ಗದಗ ಅಗಷ್ಟ1: ಅಗಷ್ಟ 2 ರಂದು ಡಾ.ವೆಂಕಟೇಶರಾಥೋಡ್‍ಜಿಲ್ಲಾ ಸಮೀಕ್ಷಣಾಧಿಕಾರಿಗಳು ಮಾರ್ಗದರ್ಶನದಲ್ಲಿ ಶಿರಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ,ಶಿರಹಟ್ಟಿ ತಾಲೂಕಾ ಆರೋಗ್ಯಧಿಕಾರಿ ಡಾ.ಸುಭಾಶಚಂದ್ರದಾಯಗೊಂಡ, ಹಾಗೂ ಉಪತಹಶೀಲ್ದಾರ ಎಸ್.ಎಚ್.ಭಜಂತ್ರಿ ನೇತ್ರೃತ್ವದಲ್ಲಿ ಜಿಲ್ಲಾತಂಬಾಕುನಿಷೇಧ ಕೋಶ ಗದಗ, ಶಿರಹಟ್ಟಿ ತಾಲೂಕಾ ತನಿಖಾ ದಳ, ಪಟ್ಟಣದ ಬಸವೇಶ್ವರ ಸರ್ಕಲ್, ಬೆಳ್ಳಟ್ಟಿ ರೋಡ ಸ್ಥಳಗಳಲ್ಲಿ ಕೋಟ್ಪಾಕಾಯ್ದೆಉಲ್ಲಂಘನೆಯ ವಿರುದ್ಧ ವಿಶೇಷಕಾರ್ಯಾಚರಣೆ ಮಾಡಿ ತಂಬಾಕು ನಿಯಂತ್ರಣಕಾಯ್ದೆ ಕೋಟ್ಪಾ-2003 ರ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧಎಚ್ಚರಿಕೆ ನೀಡಿ ಒಟ್ಟು 34 ಪ್ರಕರಣ ದಾಖಲಿಸಿ ರೂ. 6100/- ದಂಡ ಸಂಗ್ರಹಿಸಲಾಯಿತು.
ಕೋಟ್ಪಾಕಾಯ್ದೆಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಆ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ ಹಾಗೂ ಕೆಲವು ಅಂಗಡಿಗಳ ಹಿಂದೆ ಧೂಮಪಾನಅನಧೀಕೃತ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕ್ರಮ ವಹಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಸಾರ್ವಜನಿಕರೊಂದಿಗೆ ಆ ಸ್ಥಳದ ಮಾಲಿಕ ಕೆಲಸಗಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವದು ಕಂಡುಬಂದಿದೆ, ತಂಬಾಕು ಉತ್ಪನ್ನಗಳ ಕಾಣುವಂತೆ ಪ್ರದರ್ಶೀಸುವುದು, ಅವುಗಳ ಕುರಿತುಜಾಹಿರಾತು ನಿಷೇಧ, 18 ವರ್ಷದೋಳಗಿನವರಿಗೆ ತಂಬಾಕು ನಿಷೇಧ ಕುರಿತು ನಾಮಫಲಕ ಬಿತ್ತರಿಸುವದು ,ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85% ರಷ್ಟು ಆರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯ, ಶಾಲಾ ಕಾಲೇಜು ಸುತ್ತ 100ಗಜದವರೆಗೆ ತಂಬಾಕು ನಿಷೇಧಎಲ್ಲಾ ಶಾಲಾಕಾಲೇಜುಗಳ ತಂಬಾಕು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ 100 ಗಜದೊಳಗಿನ ತಂಬಾಕು ಮಾರಾಟ ಬಳಕೆ ಸಂಪೂರ್ಣ ನಿಷೇಧಗೊಳಿಸಲಾಗಿದ್ದು ಮುಂದಿನ ದಿನಗಳಲ್ಲಿ ಅಂತಹ ಪ್ರಕರಣಕಂಡುಬಂದಲ್ಲಿಕಠಿಣ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಅದಕ್ಕೆಅವರೇ ನೇರಹೊಣೆಗಾರು ಎಂದು ಶಿರಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ತಿಳಿಸಿದರು.
ಈ ದಾಳಿಗಳಲ್ಲಿ ಜಿಲ್ಲಾತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಜಗದೀಶ ಕೊಡಿಹಳ್ಳಿ, ,ಪೊಲೀಸ್‍ಇಲಾಖೆಯÀ ಫಕೀರಸಾಬ ಲಮಾಣಿ ಐ.ಹೆಚ್ ಮುಲ್ಲಾ, ಜಿಲ್ಲಾತಂಬಾಕು ನಿಯಂತ್ರಣ ಕೋಶ ಸಾಮಾಜಿಕ ಕಾರ್ಯಕರ್ತೆ ಬಸಮ್ಮ ಚಿತ್ತರಗಿ,ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಳಿಗವಾಡ ಸುಭಾಶ್ ಹಾಜರಿದ್ದರು.