ಇಂಡಿ : ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿಯು ಸಂಶೋಧನೆ, ಪ್ರಾಯೋಗಿಕತೆ ಮತ್ತು ಸೃಜನಾತ್ಮಕ ಚಿಂತನೆಯಲ್ಲಿ ಅಡಗಿದೆ, ವಿಜ್ಞಾನ ಪ್ರಗತಿಯು ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಇಸ್ರೋ ವಿಜ್ಞಾನಿ ವಿಲಾಸ ರಾಠೋಡ ಹೇಳಿದರು.
ಅವರು ಪಟ್ಟಣದ ರಾಯಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಈ ವಿಜ್ಞಾನ ಪ್ರದರ್ಶನವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಭವವನ್ನು ನೀಡುವ ಜೊತೆಗೆ, ಅವರಲ್ಲಿ ವಿಜ್ಞಾನ ಮತ್ತು ಸಂಶೋಧನೆಗೆ ಒಲವು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಯಲ್ ಇಂಟರ್ ನ್ಯಾಶನಲ್ ಶಾಲೆಯ ಈ ಪ್ರಯತ್ನವನ್ನು ಖಂಡಿತವಾಗಿಯೂ ವಿದ್ಯಾರ್ಥಿಗಳ ಭವಿಷ್ಯದ ದೃಢ ಭಿತ್ತಿಯಾಗಿ ನಿಲ್ಲುತ್ತದೆ. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಅವಿಷ್ಕಾರ ಸಾಮರ್ಥ್ಯವನ್ನು ಮೆಚ್ಚಿ, ಈ ಯುವಕರು ಭವಿಷ್ಯದ ವಿಜ್ಞಾನಿಗಳು ಆಗಲಿದ್ದಾರೆ, ಅವರು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.
ಈ ವಿಜ್ಞಾನ ವಸ್ತು ರ್ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಅಂತರಿಕ್ಷ ಸಂಶೋಧನೆ, ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ಪರಿಸರ ಸಂರಕ್ಷಣೆ, ಮತ್ತು ನವೀನ ವಿದ್ಯುತ್ ಶಕ್ತಿಯ ಉಗಮಗಳು ಇತ್ಯಾದಿ ವಿಷಯಗಳ ಮೇಲೆ ತಮ್ಮ ವೈಜ್ಞಾನಿಕ ಮಾದರಿಗಳನ್ನು ಮತ್ತು ಪ್ರಾಜೆಕ್ಟ್ಗಳನ್ನು ಪ್ರಸ್ತುತಪಡಿಸಿದರು.
ಅಧ್ಯಕ್ಷತೆ ಸಿಆರ್‌ಪಿ ಪ್ರವೇಜ್ ಪಟೇಲ್ , ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಎಸ್. ಅಲಗೂರ ಜಿಒಸಿಸಿ ಬ್ಯಾಂಕ್ ಸದಸ್ಯ ಅಲ್ಲಾಬಕ್ಷ ವಾಲೀಕರ್, ಅರ್ಜುನ್ ಲಮಾಣಿ, ಹನುಮಂತ ಕಂಣದಿ, ಚಂಬಸಗೌAಡ, ಅಸ್ಲಾಂ ಪಟೇಲ್, ಮಹಮ್ಮದ್ ಗುಲ್ಬರ್ಗಾ, ಮತ್ತು ಇಂಡಿ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಟಿ. ಪಾಟೀಲ್, ಎಸ್.ವಿ. ಹರಳಯ್ಯಾ,, ಜೈರಾಮ್ ಚೌಹಾಣ್, ಇಂಡಿ ನೌಕರರ ಸಂಘದ ನಿರ್ದೇಶಕರಾದ ಅಬುತಾಲೀಬ್ ಹೊಸೂರು ಮತ್ತಿತರಿದ್ದರು.