ಮೂಡಲಗಿ:- ಪ್ರತಿ ವರ್ಷದಂತೆ ಪಟ್ಟಣದಲ್ಲಿ ಸೋಮವಾರ ದಿ.16ರಂದು, 31ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಉತ್ಸವ ಜರುಗಲಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರು ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಯಲ್ಲಮ್ಮನ ದೇವಸ್ಥಾನ ಹತ್ತಿರದ ಅಯ್ಯಪ್ಪ ಸ್ವಾಮಿ ಸನ್ನಿದಾನ ಆವರಣದಲ್ಲಿ, ಬೆಳಗ್ಗೆ 6:55 ಗಂಟೆಗೆ, ವಿಶ್ವ ಶಾಂತಿಗಾಗಿ ಶಾಂತಿ ಹೋಮ ಜರುಗಿ, ಮಧ್ಯಾಹ್ನ 2-00 ಘಂಟೆಗೆ ಸ್ವಾಮಿ ಸನ್ನಿದಾನದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಜರಾಜನ ಜೊತೆ ಸಕಲ ವಾದ್ಯಗಳೊಂದಿಗೆ ಮಾಲೆ ಧರಿಸಿದ ಅಯ್ಯಪ್ಪ ಸ್ವಾಮಿಗಳು ಶ್ರೀ ಅಯ್ಯಪ್ಪ ಸ್ವಾಮಿ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸಾಗುವರು.
ಮೆರವಣಿಗೆಯು ಪೂಜಾ ಸ್ಥಳವಾದ ಬಸವ ಮಂಟಪಕ್ಕೆ ತಲುಪಿ, ಸಾಯಂಕಾಲ 6ಗಂಟೆಗೆ ಶ್ರೀಗಳ ಸಾನಿದ್ಯ ಹಾಗೂ ಗುರುಸ್ವಾಮಿಗಳ ನೇತೃತ್ವದಲ್ಲಿ ಮಹಾಪೂಜೆ ಜರುಗುವುದು. ಮಹಾ ಮಂಗಳಾರತಿಯೊಂದಿಗೆ ಪೂಜೆ ಸಂಪನ್ನವಾದ ನಂತರ ಸಕಲ ಭಕ್ತಾದಿಗಳಿಗೆ ಮಹಾ ಪ್ರಸಾದ ವ್ಯವಸ್ಥೆ ಇರುತ್ತದೆ.