ಕಾಗವಾಡ:ತಾಲೂಕಿನ ಉಗಾರ ಬುದ್ರುಕ ಗ್ರಾಮದ ಆರೋಪಿ ನ್ಯಾಯವಾದಿ ತನ್ನ ಪತ್ನಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ. ಕಾಗವಾಡ ವಕೀಲರ ಸಂಘದ ವತಿಯಿಂದ ಸಭೆ ನಡೆಸಲಾಯಿತು.
ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಸಂಘದ ಅಧ್ಯಕ್ಷ ಪ್ರಕಾಶ ಕನ್ನಾಳ ಪ್ರದೀಪ ಕಿರಣಗಿ ತನ್ನ ಪತ್ನಿಯನ್ನ ಕ್ರೂರವಾಗಿ ಹತ್ಯೆ ಮಾಡಿದ್ದು ಅವನ ಪರ ನಮ್ಮ ಬೆಳಗಾವಿ ಜಿಲ್ಲೆ ವಕೀಲರು ಯಾರು ಸಹ ವಕಾಲತ್ತು ವಹಿಸುವುದಿಲ್ಲಾ. ಇನ್ನು ಅವನನ್ನು ನಮ್ಮ ಸಂಘದಿಂದ ಸದಸ್ಯತ್ವ ರದ್ದುಗೊಳಿಸಲಾಗಿದೆ. ಇನ್ನು ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರನ್ನು ಸಹ ತನಿಖೆ ಮೂಲಕ ಪತ್ತೆ ಹಚ್ಚಿ ಎಂದು ನಾವು ಆಗ್ರಹ ಮಾಡುತ್ತೇವೆ ಎಂದರು.
ಇನ್ನು ವಕೀಲರ ಸಂಘದವರು ಕಾಗವಾಡ ಪೊಲೀಸ್ ಠಾಣೆಗೆ ಬಂದು ಪಿಎಸ್ಐ ರಾಘವೇಂದ್ರ ಖೋತ ಅವರನ್ನ ಬೇಟಿ ಮಾಡಿ ತನಿಖೆಗೆ ಎಲ್ಲ ವಕೀಲರು ಸಹಕರಿಸುತ್ತೇವೆ ಎಂದು ಹೇಳಿದರು.ಹಾಗೇ ಅವನಿಗೆ ಕಠಿಣ ಕಾನೂನಿಡಿಯಲ್ಲಿ ಶಿಕ್ಷೆಗೆ ಒಳಪಡಿಸಿ ಎಂದು ಮನವಿ ಮಾಡಿದರು.ಉಪಾಧ್ಯಕ್ಷ ಮಹೇಶ ಪಾಟೀಲ,ಕಾರ್ಯದರ್ಶಿ ಚೆನ್ನು ಅಂಬೋಳಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು