ಕ್ರಿಕೆಟ್ ಧಮಾಕಾ ಪಂದ್ಯಾವಳಿಗೆ ಸಿದ್ದು ಕೊಣ್ಣೂರ ಚಾಲನೆ !
ಮಹಾಲಿಂಗಪುರ: ಪಟ್ಟಣದಲ್ಲಿ ಗುರುವಾರ ಕ್ರಿಕೆಟ್ ಧಮಾಕಾ ಎಂಬ ಚುಟುಕು ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಸಸಿಗೆ ನೀರುಣ್ಣಿಸುವ ಮೂಲಕ ಚಾಲನೆ ನೀಡಿದರು.
ಎಸ್. ಸಿ. ಪಿ, ಕೆಎ ಸಂಸ್ಥೆಯ ಮತ್ತು ಅಂಗಡಿ ಪರಿವಾರದ ಮೈದಾನದಲ್ಲಿ ನಿಗದಿತ ಓವರುಗಳ ಸ್ಥಳೀಯ ಆಟಗಾರರಿಗೆ ಮೀಸಲಿರುವ ಮತ್ತು ತಂಡಗಳ ಪ್ರಾಯೋಜಕರ ಕ್ರಿಕೆಟ್ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಪೂರ್ವಾಗ್ರಹ ಪೀಡಿತರಾಗದೆ ಸಹಜ ಆಟವನ್ನಾಡಿದರೆ ನೋಡುಗರಿಗೆ ಮನೋರಂಜನೆ ಜೊತೆಗೆ ತಮಗೆ ಪ್ರಶಸ್ತಿ ಪಡೆಯುವ ಅವಕಾಶ ದೊರೆಯುತ್ತದೆ.ಆಟಕ್ಕೆ ಜಾತಿ, ಮತ, ಪಂಥಗಳಿಲ್ಲ ಎಲ್ಲರೂ ಒಂದೆ, ಇದೊಂದು ಸೌಹಾರ್ದ ಬೆಸೆಯುವ ಕ್ರೀಡೆಯಾಗಿದ್ದು, ಎಲ್ಲರೊಟ್ಟಿಗೆ ಬೆರೆತು ಆಟವಾಡಿ ಎಂದು ಹೇಳಿದರು.
ಇಲ್ಲಿ ಸ್ಪರ್ಧೆ ಮಾಡುವ ತಂಡಗಳು ಪ್ರಥಮ ಸ್ಥಾನ ಪಡೆಯುವ ತಂಡ ನಗದು ೫೦ ಸಾವಿರ, ದ್ವಿತೀಯ ೨೫ ಸಾವಿರ ಮತ್ತು ಸೆಮಿಫೈನಲ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಎರಡು ತಂಡಗಳು ತಲಾ ೫ ಸಾವಿರ ನಗದು ಮತ್ತು ಧಮಾಕಾ ಪಾರಿತೋ?ಕ ಪಡೆಯಲಿವೆ.
ಇನ್ನುಳಿದಂತೆ ಪಂದ್ಯಾವಳಿಯಲ್ಲಿ ವಯಕ್ತಿಕ ಸವಾಂಗೀಣ ಆಟ, ಉತ್ತಮ ಬ್ಯಾಟಿಂಗ್, ಬಾಲಿಂಗ್, ಕೀಪಿಂಗ್, ಫೀಲ್ಡಿಂಗ್, ಫಾಸ್ಟ್ ೫೦, ಹ್ಯಾಟ್ರಿಕ್ ಫೋರ್, ಸಿಕ್ಸ್ ಗಳಿಗೆ ಸೈಕಲ್, ಬ್ಯಾಟ್, ಶ್ಯೂಸ್, ಕ್ರೀಡಾ ಕಿಟ್ ಮತ್ತು ಟೀ ಶರ್ಟ್ ಗಳನ್ನು ಆಟಗಾರರು ಪಡೆಯಲಿದ್ದಾರೆ.
ರೈತ ಸಂಘದ ಬಂದು ಪಕಾಲಿ ಮಾತನಾಡಿದರು. ವೇದಿಕೆ ಮೇಲೆ ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಸುನೀಲಗೌಡ ಪಾಟೀಲ್,ಅಬ್ದುಲ್ರಜಾಕ್ ಭಾಗವಾನ, ಮಹಾದೇವ ಕಡಬಲ್ಲವರ, ಅರ್ಜುನ್ ಕೆಸರಗೊಪ್ಪ, ಲಾಲಸಾಬ ಪಠಾಣ, ಮಲ್ಲು ಪಾಶ್ಚಾಪೂರ, ದಾದಾ ಸನದಿ, ಬಸವರಾಜ ಘಟ್ನಟ್ಟಿ, ಅಶೋಕ. ಜ. ಅಂಗಡಿ, ಸೈಫ್ ಭಾಗವಾನ ಮತ್ತು ಬಂಡಿವಡ್ಡರ ಇದ್ದರು.
೦೪ mಟಠಿ ೦೩ ಠಿhoಣo


