ಬಳ್ಳಾರಿ ಅ 15. ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ ಎಫ್ ಐ) ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶ ಮತ್ತುರಾಜ್ಯ ಮಟ್ಟದ ಶೈಕ್ಷಣಿಕ ಜಾಥಾ 13.10.2025 ರಂದು ಸಂಜೆ 8ಕ್ಕೆ ಬಳ್ಳಾರಿಯನ್ನು ತಲುಪಿ 4 ಹಾಸ್ಟೆಲ್‌ಗಳ 300 ಹೆಚ್ಚು ವಿದ್ಯಾರ್ಥಿಗಳ ಸಮಾವೇಶಗೊಂಡು ಜಾಗವನ್ನು ಸ್ವಾಗತಿಸಿದರು. ಮರುದಿನ 14.10.2025 ರಂದು ಸರಳದೇವಿ ಸರ್ಕಾರಿ ಕಾಲೇಜಿನಿಂದ ಗಾಂಧಿಭವನದವರೆಗೆ ನೂರಾರು ವಿದ್ಯಾರ್ಥಿಗಳ ಮೆರವಣಿಗೆ ಮೂಲಕ ನಗರದ ಗಾಂಧಿ ಭವನವನ್ನು ತಲುಪಿ ಸಮಾವೇಶ ಮಾಡಲಾಯಿತು.
ಜಾಥಾದ ಉದ್ಘಾಟನೆಯನ್ನು ಸಾಹಿತಿಗಳಾದ ಅಬ್ದುಲ್ ಹೈ ತೋರಣಗಲ್ಲು ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕೋಮುದಾದ ವಿಷ ಬೀಜ ಬಿತ್ತಲಾಗುತ್ತಿದೆ. ನಾವು ದೇಶದಲ್ಲಿ ಎಲ್ಲಾರು ಅಣ್ಣ ತಮ್ಮ, ಅಕ್ಕ ತಂಗಿ, ಚಿಕ್ಕಪ್ಪ ಚಿಕ್ಕಮ್ಮ ಎಂದು ಭಾವಿಸಿ ಬದುಕುವಾಗ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಕೋಮುಭಾವನೆಯನ್ನು ಸೃಷ್ಟಿ ಮಾಡುತ್ತಿದ್ದಾರೆ.
ಇದಕ್ಕೆ ವಿದ್ಯಾರ್ಥಿಗಳು ಗಮನ ಕೊಡಬಾ ರದು. ಭಾರತ ಮಾತಕೀ ಜೈ ಎನ್ನುತ್ತೇವೆ ಅದೇ “ಇಂಕ್ವಿಲಾಬ್” ಎಂದಾಗ ಯಾರೂ ಮಾತಾಡದೆ ಮೌನವಾಗುತ್ತೇವೆ. ಯಾವ ಬ್ರಿಟಿಷ್‌ರು ಯಾವ ಘೋಷಣೆಗೆ ಬೆಚ್ಚಿಬೀಳುತ್ತದ್ದರರೊ ಅಂತಹಾ ಘೋಷಣೆ ಇವತ್ತು ನಮಗೆ ತಿಳಿದಿಲ್ಲ ಎಂದರೆ ನಮಗೆ ಸ್ವಾತಂತ್ರ್ಯ ಚಳುವಳಿಯ ಅರಿವಿಲ್ಲ ಎಂದಾಗುತ್ತದೆ. ಇಂತಹದ್ದನ್ನು SFI ಕಲಿಸಿ ವಿದ್ಯಾರ್ಥಿಗಳನ್ನು ಧೀರೋದಾತ್ತರ ಹೋರಾಟಕ್ಕೆ ಮುನ್ನುಗ್ಗುವಂತೆ ಮಾಡುತ್ತದೆ. ನೀವೆಲ್ಲಾ SFI ಸೇರಿ ಸಮಾಜದ ನೋವನ್ನು ಅರಿಯಬೇಕು ಎಂದರು.
ಡಾ.ದೊಡ್ಡಬಸರಾಜ ಮಾತಾಡಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪನಿಗಳ ಕೈಗೆ ಕೊಡಲೊರಟ ಶಿಕ್ಷಣ ವಿರೋಧಿಸಿ ಸರ್ಕಾರದ ವಿರುದ್ಧ ಈ ಶೈಕ್ಷಣಿಕ ಜಾಥ ನಡೆಯಲಿದೆ. ಹಾಸ್ಟೆಲ್‌ಗಳನ್ನು ಹೆಚ್ಚಿಸಬೇಕು ಮತ್ತು ಬಲಪಡಿಸಬೇಕು. ವಿದ್ಯಾರ್ಥಿಗಳ ಆಹಾರ ಬತ್ತೆಯನ್ನು 4500ರೂಗೆ ಹೆಚ್ಚಿಸಬೇಕು ಎಂದು ಜಾಥಾದ ಮಹತ್ವವನ್ನು ತಿಳಿಸಿದರು.
ಗಣೇಶ್ ರಾಥೋಡ್ ಮಾತಾಡಿ ಇಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದರ ವಿರುದ್ಧ ವಿದ್ಯಾರ್ಥಿಗಳಾದ ನಾವು ಎಚ್ಚರಗೊಳ್ಳಬೇಕಿದೆ ಇಲ್ಲದಿದ್ದರೆ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಾರೆ. ಹಗಲು ದರೋಡೆ ಮಾಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು ಎಂದರು.
DYFIನ ಜಿಲ್ಲಾ ಅಧ್ಯಕ್ಷರಾದ ಯರಿಸ್ವಾಮಿ ಅವರು ಮಾತಾಡಿ ಯುವಜನರ ಉದ್ಯೋಗವನ್ನು ಕಸಿಯಲಾಗುತ್ತದೆ. ಇದರ ವಿರುದ್ಧ ವಿದ್ಯಾರ್ಥಿ ಯುವ ಜನರು ದ್ವನಿ ಎತ್ತಬೇಕಿದೆ ಎಂದು ಜಾಥಕ್ಕೆ ಶುಭ ಕೋರಿದರು.
ಗ್ಯಾನೇಶ್ ಕಡಗದ ಅವರ ಮಾತಾಡಿ ಅಸಮಾನ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡುವ ಪ್ರಯತ್ನ ಮಾಡಬೇಕಿದೆ ಎಂದರು.
ಜಾಥಾದಲ್ಲಿ ಚಂದ್ರುರಾಥೋಡ್, ಅನಂತರಾಜು, ಸಂಜು, ಎಂ. ರಾಜೇಂದ್ರ ಪ್ರಸಾದ್, ಪ್ರದೀಪ್, ಹಾಗೂ ಬಳ್ಳಾರಿಯ ಸಂಗಾತಿಗಳು ಇದ್ದರು. ಜಾಥಾದ ನಿರ್ವಹಣೆ ವರದರಾಜು ಮಾಡಿದರು.