ಅನುರಾಗ್ ಹೊಸ ನಿರ್ಮಾಪಕರಿಂದ ಮಹೇಶ್ ಬಾಬು ನಿರ್ದೇಶನದಲ್ಲಿ  ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರ

Ravi Talawar
ಅನುರಾಗ್ ಹೊಸ ನಿರ್ಮಾಪಕರಿಂದ ಮಹೇಶ್ ಬಾಬು ನಿರ್ದೇಶನದಲ್ಲಿ  ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರ
WhatsApp Group Join Now
Telegram Group Join Now
     ಎ ಕ್ಲಾಸ್ ರಿಯಲ್ ಎಟರ್ಸ್ಸ್  ಸಂಸ್ಥಾಪರಾಗಿರುವ ಅನುರಾಗ್ ಆರ್  ಮೂಲತಃ ಬೆಂಗಳೂರಿನವರಾಗಿದ್ದಾರೆ. ಕಲೆ, ಸಿನಿಮಾ ಮೇಲಿನ ಒಲವು ಅವರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದೆ. ಈ ಮೂಲಕ ಚಿತ್ರರಂಗಕ್ಕೆ ಓರ್ವ ಸದಭಿರುಚಿ ನಿರ್ಮಾಪಕರ ಆಗಮನವಾಗಿದೆ. ಮಹೇಶ್ ಬಾಬುವರಂತಹ ದಿಗ್ಗಜ ನಿರ್ದೇಶಕರ ಜೊತೆ ಅವರೀಗ ಕೈ ಜೋಡಿಸಿದ್ದಾರೆ.
     ಎ ಕ್ಲಾಸ್ ಸಿನಿ ಫಿಲ್ಮಂಸ್ ಹಾಗೂ ಎಂಎಂಎಂ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ದಕ್ಷಿಣ ಭಾರತ ಪ್ರತಿಷ್ಠಿತ ಸ್ಟ್ಯಾಂಡಿ ಮೇಕರ್ಸ್ಸ್ ಎಂಎಂಎಂ ಗ್ರೂಪ್ಸ್ ನ ಒಡೆಯ ಮಿಥುನ್ ಕೆ ಎಸ್ ಕೂಡ ಅನುರಾಗ್ ಗೆ ಸಾಥ್ ಕೊಡುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡಿ ಅನುಭವವಿರುವ ಮಿಥುನ್ ಈಗ ಚಿತ್ರ‌ ನಿರ್ಮಾಣಕ್ಕಿಳಿದಿದ್ದಾರೆ.
      ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಸ್ಮೈಲ್ ಗುರು ರಕ್ಷಿತ್ ಈಗ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ ಆಕಾಶ್, ಅರಸು ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಚಿತ್ರದ ಮೂಲಕ ವೀರ ಮದಕರಿಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಚೊಚ್ಚಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ ಅದಕ್ಕೆ ಬೇಕಾಗಿರೋ ಸಂಪೂರ್ಣ ತಯಾರಿಯನ್ನು ಮಾಡಿಕೊಂಡಿದ್ದಾರೆ.  ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲಿರುವ ಚಿತ್ರತಂಡ, ಜೂನ್ 15ರಿಂದ ಶೂಟಿಂಗ್ ಶುರು ಮಾಡಲು ಪ್ಲಾನ್ ಹಾಕಿಕೊಂಡಿದೆ.
WhatsApp Group Join Now
Telegram Group Join Now
Share This Article