ಮಲ್ಲಿಕಾರ್ಜುನಖರ್ಗೆ ಗುಣಮುಖರಾಗುವಂತೆ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ

Ravi Talawar
ಮಲ್ಲಿಕಾರ್ಜುನಖರ್ಗೆ ಗುಣಮುಖರಾಗುವಂತೆ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ
WhatsApp Group Join Now
Telegram Group Join Now
ಬಳ್ಳಾರಿ,ಅ.06.. ಅಖಿಲ ಭಾರತ ರಾಷ್ಟಿçÃಯ  ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ ್ಷಮಲ್ಲಿಕಾರ್ಜುನ ಖರ್ಗೆರವರು ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು, ಸಂಪೂರ್ಣವಾಗಿ ಗುಣಮುಖರಾಗಿ ಸಕ್ರಿಯ ರಾಜಕಾರಣಕ್ಕೆ ಮರಳಿ, ತಮ್ಮ ಇನ್ನೂ ಹೆಚ್ಚಿನ ತಮ್ಮ ಸೇವೆಯನ್ನು ದೇಶ ಮತ್ತು ರಾಜ್ಯಕ್ಕೆ ಸಿಗಬೇಕೆಂದು ಬಳ್ಳಾರಿಯ ಅಧಿದೇವತೆ ತಾಯಿ ಕನಕದುರ್ಗಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಶೀಘ್ರವಾಗಿ ಗುಣಮುಖರಾಗಿ ತಮ್ಮ ಸೇವೆಯನ್ನು ರಾಜ್ಯ ರಾಷ್ಟ್ರಕ್ಕೆ ಸಿಗಲಿ ಎಂದು ಪ್ರಿಯಾಂಕಖರ್ಗೆ ಅಭಿಮಾನಿ ಬಳಗದಿಂದ ಪೂಜೆ ಸಲ್ಲಿಸಲಾಯಿತು.
ಬಳ್ಳಾರಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಲ್.ಮಾರೆಣ್ಣ ಮಾತನಾಡಿ,”ಶ್ರೀಮಾನ್ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯಕ್ಕೆ ಮತ್ತು ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ಈ ಭಾಗದ ಜನರಿಗೆ ಹೈದರಾಬಾದ್ ಕರ್ನಾಟಕ ೩೭೧ ಜೆ ತರುವುದರ ಮುಖಾಂತರ ಈ ಭಾಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅಭಿವೃದ್ಧಿ ಹೊಂದಲು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆದಷ್ಟು ಬೇಗನೆ ಅವರು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದರು.
ಮಹಾನಗರ ಪಾಲಿಕೆ ಸದಸ್ಯ, ಸಭಾ ನಾಯಕ ಗಾದೆಪ್ಪ ಮಾತನಾಡಿ, “ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ರವರು ಅವರ ರಾಜಕೀಯ ಜೀವನವು ಬೂತ್ ಮಟ್ಟದಿಂದ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಂದ ಆರಂಭಗೊAಡು ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ಅಖಿಲ ಭಾರತ ಕಾಂಗ್ರೆಸ್ಸಿನ ರಾಷ್ಟ್ರೀಯ  ಅಧ್ಯಕ್ಷರಾಗಿ ಹಾಗೂ ನಿಕಟಪೂರ್ವ ವಿರೋಧ ಪಕ್ಷದ ನಾಯಕರಾಗಿಯೂ, ಕೇಂದ್ರ ಮಂತ್ರಿಯಾಗಿ ಹೆಮ್ಮರವಾಗಿ ಬೆಳೆದಿರುವಂತಹ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನಾಯಕರು. ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆದಷ್ಟು ಬೇಗನೆ ಸಕ್ರಿಯ ರಾಜಕಾರಣಕ್ಕೆ ಮರಳಿ ಬಿಹಾರದ ಚುನಾವಣೆಯಲ್ಲಿ ಪಾಲ್ಗೊಂಡು ಪಕ್ಷವನ್ನು ಮುನ್ನಡೆಸಬೇಕು ಎಂದು ದೇವರಲ್ಲಿ ವಿಶೇಷ ಪೂಜೆಯನ್ನು ಗಣ್ಯಮಾನ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಸಂಗನಕಲ್ ವಿಜಯಕುಮಾರ್, ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಯರಗುಡಿ ಮಲ್ಲಯ್ಯ, ಪರಿಶಿಷ್ಟ ಪಂಗಡದ ಕೆಪಿಸಿಸಿ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಸತ್ಯನಾರಾಯಣ, ಬಳ್ಳಾರಿ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ಯರಕುಲಸ್ವಾಮಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಗುಜ್ಜಲ್ ಗಾದಿಲಿಂಲಿಗಪ್ಪ, ಕಾಂಗ್ರೆಸ್ ಪಕ್ಷದ ಮುಖಂಡ ಎ.ಕೆ.ಗಂಗಾಧರ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಬಳ್ಳಾರಿ ಜಿಲ್ಲಾ ಸದಸ್ಯ  ಮಲ್ಲಿಕಾರ್ಜುನ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಕಪ್ಪಗಲ್ ಓಂಕಾರ್, ಕಾಂಗ್ರೆಸ್ ಪಕ್ಷದ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಜೋಗಿನ ಚಂದ್ರಪ್ಪ, ಸಾಮಾಜಿಕ ಜಾಲತಾಣದ ರಾಜ್ಯ ಸಂಯೋಜಕ ನರೇಂದ್ರ, ಪರಿಶಿಷ್ಟ ಜಾತಿ ಮೋಕ ರೂಪನಗುಡಿ ಬ್ಲಾಕ್ ಸಮಿತಿ ಅಧ್ಯಕ್ಷ ನಾಗರಾಜು ಸೇರಿದಂತೆ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article