ಬಳ್ಳಾರಿ,ಅ15.. ವೀರ ಮದಕರಿ ನಾಯಕ ಜಯಂತಿಗೆ ತಮ್ಮೊಂದಿಗೆ ನಾನು ಈ ಜಯಂತಿಯ ಕಾರ್ಯಕ್ರಮಕ್ಕೆ ಬಂದಿದ್ದು ತುಂಬಾ ಹೆಮ್ಮೆ ಅನಿಸುತ್ತೆ. ವೀರ ಮದಕರಿ ನಾಯಕರವರ ಕಿಚ್ಚು ಕೇಳಿದರೆ ನಮ್ಮೆಲ್ಲರಿಗೆ ಮೈ ಜುಮ್ ಅನ್ನುತ್ತದೆ ಏಕೆಂದರೆ ಚಿತ್ರದುರ್ಗ ಕೋಟೆಯಲ್ಲಿ ಅವರು ಕುದುರೆ ಮೂಲಕ ಎದುರು ಬೆಟ್ಟವನ್ನು ಹತ್ತುವ ಧೈರ್ಯ ಶಾಲಿಯನ್ನು ಹೊಂದಿದ ಧೀರ ಅವರು, ಅವರು ಈ ಚಿತ್ರದುರ್ಗ ಕೋಟೆಯನ್ನು ಆಳಿದ ಮಹಾರಾಜರು ಎಂದು ಡಿಸಿಸಿ ಕಾರ್ಯದರ್ಶಿ ಹಾಗೂ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಈರನಗೌಡ ತಿಳಿಸಿದರು.
ನಗರದ ಹಾಲಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರ ಕಚೇರಿಯಲ್ಲಿ “ರಾಜಾ ವೀರ ಮದಕರಿ ನಾಯಕ” ರವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮಾತನಾಡಿದ ಅವರು, ನಾಗೇಂದ್ರನವರ ಬಗ್ಗೆ ಹೇಳಬೇಕಾದರೆ ಅವರು ಸರ್ವಧರ್ಮದ ಪ್ರೇಮಿಗಳು, ಅವರು ಎಲ್ಲ ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ಮನಸ್ಸು ಉಳ್ಳವರು, ಅವರು ಮದಕರಿ ವಂಶಸ್ಥರು, ನಾಯಕರು ಅವರನ್ನು ಯಾರು ಅಲ್ಲಾಡಿಸಲು ಸಾಧ್ಯವಿಲ್ಲ ಏಕೆಂದರೆ ಅವರ ಹಿಂದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಅವರ ಹಿಂದೆ ಇಡೀ ಕಾಂಗ್ರೆಸ್ ಭದ್ರಕೋಟೆ ಇದೆ, ಅಲ್ಲದೆ ಇದೇ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನೂರಕ್ಕೆ ನೂರರಷ್ಟು ರಾಜ್ಯದ ಮಂತ್ರಿಯಾಗಿ ನಾಗೇಂದ್ರ ರವರು ಬಂದೇ ಬರುತ್ತಾರೆ ಇದು ಶತಸಿದ್ಧ ಎಂದರು. ತಾವು ಯಾವುದೇ ರೀತಿಯ ಎದೆಗುಂದುವ ಅಗತ್ಯವಿಲ್ಲ, ಇದು ನನಗೆ ಗೊತ್ತಿದೆ ನಾನು ಈ ಮಾತನ್ನು ಹಾಲುಮತ ಸಮುದಾಯದ ಕುರುಬನಾಗಿ ಈ ವೇದಿಕೆ ಮುಂದೆ ತಿಳಿಸುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಜಗನ್, ವಿ.ಎನ್.ಶ್ರೀನಾಥ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸಂಗನಕಲ್ ವಿಜಯ್ ಕುಮಾರ್, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಚಂದ್ರಶೇಖರ್ ಆಚಾರ್, ಪಾಲಾಕ್ಷಿ, ಕಾಂಗ್ರೆಸ್ ಯುವ ಮುಖಂಡರುಗಳಾದ ನರೇಂದ್ರ, ವೈ.ಅರುಣ್ ಕುಮಾರ್, ಗುರು, ರುದ್ರ , ರಘು, ವಕೀಲ ಪರಶುರಾಮ್, ಗುತ್ತಿಗೆದಾರ ಬಸವರಾಜ್ ಹಾಗೂ ಮಹಿಳಾ ಮುಖಂಡರಾದ ಮಮತಾ, ನಾಗಲಕೆರೆ ಗೀತಾ, ರೇಡಿಯೋ ಪಾರ್ಕ್ ಕವಿತಾ, ಶಾಂತಿ ಸೇರಿದಂತೆ ಮುಂತಾದ ಯುವಕರು ಉಪಸ್ಥಿತರಿದ್ದರು.