ಬಿತ್ತನೆ ಬೀಜದ ದರ ಕಡಿಮೆ, ಕಾಳಸಂತೆ ನಿಯಂತ್ರಣಕ್ಕೆ ಆಗ್ರಹ

Ravi Talawar
ಬಿತ್ತನೆ ಬೀಜದ ದರ ಕಡಿಮೆ, ಕಾಳಸಂತೆ ನಿಯಂತ್ರಣಕ್ಕೆ ಆಗ್ರಹ
WhatsApp Group Join Now
Telegram Group Join Now
.
ಬೈಲಹೊಂಗಲ,29:  ಸರ್ಕಾರ ನೀಡುವ ರಿಯಾಯತಿ ದರದಲ್ಲಿ ನೀಡುವ ಬಿತ್ತನೆ  ಬೀಜದ ದರ ಕಡಿತಗೊಳಿಸಬೇಕು. ಖಾಸಗಿ ವ್ಯಾಪಾರಗಾರರು ಕಾಳ ಸಂತೆಯಲ್ಲಿ ಬಿತ್ತನೆ ಬೀಜವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವದನ್ನು ನಿಯಂತ್ರಣ, ಬೆಳೆ ಪರಿಹಾರ ತಾರತಮ್ಯ ಸರಿಪಡಿಸುವದು ಹಾಗೂ ಗ್ರಾಮೀಣ ಪ್ರದೇಶದಲ್ಲಿ  ನರೆಗಾ ಯೋಜನೆಯಡಿ ರೈತರಿಗೆ ಶೇ75 ರಷ್ಟು ಉದ್ಯೋಗ ನೀಡುವಂತೆ ಆಗ್ರಹಿಸಿ ಉಪವಿಭಾಗಧಿಕಾರಿಗಳ ಮುಖಾಂತರ ಕೃಷಿ ಹಾಗೂ ಕಂದಾಯ ಸಚಿವರಿಗೆ ಸಮಸ್ತ ರೈತರ ಪರವಾಗಿ ಬುಧವಾರ ಮನವಿ ಪತ್ರ ನೀಡಿದರು.
ಈ‌ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಮುಂಗಾರು ಮಳೆ ಪ್ರಾರಂಭವಾಗಿದೆ ಬಿತ್ತನೆ ಬೀಜದ ದರವನ್ನು ಶೇ 70ರಷ್ಟು ಹೆಚ್ಚಿಸಿರುವ ಸರ್ಕಾರದ ಕ್ರಮ ಖಂಡನೀಯ. ಈ ಹಿಂದೆ ಹೆಸರು 501 ರೂಪಾಯಿ ಇದ್ದರೆ ಈ ಬಾರಿ 805ಕ್ಕೆ ಹೆಚ್ಚಿಸಿದೆ. ಜೋಳ 202ರೂ ಇದ್ದರೆ  285 ರೂಪಾಯಿಗಳಿಗೆ ಹೆಚ್ಚಿಸಿದೆ ಇದೆ ರೀತಿ ಎಲ್ಲಾ ಬಿತ್ತನೆ ಕಾಳಗಳ ಬೆಲೆ ಏರಿಸಿ ಬರಗಾಲದಿಂದ ತತ್ತರಿಸಿದ ರೈತನ ಮೇಲೆ ಸರ್ಕಾರ ಗದಪ್ರಹಾರ ನಡೆಸಿರುವದು ಯಾವ ನ್ಯಾಯ. ತಕ್ಷಣ ಬಿತ್ತನೆ ಬೀಜದ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಬೀಜ ಖರೀದಿಸಿ ರೈತರ ಖಾತೆಗೆ ಹೆಚ್ಚಿನ ಹಣವನ್ನು ಮರಳಿಸಬೇಕು. ಬರಗಾಲದಿಂದ ತತ್ತರಿಸಿದ ರೈತ ಸಮುದಾಯ ಸಾಲದ ಸುಳಿಗೆ ಸಿಕ್ಕು ಆತ್ಮಹತ್ಯೆಯ ಹಾದಿ ಹಿಡಿಯುತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡದೆ ಕುಂಟು ನೆಪ ಹೇಳಿ ರೈತ ಆತ್ಮಹತ್ಯಾ ಪ್ರಕರಣಗಳನ್ನು ಕಸದ ಬುಟ್ಟಿಗೆ ಹಾಕಿ ಮೃತ ರೈತರ ಕುಟುಂಬಕ್ಕೆ ಸರ್ಕಾರ ಅನ್ಯಾಯವೆಸಗುತ್ತಿದೆ ತಕ್ಷಣ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ರೈತ ಕುಟುಂಬಕ್ಕೆ ‌ಪರಿಹಾರ‌ ನೀಡಬೇಕೆಂದು ಆಗ್ರಹಿಸಿದರು.
