ಬೋರ್ಡ್​ ಪರೀಕ್ಷೆ ವೇಳೆ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಎಸ್‌ಪಿ ನಾಯಕ ಅತ್ಯಾಚಾರ

Ravi Talawar
ಬೋರ್ಡ್​ ಪರೀಕ್ಷೆ ವೇಳೆ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಎಸ್‌ಪಿ ನಾಯಕ ಅತ್ಯಾಚಾರ
WhatsApp Group Join Now
Telegram Group Join Now

ಲಕ್ನೋ, ಮಾರ್ಚ್​ 18: ಬೋರ್ಡ್​ ಪರೀಕ್ಷೆ ವೇಳೆ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಸಮಾಜವಾದಿ ಪಕ್ಷದ ನಾಯಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಸಮಾಜವಾದಿ ಶಿಕ್ಷಕ ಸಭಾದ ಉಪಾಧ್ಯಕ್ಷ ಕೂಡ ಆಗಿದ್ದಾರೆ. ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿಯ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ, ಜನಾರ್ದನ್ ಯಾದವ್ ವಿರುದ್ಧ ಭಾನುವಾರ ತಡರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ತಿಳಿಸಿದ್ದಾರೆ.

ಮಾರ್ಚ್ 1 ರಂದು, ಬಾಲಕಿ ಗಣಿತ ಪರೀಕ್ಷೆ ಬರೆಯಲು ಶಾಲೆಗೆ ಹೋಗಿದ್ದಾಗ, ಯಾದವ್ ಆಕೆಯನ್ನು ಸಹಾಯ ಮಾಡುವ ನೆಪದಲ್ಲಿ ಕೋಣೆಗೆ ಕರೆದೊಯ್ದು ನಂತರ ಅತ್ಯಾಚಾರ ಎಸಗಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆತ ಆಕೆಗೆ ಬೆದರಿಕೆ ಹಾಕಿದ್ದ.

ಆಕೆ ಕೆಲ ಸಮಯದವರೆಗೆ ನಡೆದಿರುವ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಆಕೆ ಭಯದಿಂದ ಇರುತ್ತಿದ್ದಳು. ಇದನ್ನು ಗಮನಿಸಿದ ಪೋಷಕರು ಪದೇ ಪದೇ ವಿಚಾರಿಸಿದಾಗ ಆಕೆ ಬಾಯ್ಬಿಟ್ಟಿದ್ದಾಳೆ. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲಾಗಿದೆ.

WhatsApp Group Join Now
Telegram Group Join Now
Share This Article