ಶ್ರೀಮತಿ ಸಿಂಧೂರ ಯಶಸ್ವಿ ಚಿತ್ರೀಕರಣ 

Hasiru Kranti
ಶ್ರೀಮತಿ ಸಿಂಧೂರ ಯಶಸ್ವಿ ಚಿತ್ರೀಕರಣ 
WhatsApp Group Join Now
Telegram Group Join Now
     ಆರ್ ಅಂಡ್ ಆರ್ ಎಂಟರ್‌ಪ್ರೈಸಸ್ ಅಡಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್.ನಾಗೀರೆಡ್ಡಿ ನಿರ್ಮಾಣ, ಆರ್.ಅನಂತರಾಜು ನಿರ್ದೇಶನ ಮಾಡುತ್ತಿರುವ ‘ಶ್ರೀಮತಿ ಸಿಂಧೂರ’ ಸಿನಿಮಾದ ನಾಯಕ ವಿಜಯರಾಘವೇಂದ್ರ ಮತ್ತು ನಾಯಕಿ ಪ್ರಿಯಾಹೆಗಡೆ ಹಾಡಿನೊಂದಿಗೆ ಕುಶಾಲನಗರದಲ್ಲಿ ಕೊನೆ ದಿನದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
     ಹೆಸರೇ ಹೇಳುವಂತೆ ಇದೊಂದು ಕೌಟಂಬಿಕ ಕಥೆ ಜತೆಗೆ ದೈವಭಕ್ತಿ ಅಂಶಗಳನ್ನು ಒಳಗೊಂಡಿದೆ. ತಾರಾಗಣದಲ್ಲಿ ರೇಷ್ಮಾ.ವಿ.ಗೌಡ, ಪ್ರಸನ್ನಬಾಗೀನ, ಗಣೇಶ್‌ರಾವ್ ಕೇಸರ್‌ಕರ್, ಮಾನಸ ಸುಧೀರ್, ಮನೋಜ್, ರಿತೇಶ್, ಸ್ನೇಹಜಾಧವ್, ಮೈಸೂರು ರಮಾನಂದ್, ರೋಹಿತ್,ಅನುಪಮ, ನವನೀತ ಸೇರಿದಂತೆ ಕಲಾವಿದರ ದಂಡೇ ಇರಲಿದೆ.  ಅಲ್ಲದೆ ಬೀದರ್ ಮೂಲದ ಮಾರುತಿ, 6.4 ಎತ್ತರದ ವಿಶ್ವ ದೇಹದಾರ್ಡ್ಯ ಪಟು ಆಂಜನೇಯ ಸ್ವಾಮಿಯಾಗಿ ಕಾಣಿಸಿಕೊಂಡಿದ್ದಾರೆ.
     ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯಕ್ಕೆ ರಾಜೇಶ್‌ರಾಮನಾಥ್ ಗ್ಯಾಪ್ ನಂತರ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಕಾರ್ಯಕಾರಿ ನಿರ್ಮಾಪಕ ಆರ್.ಗಂಗಾಧರ್, ನೃತ್ಯ ಫೈವ್‌ಸ್ಟಾರ್ ಗಣೇಶ್. ಮೂಡಿಗೆರೆ, ಸಕಲೇಶಪುರ, ಕುಂದಾಪುರ ಸುಂದರತಾಣಗಳಲ್ಲಿ ಒಂದೇ ಹಂತದಲ್ಲಿ ಶೂಟಿಂಗ್ ನಡೆಸಲಾಗಿದೆ. ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ.
WhatsApp Group Join Now
Telegram Group Join Now
Share This Article