ಆರೋಗ್ಯಯುತ ಜೀವನ ನಡೆಸಲು ಕ್ರೀಡೆ ಮುಖ್ಯವಾಗಿದೆ: ಪಂಚಾಕ್ಷರ ಶ್ರೀಗಳ ಅಭಿಮತ

Ravi Talawar
ಆರೋಗ್ಯಯುತ ಜೀವನ ನಡೆಸಲು ಕ್ರೀಡೆ ಮುಖ್ಯವಾಗಿದೆ: ಪಂಚಾಕ್ಷರ ಶ್ರೀಗಳ ಅಭಿಮತ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
WhatsApp Group Join Now
Telegram Group Join Now

ಮುನವಳ್ಳಿ: ದೈಹಿಕ ಮತ್ತು ಮಾನಸಿಕ ಸ್ಥಿರತೆ ಕಾಪಾಡಿಕೊಂಡು ಆರೋಗ್ಯಯುತ ಜೀವನ ನಡೆಸಲು ಕ್ರೀಡೆ ಸಹಾಯಕವಾಗುವುದರ ಜೊತೆಗೆ ಆತ್ಮವಿಶ್ವಾಸ ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಯಕ್ಕುಂಡಿ ಕುಮಾರೇಶ್ವರ ವಿರಕ್ತ ಮಠದ ಪಂಚಾಕ್ಷರ ಶ್ರೀಗಳು ಹೇಳಿದರು.

ಯಕ್ಕುಂಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ೨೦೨೪-೨೫ ನೇ ಸಾಲಿನ ಕೇಂದ್ರ ಮಟ್ಟದ ಕ್ರೀಡಾಕೂಟ ಕಾರ್ಯಕ್ರದ ಸಾನಿದ್ಯ ವಹಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ದಿಸೆಯಿಂದಲೆ ಕ್ರೀಡೆಗಳನ್ನು ಸವಾಲಾಗಿ ಪರಿಗಣಿಸದೆ ಉತ್ಸಾಹದಿಂದ ಭಾಗವಹಿಸಿ ದೈಹಿಕವಾಗಿ ಸದೃಢರಾಗಬೇಕೆಂದರು. ಕೇಂದ್ರಮಟ್ಟದಲ್ಲಿ ಸಾಧನೆಗೈಯುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ವೈ ಎಂ ಯಾಕೊಳ್ಳಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮತ್ತು ಗ್ರಾ ಪಂ ಅದ್ಯಕ್ಷೆ ಪೈರೋಜಾ ಬಾರಿಗಿಡದ, ಗ್ರಾ ಪಂ ಉಪಾದ್ಯಕ್ಷೆ ಮಾಸಾಬಿ ಇಮ್ಮನ್ನವರ, ಉಪ ಪ್ರಾಚಾರ್ಯ ವಿಜಯ ಪೂಜೇರ, ಹಿರಿಯರಾದ ಅಬ್ದುಲ್‌ಖಾದರಜೈಲಾನಿ ಬಾರಿಗಿಡದ, ಬಸನಗೌಡ ಪಾಟೀಲ, ಪಕೀರಪ್ಪ ಪಾಶ್ಚಾಪೂರ, ದೈಹಿಕ ಶಿಕ್ಷಣಾಧಿಕಾರಿ ಮಲ್ಲೇಶ ಕೊಪ್ಪದ, ಎಂ ಎ ಕಮತಗಿ, ಸಿ ಆರ್‌ಪಿ ಎನ್ ಬಿ ಪೆಂಟೆದ, ಪ್ರಧಾನ ಗುರುಮಾತೆ ವ್ಹಿ ಸಿ ಗದ್ದಿಗೌಡರ, ಗ್ರಾಪಂ ಸದಸ್ಯರಾದ ಹಸನಸಾಬ ಬಾರಿಗಿಡದ, ನಿಜಾಮುದ್ದಿನ ಬಾರಿಗಿಡದ, ಎಂ ಎಪ್ ಸಿದ್ದನಗೌಡರ, ಎಂ ಎಸ್ ಹೊಂಗಲ, ಕಿರಣ ಕುರಿ, ಎಂ ಎಸ್ ಕೋಳಿ, ಪತ್ರಕರ್ತ ಚಂದ್ರಕಾಂತ ಸಂಗಟಿ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಾನಿಗಳಾದ ಖ್ವಾಜಾಹುಸೇನ ಪೀರಜಾದೆ, ಶಾದಿಕ ಪಠಾಣ,ಶಿವಾನಂದ ನೇಗೂರ ಇವರನ್ನು ಶಾಲೆವತಿಯಿಂದ ಸನ್ಮಾನಿಸಲಾಯಿತು. ಎಸ್ ಡಿ ಎಮ್ ಸಿ ಸದಸ್ಯರಾದ ನಿಂಗನಗೌಡ ಪಾಟೀಲ, ಚನ್ನಪ್ಪ ಹೊಂಗಲ, ರಾಜೇಸಾಬ ಪರಸಪ್ಪನವರ, ಉಮರ ಬಾರಿಗಿಡದ, ಡಿ ಜಿ ಪರಸಪ್ಪನವರ, ಇನ್ನು ಮುಂತಾದ ಸದಸ್ಯರು ಉಪಸ್ಥಿತರಿದ್ದರು. ಕ್ರೀಡಾ ಕೂಟದ ಪ್ರತಿಜ್ಞಾವಿಧಿಯನ್ನು ದೈಹಿಕ ಶಿಕ್ಷಕ ಕೆ ಕೆ ಲಮಾಣಿ ಭೋದನೆ ಮಾಡಿದರು.

ಕೇಂದ್ರ ಮಟ್ಟಕ್ಕೆ ಸಂಬಂದಪಟ್ಟ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಶಿಕ್ಷಕಿ ಪ್ರತಿಬಾ ವಿವೇಕಿ ಕಾರ್ಯಕ್ರಮ ನಿರೂಪಿಸಿದರು, ಕೊನೆಗೆ ಶಿಕ್ಷಕಿ ಪಿ ವ್ಹಿ ಹತ್ತಿಕಟಗಿ ವಂದಿಸಿದರು. ಕುಮಾರೇಶ್ವರ ವಿರಕ್ತ ಮಠದ ಪಂಚಾಕ್ಷರ ಶ್ರೀಗಳು ಗ್ರಾ ಪಂ ಅದ್ಯಕ್ಷೆ ಪೈರೋಜಾ ಬಾರಿಗಿಡದ, ಮಾಸಾಬಿ ಇಮ್ಮನ್ನವರ, ಪ್ರಾಚಾರ್ಯರಾದ ವೈ ಎಂ ಯಾಕೊಳ್ಳಿ, ಅಬ್ದುಲ್‌ಖಾದರಜೈಲಾನಿ ಬಾರಿಗಿಡದ,ಬಸನಗೌಡ ಪಾಟೀಲ,ಎನ್ ಬಿ ಪೆಂಟೆದ,ವ್ಹಿ ಸಿ ಗದ್ದಿಗೌಡರ,ನಿಂಗನಗೌಡ ಪಾಟೀಲ, ಚನ್ನಪ್ಪ ಹೊಂಗಲ,ರಾಜೇಸಾಬ ಪರಸಪ್ಪನವರ,ಉಮರ ಬಾರಿಗಿಡದ,ಡಿ ಜಿ ಪರಸಪ್ಪನವರ ಮುಂತಾದವರು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article