ಸ್ಲ್ಯಾಬ್ ದರ ಪರಿಷ್ಕರಣೆ; ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂಗೆ ಏರಿಕೆ

Ravi Talawar
ಸ್ಲ್ಯಾಬ್ ದರ ಪರಿಷ್ಕರಣೆ; ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂಗೆ ಏರಿಕೆ
WhatsApp Group Join Now
Telegram Group Join Now

ನವದೆಹಲಿ, ಜುಲೈ 23: ನಿರೀಕ್ಷೆಯಂತೆ ಈ ಬಜೆಟ್​ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ದರಗಳನ್ನು ಪರಿಷ್ಕರಿಸಲಾಗಿದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಎಲ್ಲಾ ಬದಲಾವಣೆ ಮಾಡಲಾಗಿದೆ. ಹಳೆಯ ಟ್ಯಾಕ್ಸ್ ರೆಜಿಮೆ ದರ ಹಾಗೆಯೇ ಮುಂದುವರಿಯುತ್ತದೆ. ನ್ಯೂ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಮಿತಿ 3 ಲಕ್ಷ ರೂನಷ್ಟಿದೆ. ಮೂರರಿಂದ ಏಳು ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಇದೆ. ಈ ಹಿಂದೆ ಇದು 3ರಿಂದ 6 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಇತ್ತು. ಇದನ್ನು ಈಗ ಏಳು ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಹತ್ತು ಲಕ್ಷ ರೂ ಒಳಗಿನ ಆದಾಯಕ್ಕೆ ತೆರಿಗೆ ದರ ಕಡಿಮೆ ಮಾಡಲಾಗಿದೆ. ಏಳರಿಂದ 10 ಲಕ್ಷ ರೂವರೆಗಿನ ಆದಾಯಕ್ಕೆ ಶೆ. 10ರಷ್ಟು ತೆರಿಗೆ ಇದೆ. ಈ ಹಿಂದೆ ಇದು ಆರರಿಂದ ಒಂಬತ್ತು ಲಕ್ಷ ರೂವರೆಗಿನ ಆದಾಯಕ್ಕೆ ಶೇ. 10 ಇತ್ತು. ಇನ್ನುಳಿದಂತೆ 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಹಿಂದಿನ ಸ್ಲ್ಯಾಬ್ ದರಗಳೇ ಅನ್ವಯ ಆಗುತ್ತವೆ.

ಪ್ರಮುಖ ಬದಲಾವಣೆ ಎಂದರೆ ಸ್ಟ್ಯಾಂಡರ್ಡ್ ಡಿಡಕ್ಷನ್​ನದ್ದು. ಸಂಬಳದಾರರಿಗೆ 50,000 ರೂ ಇದ್ದ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 75,000 ರೂಗೆ ಹೆಚ್ಚಿಸಲಾಗಿದೆ. ಪಿಂಚಣಿದಾರರ ಪೆನ್ಸನ್ ಹಣಕ್ಕೆ ಇದ್ದ ಡಿಡಕ್ಷನ್ ಮಿತಿಯನ್ನು 15,000 ರೂನಿಂದ 25,000 ರೂಗೆ ಹೆಚ್ಚಿಸಲಾಗಿದೆ. ಇದು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಮುಂದುವರಿಯುತ್ತಿರುವವರನ್ನು ಹೊಸ ಟ್ಯಾಕ್ಸ್ ರೆಜಿಮೆಗೆ ಕರೆತರುವ ಪ್ರಯತ್ನವಾಗಿರಬಹುದು.

 

WhatsApp Group Join Now
Telegram Group Join Now
Share This Article