ಆಗಸ್ಟ್ ತಿಂಗಳಲ್ಲಿ ಭಾರತದಿಂದ 1.53 ಬಿಲಿಯನ್ ಡಾಲರ್ ಮೊತ್ತದಷ್ಟು ಸ್ಮಾರ್ಟ್​ಫೋನ್ ರಫ್ತು: ICEA ಪ್ರಕಟಣೆ

Ravi Talawar
ಆಗಸ್ಟ್ ತಿಂಗಳಲ್ಲಿ ಭಾರತದಿಂದ 1.53 ಬಿಲಿಯನ್ ಡಾಲರ್ ಮೊತ್ತದಷ್ಟು ಸ್ಮಾರ್ಟ್​ಫೋನ್ ರಫ್ತು: ICEA ಪ್ರಕಟಣೆ
WhatsApp Group Join Now
Telegram Group Join Now

ನವದೆಹಲಿ, ಸೆಪ್ಟೆಂಬರ್ 25: ಆಗಸ್ಟ್ ತಿಂಗಳಲ್ಲಿ ಭಾರತದಿಂದ 1.53 ಬಿಲಿಯನ್ ಡಾಲರ್ ಮೊತ್ತದಷ್ಟು ಸ್ಮಾರ್ಟ್​ಫೋನ್ ರಫ್ತು ಆಗಿದೆ ಎಂದು ಇಂಡಿಯಾ ಸೆಲೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ಹೇಳಿದೆ. ಕಳೆದ ವರ್ಷದ ಆಗಸ್ಟ್​ನಲ್ಲಿ (2024) ಆದ ರಫ್ತು 1.09 ಬಿಲಿಯನ್ ಡಾಲರ್​ನಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 39ರಷ್ಟು ಹೆಚ್ಚಾಗಿದೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಸ್ಮಾರ್ಟ್​ಫೋನ್ ಕಂಪನಿಗಳ ಹೊಸ ಉತ್ಪನ್ನಗಳ ಬಿಡುಗಡೆ ಇರುತ್ತವೆ. ಹಬ್ಬದ ಸೇಲ್ ಸೀಸನ್ ಕಾರಣ ಈ ಎರಡು ಮೂರು ತಿಂಗಳು ಸ್ಥಳೀಯವಾಗಿ ಸ್ಮಾರ್​ಟ್​ಫೋನ್​ಗಳಿಗೆ ಬೇಡಿಕೆ ಇರುತ್ತದೆ. ಹೀಗಾಗಿ, ಯಾವುದೇ ವರ್ಷದಲ್ಲೂ ಈ ಕೆಲ ತಿಂಗಳು ಸ್ಮಾರ್ಟ್​ಫೋನ್ ರಫ್ತು ಕಡಿಮೆಯೇ ಇರುತ್ತದೆ ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now
Share This Article