ಕಾಗವಾಡ : ಸೈಬರ್ ಭದ್ರತೆ ಎಂದರೆ ಸಂಘ ಸಂಸ್ಥೆಗಳು, ಉದ್ಯೋಗಿಗಳು ಮತ್ತು ಆಸ್ತಿಗಳನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸುವ ತಂತ್ರ ಮತ್ತು ವಿಧಾನವಾಗಿದೆ. ಇತ್ತೀಚಿಗೆ ಸೈಬರ್ ದಾಳಿಗಳು ಹೆಚ್ಚಾಗುತ್ತಿದ್ದು. ಈ ಕಾರಣಕ್ಕಾಗಿ ಸೈಬರ್ ಭದ್ರತೆ ಬಹಳ ಮುಖ್ಯವಾಗಿದೆ ಎಂದು ಅಥಣಿಯ ಕೆ.ಎ.ಲೋಕಾಪುರ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಜೆ.ಎಂ.ಕುಲಕರ್ಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಅವರು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರಾಯೋಜಿತ ಗಣಕಯಂತ್ರ ವಿಭಾಗ, ಅರ್ಥಶಾಸ್ತç ವಿಭಾಗ ಮತ್ತು ಎನ್‌ಎಸ್‌ಎಸ್ ಘಟಕಗಳಿಂದ ‘ಸೈಬರ್ ಅಪರಾಧ ಮತ್ತು ಜಾಗೃತಿ’ ವಿಷಯದ ಮೇಲೆ ಆಯೋಜಿಸಿದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಮುಂದುವರೆದು ಈ ಸೈಬರ್ ಭದ್ರತೆ ಇವತ್ತಿನ ಆನ್‌ಲೈನ್ ಜಗತ್ತಿನಲ್ಲಿ ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ ಎಂದರು. ಎಲ್ಲ ವಿದ್ಯಾರ್ಥಿಗಳು ಅಂತರ್ಜಾಲವನ್ನು ಬಳಸುವಾಗ ಜಾಗೃತಿಯಿಂದ ಆನ್‌ಲೈನ್ ಹಣದ ವ್ಯವಹಾರ ಮಾಡಬೇಕು. ಎಲ್ಲ ಸಾಫ್ಟವೇರ್ ಮತ್ತು ಅಪ್ಲಿಕೇಶನ್‌ಗಳನ್ನು ಸರಿಯಾಗಿ ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ.ಎಸ್.ಪಿ.ತಳವಾರ ಇವತ್ತಿನ ತಂತ್ರಜ್ಞಾನದ ಯುಗದಲ್ಲಿ ಸೈಬರ್ ದಾಳಿಗಳು ಮತ್ತು ಅದರಿಂದ ರಕ್ಷಿಸಿಕೊಳ್ಳಲು ಭದ್ರತೆಯ ಕ್ರಮಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.
ಆರಂಭದಲ್ಲಿ ಪ್ರೊ.ಎಸ್.ಎ.ಇನಾಮದಾರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಎ.ಎ.ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಎಸ್.ಡಿ.ಅಲಗೌಡರ ವಂದಿಸಿದರು. ಡಾ.ಚಂದ್ರಶೇಖರ ವೈ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ.ಬಿ.ಡಿ.ಧಾಮಣ್ಣವರ. ಡಾ.ಆರ್.ಎಸ್.ಕಲ್ಲೋಳಿಕರ, ಪ್ರೊ.ಎನ್.ಎಂ.ಬಾಗೇವಾಡಿ ಸೇರಿದಂತೆ ಮಹಾವಿದ್ಯಾಲಯದ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


