ಜೋಗ್ ಫಾಲ್ಸ್, ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಬಸ್ ಕಾರ್ಯಾಚರಣೆ

Ravi Talawar
ಜೋಗ್ ಫಾಲ್ಸ್, ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಬಸ್ ಕಾರ್ಯಾಚರಣೆ
WhatsApp Group Join Now
Telegram Group Join Now

ಬಳ್ಳಾರಿ,ಸೆ.08: ಬಳ್ಳಾರಿಯಿಂದ ಜೋಗ್ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ವಿಶೇಷ ವೇಗದೂತ ಸಾರಿಗೆ ಸೌಲಭ್ಯವನ್ನು ಬಳ್ಳಾರಿ ವಿಭಾಗದಿಂದ ಕಲ್ಪಿಸಲಾಗಿದೆ.
ಬಳ್ಳಾರಿಯಿಂದ ಬೆಳಿಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 02 ಗಂಟೆಗೆ ಜೋಗ್ ಫಾಲ್ಸ್ ಗೆ ತಲುಪಲಿದೆ (ವಯಾ ಬಳ್ಳಾರಿ-ಚಳ್ಳಕೆರೆ- ಚಿತ್ರದುರ್ಗ- ಚನ್ನಗಿರಿ- ಶಿವಮೊಗ್ಗ- ಸಾಗರ-ಜೋಗ್ ಫಾಲ್ಸ್). ಜೋಗ್ ಫಾಲ್ಸ್ ನಿಂದ ರಾತ್ರಿ 08 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 04 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- ರೂ.570.
ಈ ಸಾರಿಗೆಯು ಸೆ.13 ರಿಂದ ಪ್ರತಿ ಶನಿವಾರ ಮತ್ತು ಪ್ರತಿ ರವಿವಾರ ಕಾರ್ಯಾಚರಣೆ ಮಾಡಲಾಗುವುದು.

ಬಳ್ಳಾರಿಯಿಂದ ಬೆಳಿಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 01.15 ಕ್ಕೆ ಗೋಕಾಕ್ ಫಾಲ್ಸ್ ಗೆ ತಲುಪಲಿದೆ (ವಯಾ ಹೊಸಪೇಟೆ-ಕೊಪ್ಪಳ- ಗದಗ- ನವಲಗುಂದ- ನರಗುಂದ- ಹುಲಿಕಟ್ಟಿ- ಮನೊಳ್ಳಿ- ಯರಗಟ್ಟಿ- ಮಮದಾಪುರ). ಗೋಕಾಕ್ ಫಾಲ್ಸ್ ನಿಂದ ರಾತ್ರಿ 08 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 04 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- ರೂ.515.

ಈ ಸಾರಿಗೆಗೆ www.ksrtc.in ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.7760992163, 7760992164 ಮತ್ತು 7760992167 ಗೆ ಸಂಪರ್ಕಿಸಬಹುದು.
ಈ ವಿಶೇಷ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article