ಬಳ್ಳಾರಿ,ಆ.೦೨: ನಗರದ ತಾಳೂರು ರಸ್ತೆಯ ೧೩ನೇ ಕ್ರಾಸ್ ಎಡಬದಿಯಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಎಟಿಎಂಅನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಶೋಭಾರಾಣಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಡಾ||ಶೋಭಾರಾಣಿ ಅವರು, ಪಿರ್ಯಾದುದಾರ ಖಾಜಾ ಮೈನುದ್ದೀನ್ ಎಂಬುವವರು ಜು.೩೧ರಂದು ಮಧ್ಯಾಹ್ನ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ, ಜು.೩೦ರ ರಾತ್ರಿ ೧೦ ಗಂಟೆಯಿAದ ಜು.೩೧ರ ಬೆಳಿಗಿನ ಜಾವ ೬ ಗಂಟೆಯ ಮಧ್ಯದಲ್ಲಿ ಬಳ್ಳಾರಿ ತಾಳೂರು ರಸ್ತೆ ೧೩ ನೇ ಕ್ರಾಸ್ ಪಕ್ಕದಲ್ಲಿರುವ ಎಸ್.ಬಿ.ಐ ಬ್ಯಾಂಕ್ ಎಟಿಎಂ ಮೇಷಿನ್ ಗ್ಲಾಸ್‌ವಾಲ್‌ನ್ನು ಇಟ್ಟಿಗೆಗಳಿಂದ ಹೊಡೆದು ಹಾಕಿ, ಎರಡು ಸಿ.ಸಿ. ಟಿ.ವಿ. ಕ್ಯಾಮರಾಗಳಾದ ಇನ್ ಹೋಲ್ ಕ್ಯಾಮರಾ ಮತ್ತು ಲಾಬಿ ಕ್ಯಾಮರಾ ಹೊಡೆದು ಎಟಿಎಂ ಮಿಷನ್‌ನಲ್ಲಿರುವ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾರೆಂದು ನೀಡಿದ ದೂರಿನ ಆಧಾರದ ಮೇಲೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: ೨೩೧/೨೦೨೫ ರೀತ್ಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಅವರು ವಿವರಿಸಿದರು. ಈ ಪ್ರಕರಣವನ್ನು ಬೇಧಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಪಿ. ರವಿಕುಮಾರ್‌ರವರ ಮುಂದಾಳತ್ವದಲ್ಲಿ
ಆರೋಪಿತರನ್ನು ಪತ್ತೆ ಮಾಡಲು ಸಿರುಗುಪ್ಪ ಉಪ-ವಿಭಾಗದ ಡಿ.ಎಸ್.ಪಿ. ಡಾ||ಸಂತೋಷ ಚವ್ಹಾಣ, ಬಳ್ಳಾರಿ ನಗರದ
ಡಿ.ಎಸ್.ಪಿ. ನಂದರೆಡ್ಡಿರವರ ನೇತೃತ್ವದಲ್ಲಿ ೫ ತಂಡಗಳನ್ನು ರಚಿಸಲಾಗಿತ್ತು.
ಈ ತಂಡಗಳಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ನ್ಸ್ಪೆಕ್ಟರ್ ಎನ್.ಸತೀಶ್, ಬಳ್ಳಾರಿ ನಗರ ಉಪ-ವಿಭಾಗದ
ಪೊಲೀಸ್ ಇನ್ಸ್ಪೆಕ್ಟರ್ ಐಯ್ಯನಗೌಡ ಪಾಟೀಲ್, ಸುಭಾಷ್ ಚಂದ್ರ, ಮಹಾಂತೇಶ, ರವಿಚಂದ್ರ, ಮಹಮ್ಮದ್ ರಫಿ,
ಪಿಎಸ್‌ಐಗಳಾದ ಹೊನ್ನಪ್ಪ, ಸುರೇಶಪ್ಪ ಎಎಸ್‌ಐಗಳಾದ ಶ್ರೀನಿವಾಸ, ಡಿ.ಕೃಷ್ಣ, ಪಿ.ಸಿ.ಗಳಾದ ಭೋವಿ ತಿಮ್ಮಪ್ಪ,
ಮಂಜುನಾಥ ಚಂದ್ರಶೇಖರ್, ತಿಮ್ಮಪ್ಪ, ಶಿವರಾಜ್, ದೊಡ್ಡ ಬಸವನಗೌಡ, ಹೆಚ್.ಸಿ.ಗಳಾದ ನಾಗರಾಜ, ಸರ್ದಾರ್, ಅನ್ವರ್,
ಪ್ರಶಾಂತ್, ಎಹೆಚ್‌ಸಿಗಳಾದ ಕೃಷ್ಣ, ಸಿ.ವಿಜಯಕುಮಾರ್, ರೇವಣ್ಣ ಮತ್ತಿತರರು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಣೆ
ಮಾಡಿ, ಈ ಪ್ರಕರಣ ದಾಖಲು ಆದ ೩೦ ತಾಸುಗಳ ಒಳಗಾಗಿ ಆರೋಪಿತಗಳಾದ ಜೆ. ಅವಿನಾಶ್ (೨೭), ಕೆ.ಜಿ.ಶಿವರಾಜ್
(೨೯), ಇವರನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಬಳಸಿದ ವಾಹನ, ಕೃತ್ಯಕ್ಕೆ ಬಳಸಿದ ಆಯುಧವನ್ನು ಜಪ್ತು ಮಾಡಿರುತ್ತಾರೆ ಎಂದು
ಎಸ್‌ಪಿ ಡಾ||ಶೋಭಾರಾಣಿ ವಿವರಿಸಿದರು.
ಆರೋಪಿಗಳನ್ನು ಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು
ಎಸ್.ಪಿ.ಡಾ||ಶೋಭಾರಾಣಿ ಘೋಷಿಸಿದ್ದಾರೆ.