ಇಂಡಿ: ಪಟ್ಟಣದ ಜಿ.ಆರ್.ಗಾಂಧಿ ಕಲಾ ವೈ.ಎ.ಪಾಟೀಲ ವಾಣಿಜ್ಯ ಹಾಗೂಎಂ.ಎಫ್.ದೋಶಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಡಿ.14 ರಿಂದ 31ರ ವರೆಗೆ ನಿತ್ಯ ಬೆಳಗ್ಗೆ 6:30 ರಿಂದ 7:30ರ ವರೆಗೆ ಕಾತ್ರಾಳ ಬಾಲಗಾಂವದ ಮಠದ ಪಿಠಾಧಿಪತಿ ಪೂಜ್ಯ ಅಮೃತಾನಂದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
ಅಮೃತಾನಂದ ಶ್ರೀಗಳು ತಮ್ಮ ಬಾಲ್ಯದಲ್ಲಿಯೇ ತಂದೆ ತಾಯಿ ಬಂದು ಬಳಗವನ್ನು ಬಿಟ್ಟು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆಶ್ರಮದಲ್ಲಿದ್ದು ಶ್ರೀಗಳ ಸೇವೆ ಮಾಡುತ್ತಾ ಶ್ರೀಗಳ ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ ಅವರು ಉಪನಿಷ್ಯತ್ತುಗಳು, ಭಗವದ್ಗೀತೆ, ಭಾರತಿಯ ದರ್ಶನಗಳು ಮೋದಲಾದ ಗ್ರಂಥಗಳನ್ನು ಅಧ್ಯಯನ ಮಾಡಿ ಉತ್ತಮ ಪ್ರವಚನಕಾರರಾಗಿದ್ದಾರೆ. ಅಲ್ಲದೆ ಪ್ರತಿ ದಿನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದ್ದು ಪ್ರವಚನದ ಕೊನೆ ದಿನ ವಿಜಯಪುರ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಸಿದ್ದೇಶ್ವರ ಶ್ರೀಗಳ 3ನೇ ವರ್ಷದ ಗುರುವಂದನಾ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಇಂಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮೃತಾನಂದ ಶ್ರೀಗಳ ವಾಣಿಯನ್ನು ಆಲಿಸಿ ಪುನಿತರಾಗಬೇಕು ಎಂದು ಸೇವಾ ಸಮೀತಿಯವರು ತಿಳಿಸಿದ್ದಾರೆ.
ನಾಳೆಯಿಂದ ಡಿ.31 ರವರೆಗೆ ಕಾತ್ರಾಳ ಬಾಲಗಾಂವದ ಮಠದ ಪಿಠಾಧಿಪತಿ ಅಮೃತಾನಂದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ


