ಶಾಸಕ ಭರತ್ ರೆಡ್ಡಿಗಾಗಿ ಅಭಿಮಾನಿಗಳಿಂದ ಅಜ್ಮಿರ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

Ravi Talawar
ಶಾಸಕ ಭರತ್ ರೆಡ್ಡಿಗಾಗಿ ಅಭಿಮಾನಿಗಳಿಂದ ಅಜ್ಮಿರ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ
WhatsApp Group Join Now
Telegram Group Join Now
ಬಳ್ಳಾರಿ. ಆ. 05: ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿಯವರು ತಮಗೆ ದೊರೆತ ಪ್ರಥಮ ಅವಕಾಶದಲ್ಲಿ ಸರ್ವರು ಮೆಚ್ಚುವ ಜನಾನುರಾಗಿ ಜನ ನಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಮತ್ತು ಸಾರ್ವಜನಿಕರಿಗೆ ತಮ್ಮ ವೈಯಕ್ತಿಕ ಸೇವೆಯಿಂದ ಸಹ ನಗರದಲ್ಲಿ ಜನಸೇವೆ ಮಾಡುತ್ತಾ ತನ್ನ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುತ್ತಿದ್ದಾರೆ,  ಅವರಿಗೆ ಇನ್ನಷ್ಟು ಆಯುಷ್ಯ, ಆರೋಗ್ಯ ಮತ್ತು ಅಧಿಕಾರವನ್ನು ಕರುಣಿಸಲಿ ಎಂದು ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಹಲವು ಅಭಿಮಾನಿಗಳು ತಂಡ ಅಜ್ಮೀರ್ ದರ್ಗಾಕ್ಕೆ ತೆರಳಿ ವಿಶೇಷವಾದ ಪೂಜೆ ಪುರಸ್ಕಾರಗಳನ್ನು ನೆರವೇರಿಸಿದರು.
ಭರತ್‌ರೆಡ್ಡಿ ಹುಟ್ಟುತ್ತಲೇ ಅಗರ್ಭ ಶ್ರೀಮಂತ ಆದರೂ, ಅವರು ಸಮಾಜದ ತಳ ಸಮುದಾಯಗಳ ಬಡವರ ಕಷ್ಟಗಳನ್ನು ತಿಳಿದುಕೊಂಡು ಅವರಿಗೆ ಸಕಲ ರೀತಿಯಲ್ಲೂ ಸೇವೆ ಮಾಡುತ್ತಿದ್ದಾರೆ. ಮತ್ತು ಪ್ರತಿ ತಿಂಗಳು ತಪ್ಪದೆ ಸಲಾಂ ಬಳ್ಳಾರಿ ಹೆಸರಿನಲ್ಲಿ ನಗರದ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದುಕೊಂಡು ಸ್ಥಳದಲ್ಲಿ ಪರಿಹರಿಸಲು ಪ್ರಯತ್ನಿಸುತ್ತಾರೆ. ಅವರು ಶ್ರೀಮಂತ ಕುಟುಂಬದಲ್ಲಿದ್ದರೂ ಬಡ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಜನ ನಾಯಕನಾಗದೇ ಒಳ್ಳೆಯ ಜನಸೇವಕರಾಗಿದ್ದಾರೆ.
 ಸಾಕಷ್ಟು ಐಶ್ವರ್ಯ, ಆಯುಷ್ಯ ಪಡೆದಿರುವ ಅವರಿಗೆ ತಮ್ಮ ರಾಜಕೀಯ ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಅಧಿಕಾರವನ್ನು ಭಗಂತನು ಕರುಣಿಸಲೆಂದು ಈ ಸಂದರ್ಭದಲ್ಲಿ ದರ್ಗಾದಲ್ಲಿ ಭರತ್ ರೆಡ್ಡಿಯವರ ಹೆಸರಿನಲ್ಲಿ ಪೂಜೆಯನ್ನಸು ನೆರವೇರಿಸಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸೈಯದ್ ಗಫ್ಫರ್. ಖಾಜಾ. ಸೈಯದ್ ಅಜಾಮ್. ಮೊಹಮ್ಮದ್. ಸಲೀಂ. ಕಿರಣ್. ಕಲ್ಯಾಣ್. ಶಾಶವಲಿ. ಅನ್ವರ್. ನಬಿ ರಸೂಲ್. ಇರ್ಷಾದ್. ಸರ್ವರ್ ಸೇರಿದಂತೆ ಅನೇಕರಿದ್ದರು.
WhatsApp Group Join Now
Telegram Group Join Now
Share This Article