ಅ.26ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ ವಲಯ ವಿದ್ಯುತ್ ಬಳಕೆದಾರರ ಸಮಾವೇಶ 

Ravi Talawar
ಅ.26ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ ವಲಯ ವಿದ್ಯುತ್ ಬಳಕೆದಾರರ ಸಮಾವೇಶ 
WhatsApp Group Join Now
Telegram Group Join Now
ಬಳ್ಳಾರಿ: 14..ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ವತಿಯಿಂದ ದಕ್ಷಿಣ ಭಾರತ ವಲಯ ವಿದ್ಯುತ್ ಬಳಕೆದಾರರ ಸಮಾವೇಶವನ್ನು ಅ.26 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶವನ್ನು ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆಗೆ ವಿರುದ್ಧವಾಗಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಹೋರಾಟದ ಭಾಗವಾಗಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ ರಾಜ್ಯ ಕಾರ್ಯದರ್ಶಿ ಜ್ಞಾನಮೂರ್ತಿ.ವಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಗ್ರಾಹಕರ ಸಂಘಟನೆಗಳ ಪ್ರತಿನಿಧಿಗಳು, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರಗಳ ಹೋರಾಟಗಾರರು ಭಾಗವಹಿಸಲಿದ್ದಾರೆ.
ಸಮಾವೇಶವನ್ನು ಆಲ್ ಇಂಡಿಯಾ ಎಲೆಕ್ಟ್ರಿಸಿಟಿ ಕಂಜೂಮರ್ಸ್ ಅಸೋಸಿಯೇಷನ್  ಅಧ್ಯಕ್ಷ ಸ್ವಪನ್ ಘೋಷ್ ಅವರು ಉದ್ಘಾಟಿಸಲಿದ್ದಾರೆ. ಪ್ರಮುಖ ಅತಿಥಿಗಳಾಗಿ  ಎಂ.ಜಿ. ದೇವಸಹಾಯಂ (ಮಾಜಿ ಐಎಎಸ್‌ ಅಧಿಕಾರಿ, ಹರಿಯಾಣ ವಿದ್ಯುತ್ ಮಂಡಳಿಯ ಮಾಜಿ ಅಧ್ಯಕ್ಷರು), ವಡ್ಡೆ ಸೋಭನಾದ್ರಿಸ್ತರ ರಾವ್ (ಸಂಯುಕ್ತ ಕೃಷಿ ಮೋರ್ಚಾ ಸಂಚಾಲಕರು, ಮಾಜಿ ಸಂಸದರು ಮತ್ತು ಮಾಜಿ ಕೃಷಿ ಸಚಿವರು, ಆಂಧ್ರಪ್ರದೇಶ), ಎಸ್. ಗಾಂಧಿ (ಸಲಹೆಗಾರ, ಎಐಇಸಿಎ ಅಧ್ಯಕ್ಷರು, ತಮಿಳುನಾಡು ಪವರ್ ಎಂಜಿನಿಯರ್ಸ್ ಸೊಸೈಟಿ),  ಬಿ. ದಿಲೀಪನ್ (ಉಪಾಧ್ಯಕ್ಷರು, ಜನಕೀಯ ಪ್ರತಿರೋಧ ಸಮಿತಿ, ಕೇರಳ) ಮುಂತಾದವರು ಭಾಗವಹಿಸಲಿದ್ದಾರೆ.
ಎಐಇಸಿಎ ನ ಕಾರ್ಯಾಧ್ಯಕ್ಷ ಸಮರ್ ಸಿನ್ಹಾ, ಉಪಾಧ್ಯಕ್ಷ ಕೆ. ಸೋಮಶೇಖರ್, ಖಜಾಂಚಿ ಅಜಯ್ ಚಟರ್ಜಿ, ರಾಜ್ಯ ಕಾರ್ಯಕಾರಿ ಸದಸ್ಯೆ ದೀಪ ಮತ್ತು ಕರ್ನಾಟಕದ ಹಿರಿಯ ಸಂಘಟಕರಾದ ಕೆ. ವೇಣುಗೋಪಾಲ್ ಭಟ್ (ಪ್ರಧಾನ ಕಾರ್ಯದರ್ಶಿ, ಎಐಇಸಿಎ) ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ದಕ್ಷಿಣ ರಾಜ್ಯಗಳ ಸಂಘಟಕರು — ಜ್ಞಾನಮೂರ್ತಿ, ಸುಬ್ಬಾರೆಡ್ಡಿ, ಸುರೇಂದ್ರನ್, ಅನವರತನ್, ಶಿವಕುಮಾರ್, ಹೆಚ್. ಪಿ. ಶಿವಪ್ರಕಾರ್ ಮುಂತಾದವರೂ ಉಪಸ್ಥಿತರಿರುವರು.
ಸ್ಮಾರ್ಟ್ ಮೀಟರ್, ಪ್ರಿ-ಪೇಯ್ಡ್ ಮೀಟರ್ ಹಾಗೂ ಟಿಒಡಿ  ದರ ವ್ಯವಸ್ಥೆಗಳು ಜನವಿರೋಧಿ ಕ್ರಮಗಳಾಗಿದ್ದು, ಬಡ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರವನ್ನು ಹೇರುತ್ತವೆ. “ವಿದ್ಯುತ್ ಜನರ ಹಕ್ಕು, ಅದು ವ್ಯಾಪಾರದ ಸರಕಾಗಲು ಬಿಡಬಾರದು,” ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ.
ವಿದ್ಯುತ್ ಖಾಸಗೀಕರಣ ಕ್ರಮ, ದರ ಏರಿಕೆ, ನೌಕರರ ಗ್ರಾಚ್ಯುಟಿ ಹೊರೆ ಗ್ರಾಹಕರಿಗೆ ವರ್ಗಾವಣೆ, ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಉಂಟಾಗುತ್ತಿರುವ ಅಸಮಾಧಾನಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸಂಘಟನೆಯ ಪ್ರಕಾರ, ವಿವಿಧ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ವಿರೋಧಿ ಚಳುವಳಿಗಳು ವೇಗ ಪಡೆದುಕೊಂಡಿದ್ದು, ಹಲವಾರು ರಾಜ್ಯ ಸರ್ಕಾರಗಳು ಜನರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಯೋಜನೆಗಳಿಂದ ಹಿಂದೆ ಸರಿಯಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಕಾರ  ಸೋಮಶೇಖರ್ ಗೌಡ, ಜಿಲ್ಲಾ ಸಂಘಟನಕಾರ  ಗುರಳ್ಳಿರಾಜ ರಾಜು ಇದ್ದರು.
WhatsApp Group Join Now
Telegram Group Join Now
Share This Article