ಮಾನಸಿಕ ದೈಹಿಕ ಆರೋಗ್ಯಕ್ಕೆ ಕ್ರಿಡೆಗಳು ಅವಶ್ಯ- ಧರ್ಮಲಿಂಗಯ್ಯ ಗುಡಗುಂಟಿ

Hasiru Kranti
ಮಾನಸಿಕ ದೈಹಿಕ ಆರೋಗ್ಯಕ್ಕೆ ಕ್ರಿಡೆಗಳು ಅವಶ್ಯ- ಧರ್ಮಲಿಂಗಯ್ಯ ಗುಡಗುಂಟಿ
WhatsApp Group Join Now
Telegram Group Join Now
ಜಮಖಂಡಿ; ಮಾನಸಿಕ, ದೈಹಿಕ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯ ಎಂದು ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ ಹೇಳಿದರು.
ಶುಕ್ರವಾರ ಪುಷ್ಪಾತಾಯಿ ಕನ್ನಡ ಮಾಧ್ಯಮ ಶಾಲೆ ಹಾಗೂ ಪಿಯು ಕಾಲೇಜಿನ 20ನೇ ವಾರ್ಷಿಕ ಸ್ನೇಹ ನಮ್ಮೇ ಳನ, ಹಾಗೂ ಪ್ರಭು ಅವಾರ್ಡ್ಸ 2025-26 ನ್ನು ಉದ್ದೇಶಿಸಿ ಮಾತನಾಡಿದರು. ಕ್ರೀಡಾಕೂಟಗಳಲ್ಲಿ ಭಾಗವಹಿಸುವದರಿಂದ ಮಕ್ಕಳು ಸದೃಢರಾಗುತ್ತಾರೆ, ಉತ್ತಮ ಆರೋಗ್ಯ ಅವರದಾಗುತ್ತದೆ. ಕ್ರೀಡೆ ವಿದ್ಯಾ ಅಭ್ಯಾಸಕ್ಕೂ ಪೂರಕವಾಗಿದೆ. ಎಂದು ತಿಳಿಸಿದರು.
ಪ್ರತಿವರ್ಷ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ಕೂಟಗಳನ್ನು ಹಬ್ಬದಂತೆ ಆಚರಿಸುತ್ತೇವೆ. ಮಕ್ಕಳಿಗೆ ಪಠ್ಯದ ಜೊತೆಗೆ ಕ್ರಿಡೆಗಳು , ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೊತ್ಸಾಹಿಸಲಾಗುತ್ತದೆ ಎಂದು ಹೇಳಿದರು. ಮಕ್ಕಳು ಕ್ರಿಡೆಗಳಲ್ಲಿ ಭಾಗವಹಿಸುವದು ಮುಖ್ಯ ಸೋಲು ಗೆಲುವಿನ ಸೋಪಾನ ವಿದ್ದಂತೆ ಸ್ಪರ್ಧಾ ಮನೊಭಾವ ದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವೈ.ಬಿ.ಹೊಟ್ಟಿ ಮಾತನಾಡಿ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಪ್ರತಿಭಾ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಥ,ಮ 10, ದ್ವಿತಿಯ 7 ಹಾಗೂ ತೃತಿಯ 5 ಸಾವಿರ ರೂಗಳ ನಗದು ಬಹುಮಾನ ವಿತರಿಸಲಾಗುತ್ತದೆ. ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆಗಳಲ್ಲಿ ಭಾಗವಹಿಸ ಬಹುದಾಗಿದೆ ಎಂದು ತಿಳಿಸಿದರು.
ಮುಖ್ಯಗುರು ಕೆ.ವೈ.ಭೂತಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಾದ್ಯಂತ ಎಲ್ಲ ಪ್ರತಿಭಾವಂತ ಮಕ್ಕಳನ್ನು ಪ್ರೊತ್ಸಾಹಿಸಲು ಪ್ರಭು ಅವಾರ್ವ್ಸ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ, ಶಾಸಕರು ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಶಾಸಕ ಜಗದೀಶ ಗುಡಗುಂಟಿ ಅವರ ಅಪೆಕ್ಷೆಯಂತೆ ಪ್ರತಿವರ್ಚ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ತತಿಭಾ ಪರಿಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಆದರ್ಶ ವಿದ್ಯಾಲಯದ ಸುರೇಶ, ಕುಂಚನೂರಿನ ಸರ್ಕಾರಿ ಶಾಲೆಯ ಅಕ್ಷತಾ ಹಾಗೂ ಆದರ್ಶ ವಿದ್ಯಾಲಯದ ಆನಂದ ಅವರನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು.
ಓಲೇಮಠದ ಆನಂದ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಲ್ಲಿ ಸಾಧಿಸುವ ಛಲ ವಿರಬೇಕು, ಸಿನೇಮಾ ನಟರು ಆದರ್ಶರೆಂದು ತಿಳಿಯದೇ ಜೀವನದಲ್ಲಿ ಸಾಧನೆ ಮಾಡಿದವನ್ನು ಆದರ್ಶರಾಗಿಟ್ಟುಕೊಂಡು ಸಾಧನೆ ಮಾಡಬೇಕು, ದುಷ್ಟ ಚಟಗಳಿಂದ ದೂರವಿದ್ದು ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು. ಜೀವನದಲ್ಲಿ ಸ್ವಾರ್ಥ ವಿರಬಾರದು, ಜೊತೆಗಿದ್ದವರನ್ನು ಬೆಳೆಸುವ ಗುಣ ವಿರಬೇಕೆಂದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ರಾಜೇಂದ್ರ ಕುಮಾರ ಗುಡಗುಂಟಿ, ನಿರ್ದೇಶಕಿ ಪಾರ್ವತಿ ಗುಡಗುಂಟಿ, ದೇವಲ್‌ ದೇಸಾಯಿ, ನಾಗಪ್ಪ ಸನದಿ, ಸುಧೀರ ಗುಡಗುಂಟಿ, ಮಹೇಶ ಮಾಶಾಳ, ಉಮೇಶ ಹಿರೇಮಠ, ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಸಿಬ್ಬಂದಿಗಳು ಇದ್ದರು.
WhatsApp Group Join Now
Telegram Group Join Now
Share This Article