*ಮಾನ್ಯ ಮುಖ್ಯಮಂತ್ರಿಗಳೆ ರೈತರ ಬೀಜನೆ ಬಿತ್ತನೆಯ ದರ ಹೆಚ್ಚಳವನ್ನು ಸಮರ್ಥಿಸಿಕೊಳ್ಳುತ್ತಿರಿ. ಬೇರೆ ರಾಜ್ಯದಲ್ಲಿಕ್ಕಿಂತ ನಮ್ಮ ರಾಜ್ಯದಲ್ಲಿ ಕಡಿಮೆ ದರ ಇದೆ ಎನ್ನುವ ನಿಮ್ಮ ರೈತ ವಿರೊಧಿ ನೀತಿ ಖಂಡನೀಯ ಗೋವಾ, ಮಹಾರಾಷ್ಟ್ರ ರಾಜ್ಯದಲ್ಲಿ ಕಡಿಮೆ ದರದಲ್ಲಿ ದೊರೆಯುವ  ವಸ್ತುಗಳನ್ನ ರಾಜ್ಯದಲ್ಲಿ ನಿಮ್ಮ ಸರ್ಕಾರ ಅದೆ ದರದಲ್ಲಿ ನೀಡವ ಶಕ್ತಿ ಇದೆಯಾ? ಆಯಾ ರಾಜ್ಯದ ವ್ಯವಸ್ಥೆ ಆಯಾ ರಾಜ್ಯಕ್ಕೆ ಸಂಭಂಧಿಸಿದೆ.ರಾಜ್ಯದ  ರೈತ ಕುಲಕ್ಕೆ ಬರುವ ಕಿಸಾನ ಸಮ್ಮಾನ 4ಸಾವಿರ ರೂಪಾಯಿ, ರೈತರ ಮಕ್ಕಳ ರೈತ ವಿದ್ಯಾನಿಧಿ ನಿಲ್ಲಿಸಿ ಇಂದು ಬಿತ್ತನೆ ಬಿಜದ ದರವನ್ನು ಹೆಚ್ಚಿಸಿ ರೈತರಿಗೆ ಮಾಡುತ್ತಿರುವ ಅನ್ಯಾಯ ನಿಲ್ಲಿಸಿ.*
ರಾಜ್ಯ ರೈತ ಸಂಘ ಹಾಗೂ ಕೃಷಿ ಕೂಲಿ ಕಾರ್ಮಿಕರ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಮಾತನಾಡಿ,
ಕೆಲ ಖಾಸಗಿ ಬೀಜ ಗೊಬ್ಬರ ಮಾರಟಗಾರರು ಹತ್ತಿ ಬೀಜಗಳಾದ ಪುಲಿ, ಸುಪರ್ ಖಾಟ್ ದಂತಹ  ಕಂಪನಿ ಬೀಜಗಳ ಪಾಕೇಟಗಳ ದರ 850ರೂಪಾಯಿ‌ ಇದ್ದರು 2000ರೂ ರಿಂದ 2500ರೂಪಾಯಿಯವರೆಗೆ ಕಾಳ ಸಂತೆಯಳಲ್ಲಿ ಮಾರಾಟ ಮಾಡುತಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಜಾಣ ಕುರುಡರಾಗಿರುವದು ರೈತ ಸಮುದಾಯವನ್ನು ಸಾವಿನ ಕುಣಿಕೆಗೆ ತಳ್ಳುತಿದ್ದಾರೆ‌ ಇದನ್ನು ತಡೆಗಟ್ಟಲು ಕ್ರಮ ಕ್ರಮಕೈಗೊಳ್ಳಬೇಕು. – ಎಫ್.ಎಸ್.ಸಿದ್ದನಗೌಡರ,ಎ ಪಿ ಎಮ್ ಸಿ ಮಾಜಿ ಅಧ್ಯಕ್ಷರು
 2023ನೇ ಸಾಲಿನಲ್ಲಿ ಬೀಕರ ಬರಗಾಲವಿದ್ದು ರೈತರಿಗೆ ಸರಿಯಾದ ಪರಿಹಾರ ಹಾಕುವಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ವಹಿಸಿದ್ದಾರೆ. ಬೆಳೆ ಸಮಿಕ್ಷೆ ಮಾಡದೆ ಬೇಕಾ ಬಿಟ್ಟಿಮಾಡಿ, ರೈತರಿಗೆ ಬಿಡಿಗಾಸು ಜಮೆ ಮಾಡಿಲ್ಲ. ಕೆಲವರಿಗೆ ಅಲ್ಪ ಮೊತ್ತ ಜಮೆಯಾಗಿದೆ ಇದನ್ನು ತಕ್ಷಣ ಸರಿಪಡಿಸಿ  ರೈತರಿಗೆ ಪರಿಹಾರ ಧನ ಜಮೆ ಮಾಡಿಸಬೇಕೆಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕೆಲಸಕ್ಕೆ ಜನ ಸಿಗದ ಕಠಿಣ ಸ್ಥಿತಿ ಬಂದೊದಗಿದೆ. ಕೆಲಸಕ್ಕೆ ಜನ ಸಿಕ್ಕರೂ ಅವರ ದುಬಾರಿ ವೇತನ ನೀಡಲಾಗದೆ ರೈತರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ 75ರಷ್ಟು ನರೆಗಾ ಕಾರ್ಯವನ್ನು ಕೃಷಿ ನಿರತ ರೈತರಿಗೆ ನೀಡಬೇಕು. ಪ್ರತಿ ಎಕರೆಗೆ ಕನಿಷ್ಠ 20 ಕೆಲಸದ ದಿನಗಳನ್ನು ರೈತರಿಗೆ ನೀಡಬೇಕು. ಇಲ್ಲದಿದ್ದರೆ ರೈತರು ಕೃಷಿ ತ್ಯೇಜಿಸಿ ಬಂಡವಾಳ ಶಾಹಿಗಳಿಗೆ ಜಮಿನು ಮಾರಿ ಕೂಲಿ ಆರಿಸಿ ಪಟ್ಟಣಕ್ಕೆ ಬರಬೇಕಾಗುತ್ತದೆ.
 ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯಲ್ಲಿ ಮಾಡಿದ ಕೆಲಸಗಳನ್ನೆ ಪದೆ ಪದೆ ಮಾಡಿಸಿ ಬಿಲ್ ತಗೆಯುತ್ತಿರುವದು ಕೆಲ ವ್ಯಕ್ತಿಗಳಿಗೆ ಮತ್ತು ಅಧಿಕಾರಿಗಳಿಗೆ ಸರಳ ಮಾರ್ಗದಲ್ಲಿ ಹಣ ಗಳಿಸುವ ಉದ್ಯೋಗವಾಗಿದೆ ಎಂದು ಆಪಾದಿಸಿದರು. ಇದರ ಬಗ್ಗೆ ಎಲ್ಲಾ ಪಂಚಾಯತಿಗಳಲ್ಲಿ ನ್ಯಾಯಂಗ ತನಿಖೆಯಾಗಬೇಕು. ಇದರಿಂದ ಸಮಗ್ರ ಮಾಹಿತಿ ಹೊರಬರಲಿದೆ ಎಂದರು.
 ನರೇಗಾ ಕೃಷಿ ಚಟುವಟಿಕೆಯ ಮೇಲೆ‌ ಅತ್ಯಂತ ದುಷ್ಪರಿಣಾಮ‌ ಬಿರುತಿದ್ದು ಕೃಷಿ ನಿರತ ರೈತರ ಜೀವನ ದುಸ್ಥರವಾಗಿದೆ. ತಕ್ಷಣವಾಗಿ‌ ನರೆಗಾ ಯೋಜನೆಯನ್ನು ಕೃಷಿ ನಿರತ ರೈತರಿಗೆ ಒದಗಿಸಿ ಕೃಷಿ ಕೂಲಿಕಾರ್ಮಿಕರನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೋಹನ ವಕ್ಕುಂದ, ಮಹಾದೇವ ಕಲಭಾಂವಿ, ನಿಂಗಪ್ಪ ಚೌಡಣ್ಣವರ,  ಸುರೇಶ ಹೊಳಿ, ಘೂಳಪ್ಪ ಹೋಳಿ, ಮಹಾಂತೇಶ ವಿವೇಕಿ, ಗೌಡಪ್ಪ ಹೊಸಮನಿ, ಉದಯ ಕೊಟಬಾಗಿ, ಗೌಡಪ್ಪ ಪಾಟೀಲ, ಹಣಮಂತ ನಾಯಕ, ಉಳವಪ್ಪ ಕಲಭಾಂವಿ, ಮಡಿವಾಳಪ್ಪ ಬುಳ್ಳಿ, ಚನ್ನಪ್ಪ ಮಾದರ, ಚನ್ನಬಸಪ್ಪ‌ ಈಟಿ ಮುಂತಾದವರು ಇದ್ದರು.
WhatsApp Group Join Now
Telegram Group Join Now
Share This Article