ನೇಸರಗಿ: ಇಲ್ಲಿನ ಪ್ರತಿಷ್ಠಿತ ನೇಸರಗಿ – ಮಲ್ಲಾಪೂರ ಗ್ರಾಮದ ಅವಧುತ ಶ್ರೀ ಗಾಳೇಶ್ವರ ಮಠದ 51 ನೇ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರದಂದು ಸಂಜೆ 5 ಘಂಟೆಗೆ ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾ ರಥೋತ್ಸವವು ಭಕ್ತಿ ಭಾವದಿಂದ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ನೇಸರಗಿ ಮಲ್ಲಾಪೂರ ಕೆ ಎನ್ ಗ್ರಾಮಗಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.