ಇಂಡಿ: ನಗರಸಭೆಯ ೨೦೨೬-೨೭ನೇ ಸಾಲಿನ ಆಯ-ವ್ಯಯ ಅಂದಾಜು ಬಜೆಟ್ ಕುರಿತು ಪೌರಾಯುಕ್ತ ಶಿವಾನಂದ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರರಂದು ಪೂರ್ವಭಾವಿ ಸಭೆ ಜರುಗಿತು.
ಈ ಸಭೆಯಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಗಣ್ಯ ವ್ಯಕ್ತಿಗಳಿಂದ ಸಲಹೆ ಸೂಚನೆ ಪಡೆದುಕೊಂಡರು. ನಂತರ ಪೌರಾಯುಕ್ತ ಶಿವಾನಂದ ಪೂಜಾರಿ ಮಾತನಾಡಿ ನಗರದ ಜನತೆ ಅಭಿವೃದ್ದಿಗಾಗಿ ತಾವೂ ಕೂಡಾ ಕೈ ಜೊಡಿಸಬೇಕು. ನೀರು, ಬಿದಿ ದೀಪ ಸೇರಿದಂತೆ ಇನ್ನಿತರ ಮೂಲ ಭೂತ ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ. ಈ ಹಿಂದೆ ಪುರಸಭೆಯಾಗಿತ್ತು ಶಾಸಕರ ಪರಿಶ್ರಮದಿಂದ ಇಂದು ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ್ದು ಸಂತಸದ ವಿಷಯವಾಗಿದೆ. ಅಲ್ಲದೆ ಈಗಾಗಲೆ ಕೇಲ ಒಳ ರಸ್ತೆ ಅಭಿವೃದ್ದಿ ಕಾರ್ಯಗಳಿಗೆ ನಮ್ಮ ಶಾಸಕರು ಚಾಲನೆ ನೀಡಿದ್ದಾರೆ. ಆದ್ದರಿಂದ ನಗರದ ಸರ್ವಾಂಗಿಣ ಅಭಿವೃದಿಗಾಗಿ ನಗರದ ಜನತೆ ನಮ್ಮ ಸಿಬ್ಬಂದಿಗಳಿಗೆ ಸಹಕಾರ ನೀಡುವುದು ಮುಖ್ಯ ಎಂದರು.
ಈ ಸಭೇಯಲ್ಲಿ ನಗರಸಭೆ ವ್ಯವಸ್ಥಾಪಕ ಪ್ರವಿಣ ಸೋನಾರ, ಕಂದಾಯ ಅಧಿಕಾರಿ ಸದಾಶಿವ ನಿಂಬಾಳಕರ, ಆರೋಗ್ಯ ನೀರಿಕ್ಷಕ ಎಲ್.ಎಸ್.ಸೋಮನಾಯಕ, ಅಕೌಂಟಂಟ ಅಸ್ಲಂ ಖಾದಿಮ, ಎನ.ಎಸ್,ರೂನಿಹಾಳ, ದಾವಲಸಾಬ ಶೇಖ, ಬಿ.ಜಿ.ನಾರಾಯಣಕರ, ಮಾಜಿ ಸದಸ್ಯರಾದ ಎಸ್.ಎಸ್.ಕರಕಟ್ಟಿ, ಅಯಾಜ ಟಾಂಗೆವಾಲೆ, ಮುಸ್ತಾಕ ಇಂಡಿಕರ ಹಾಗೂ ಮಹೇಬೂಬ ರೆವೂರಕರ, ರಿಯಾಜ ಬಾಗವಾನ, ಕೃಷ್ಣಾ ರಾಠೋಡ, ಸಶಸಹಿಕಲಾ ಭಾವಿಕಟ್ಟಿ, ನಾಗರತ್ನ ಕಾಂಬಳೆ, ಬೇಗಮ ಶೇಖ, ಫರದೋಶ ಮಕಾನದಾರ, ಶಬ್ಬಿರ ಖಾಜಿ, ರೇಖಾ ಧರಣ್ಣೇವರ, ಹುಚ್ಚಪ್ಪ ಕಾಲೆಬಾಗ ಸೇರದಂತೆ ಅನೇಕರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್ ೨೮ ಇಂಡಿ ೦೧: ನಗರಸಭೆಯ ೨೦೨೬-೨೭ನೇ ಸಾಲಿನ ಆಯ-ವ್ಯಯ ಅಂದಾಜು ಬಜೆಟ್ ಕುರಿತು ಪೌರಾಯುಕ್ತ ಶಿವಾನಂದ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರರಂದು ಪೂರ್ವಭಾವಿ ಸಭೆ ಜರುಗಿತು.
ನಗರದ ಸರ್ವಾಂಗಿಣ ಅಭಿವೃದಿಗಾಗಿ ಜನತೆ ಸಹಕಾರ ಮುಖ್ಯ : ಶಿವಾನಂದ ಪೂಜಾರಿ


