ನೇಸರಗಿಯಲ್ಲಿ ಶೀಘ್ರದಲ್ಲಿ ಸಮುದಾಯ ಅರೋಗ್ಯ ಕೇಂದ್ರ ನಿರ್ಮಾಣ ಮಾಡಲು ಅಗ್ರಹ

Ravi Talawar
ನೇಸರಗಿಯಲ್ಲಿ ಶೀಘ್ರದಲ್ಲಿ ಸಮುದಾಯ ಅರೋಗ್ಯ ಕೇಂದ್ರ ನಿರ್ಮಾಣ ಮಾಡಲು ಅಗ್ರಹ
WhatsApp Group Join Now
Telegram Group Join Now

 

ನೇಸರಗಿ. ನೇಸರಗಿ ವಲಯ ಕೇಂದ್ರವಾಗಿದ್ದು, ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಹೊಂದಿ, ಹೊಬ್ಬಳಿ ಮಟ್ಟದ ದೊಡ್ಡ ಗ್ರಾಮವಾಗಿ, ಪೊಲೀಸ್  ಸಿ ಪಿ ಐ ಠಾಣೆ ಹೊಂದಿದ್ದು, ಅನೇಕ ಗ್ರಾಮಗಳ ಮುಖ್ಯ ವ್ಯಾಪಾರ, ವಹಿವಾಟು ಕೇಂದ್ರವಾಗಿ ಬೆಳೆಯುತ್ತಿದ್ದು, ಆದರೆ ಈ ಭಾಗದ ಜನತೆಗೆ ಸರ್ಕಾರದ ಅರೋಗ್ಯ ಭಾಗ್ಯ ಮಾತ್ರ ಇನ್ನೂ ಒದಗಿಲ್ಲ ಇಷ್ಟು ದೊಡ್ಡ ಗ್ರಾಮವಾದರೂ ಜಾಗೆಯ ಸಮಸ್ಯೆಯಿಂದ ಸಮುದಾಯ ಅರೋಗ್ಯ ಕೇಂದ್ರದ  ವ್ಯವಸ್ಥೆ ಆಗಿಲ್ಲ. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಇಲ್ಲಿನ ಎ ಪಿ ಎಮ್ ಸಿ ಆವರಣದಲ್ಲಿ 2 ಎಕರೆ ಜಾಗೆ ಅರೋಗ್ಯ ಕೇಂದ್ರ ಮಾಡಲು ಎ ಪಿ ಎಮ್ ಸಿ ಅಧಿಕಾರಿಗಳೊಂದಿಗೆ ಮಾತುಕತೆ ಅಗಿದ್ದು. ಅದನ್ನು ಪರಿಶೀಲನೆ ಮಾಡಿ ಅ ಇಲಾಖೆಯೊಂದಿಗೆ ಮಾತನಾಡಿ ಅರೋಗ್ಯ ಇಲಾಖೆಗೆ ಪಡೆದು ಆದಷ್ಟು ಬೇಗ ಸಮುದಾಯ ಅರೋಗ್ಯ ಕೇಂದ್ರ ಪ್ರಾರಂಭಿಸಬೇಕೆಂದು  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ  ಅವರಲ್ಲಿ ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಸಲ್ಲಿಸಿದರು.
   ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಬರಮ್ಮಣ್ಣ ಸತ್ತೇನ್ನವರ, ನಿಂಗಪ್ಪ ತಳವಾರ, ಚನಗೌಡ ಪಾಟೀಲ, ಸುರೇಶ ಅಗಸಿಮನಿ, ಪ್ರಕಾಶ ಮುಂಗರವಾಡಿ, ಯಲ್ಲಪ್ಪ ರೊಟ್ಟಿ, ಮಲ್ಲಪ್ಪ ಯತ್ತಿನಮನಿ
ಜ್ಞಾನದೇವ್ಸೇ ತುಮರಗುದ್ದಿ
ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article