಷಣ ಸಂಸ್ಥೆಯ ಛೇರಮನ್ನರಾದ ಶಿವನಗೌಡ ಪಾಟೀಲ, ಕೆ ಎಲ್ ಇ ಉಪಾಧ್ಯಕ್ಷರಾದ ಬಸವರಾಜ ತಾಟವಟಿ, ಕೆ ಎಲ್ ಇ ನಿರ್ದೇಶಕರಾದ ವಿಜಯ ಮೆಟಗುಡ,ಕ್ಷೇತ್ರ ಶಿಕ್ಷಣ ಅಧಿಕಾರಿ ಎ ಎನ್ ಪ್ಯಾಟಿ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಾಯಕ ಪ್ರದ್ಯಾಪಕರಾದ ಡಾ ಶಾಂತಾ ಮಲ್ಲಿಕಾರ್ಜುನ ಪೋರಾಪುರ, ಎಸ್ ಎಮ್ ಗಡೆನ್ನವರ, ವಿಜಯಮಹಾಂತೇಶ ಅ ಪಾಟೀಲ, ಸುನೀಲ್ ಮರಕುಂಬಿ, ಕಾರ್ಯದರ್ಶಿ ಶಂಕರಗೌಡ ಗುರನಗೌಡರ, ಆಡಳಿತ ಮಂಡಳಿ ಸದಸ್ಯರಾದ ರುದ್ರಗೌಡ ಪಾಟೀಲ, ಯಲ್ಲಪ್ಪ ಬಂದ್ರಾಮ್, ಚನಗೌಡ ಗೌಡರ, ವೀರಭದ್ರಪ್ಪ ತಲ್ಲೂರ, ಚನ್ನಬಸಯ್ಯ ಪೂಜೇರಿ, ಚಂದ್ರಗೌಡ ಪಾಟೀಲ, ರವಿ ಹೊನ್ನಯ್ಯನವರ, ದುರಗಪ್ಪ ಚಿಕಬಸನವರ, ಬಸವರಾಜ ಗಡೆನ್ನವರ, ಶಾಲೆ ಪ್ರಾಂಶುಪಾಲರಾದ ಶರಣು ಮದ್ಲಾಪೂರಮಠ , ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಎಸ್ ಜಿ ಚಟ್ನಿಸ್ ನಡೆಸಿಕೊಟ್ಟರು.
WhatsApp Group Join Now
Telegram Group Join Now
Share This Article