ನೈಋತ್ಯ ಮುಂಗಾರು ಇಂದು ಕೇರಳ ಪ್ರವೇಶ: ಈ ಬಾರಿ ಬಹುಬೇಗವೇ ಮಳೆ ಶುರು

Ravi Talawar
ನೈಋತ್ಯ ಮುಂಗಾರು ಇಂದು ಕೇರಳ ಪ್ರವೇಶ: ಈ ಬಾರಿ ಬಹುಬೇಗವೇ ಮಳೆ ಶುರು
WhatsApp Group Join Now
Telegram Group Join Now

ರೆಮಲ್ ಚಂಡಮಾರುತಪರಿಣಾಮ ನೈಋತ್ಯ ಮುಂಗಾರು ಸ್ವಲ್ಪ ವೇಗವಾಗಿ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ನೈಋತ್ಯ ಮುಂಗಾರು ಇಂದು ಕೇರಳ ಪ್ರವೇಶಿಸಲಿದ್ದು, ಅರುಣಾಚಲಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್​, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನದಲ್ಲಿ ಸಾಮಾನ್ಯವಾಗಿ ಜೂನ್​ 5ರಂದು ಮುಂಗಾರು ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ಬಹುಬೇಗವೇ ಮಳೆ ಶುರುವಾಗಲಿದೆ.

ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮುಂಗಾರು ಪ್ರವೇಶಿಸಲಿದೆ. 2017ರಲ್ಲಿ ಈ ವಿದ್ಯಾಮಾನ ನಡೆದಿತ್ತು ಮೋರಾ ಚಂಡಮಾರುತದ ಕಾರಣದಿಂದ ಪೂರ್ವ ಕೇಂದ್ರ ಬಂಗಾಳಕೊಲ್ಲಿಯಲ್ಲಿ ಮುಂಗಾರು ಮಾರುತ ರೂಪುಗೊಂಡಿತ್ತು. ಈ ಬಾರಿ ರೆಮಲ್ ಚಂಡಮಾರುತದಿಂದಾಗಿ ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗಲಿದೆ.

ಕಳೆದ ಒಂದು ವಾರದಿಂದ, ದೇಶದ ಪ್ರಮುಖ ಭಾಗಗಳು ತೀವ್ರ ಶಾಖದ ಅಲೆಯಿಂದ ತತ್ತರಿಸುತ್ತಿವೆ. ಉತ್ತರ ಮತ್ತು ಮಧ್ಯ ಭಾರತದ ದೊಡ್ಡ ಭಾಗಗಳು ಮೇ 29 ರಂದು ರಾಜಸ್ಥಾನದ ಚುರು ಮತ್ತು ಹರಿಯಾಣದ ಸಿರ್ಸಾದಲ್ಲಿ 50 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿತ್ತು ಮತ್ತು ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶವಿತ್ತು.

WhatsApp Group Join Now
Telegram Group Join Now
Share This Article