ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿಗೆ ಪರಿಗಣಿಸಬೇಡಿ : ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಒತ್ತಾಯ 

Ravi Talawar
ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿಗೆ ಪರಿಗಣಿಸಬೇಡಿ : ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಒತ್ತಾಯ 
WhatsApp Group Join Now
Telegram Group Join Now
 ಬಳ್ಳಾರಿ ಮೇ 09.: ಬೇಡಿ ಜಂಗಮರು ಸಮಾಜದಲ್ಲಿ ಮೇಲ್ ಜಾತಿಯವರೆಂದು ಗುರುತಿಸಿಕೊಂಡಿದ್ದು ಅವರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಾ ಅತ್ಯಂತ ಉನ್ನತ ಸ್ಥಾನದಲ್ಲಿ ಜೀವನ ನಡೆಸುತ್ತಿದ್ದಾರೆ, ಮತ್ತು ಅವರು ಶಾಖಾಹಾರಿಗಳಾಗಿದ್ದು ಈ  ಜನಾಂಗ ವೀರಶೈವ ಜಂಗಮ ಸಮುದಾಯದವರು ಎಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.
 ಆದರೆ ಈಗ ನಡೆಯುತ್ತಿರುವ ದಲಿತರ ಜಾತಿ ಗಣತಿಯಲ್ಲಿ  ತಮ್ಮ ಸಮುದಾಯವನ್ನೂ ಸಮೀಕ್ಷೆಗೆ ಒಳಪಡಿಸಿ ಎಂದು ಗಣಿತಿದಾರರನ್ನು  ಒತ್ತಾಯಿಸುವ ಮತ್ತು ಅವರ ಕರ್ತವ್ಯಕ್ಕೆ ಅಡಚಣೆಯುಂಟು ಮಾಡುವ ಕೆಲಸಗಳಿಗೆ ಮುಂದಾಗಿದ್ದಾರೆ ವೀರಶೈವ ಜಂಗಮರನ್ನು ಬೇಡಿ ಜಂಗಮ ಎಂದು ಪರಿಶಿಷ್ಟ ಜಾತಿ ಜನಗಣತಿಯಲ್ಲಿ  ಪರಿಗಣಿಸಬಾರದು  ರಾಜ್ಯ ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಒತ್ತಾಯಿಸಿದ್ದಾರೆ.
 ಅವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿ, ಈ ಹಿಂದೆ ಕರ್ನಾಟಕದಲ್ಲಿ ವೀರಶೈವ ಜಂಗಮರು ತಮ್ಮನ್ನು ‘ಬೇಡ ಜಂಗಮರು’ ಎಂದು ಕರೆದುಕೊಳ್ಳುತ್ತು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ವೀರಶೈವ ಜಂಗಮರು ‘ಬೇಡ ಜಂಗಮ’ ಎಂದು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದದ್ದನ್ನು ವಿರೋಧಿಸಿ ಆನೇಕ ಪ್ರತಿಭಟನೆಗಳು ನಡೆದ ನಂತರ ಪವರ್ಗವಾರು ಪಟ್ಟಿಯನ್ನು ಹೊರಡಿಸಿತು.
 ನಂತರ ಸರಕಾರದ ಅಧಿಸೂಚನೆ ಸಂಖ್ಯೆ ಸಕ-193 ಬಿಸಿಎ2017 ದಿ:27.01.2009ರಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬರದಿರುವ ಲಿಂಗಾಯತ/ವೀರಶೈವ, ವೀರಶೈವ ಪಂಚಮಶಾಲಿ ಮುಂಡಾದ ಉಪಜಾತಿಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿತು. ಹೀಗೆ ಸಾಮಾನ್ಯ ವರ್ಗಕ್ಕೆ ಸೇರಿಸಿದ ವೀರಶೈವ ಲಿಂಗಾಯತ ಉಪಜಾತಿಗಳಲ್ಲಿ ‘ವೀರಶೈವ ಜಂಗಮ’ ಸಮುದಾಯವೂ ಒಂದಾಗಿದೆ. ಸರಕಾರ ಈ ಆದೇಶವನ್ನು ಹೊರಡಿಸಿದ ನಂತರವೂ ಸದರಿ ವೀರಶೈವ ಜಂಗಮ ಸಮುದಾಯದವರು ವಾಮಮಾರ್ಗಗಳ ಮೂಲಕ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ ಮತ್ತು ಪಡೆಯುತ್ತಿದ್ದಾರೆ, ಇದರಿಂದ ನಿಜವಾದ ಬುಡ್ಗ ಜಂಗಮ ಅಥವಾ ಬೇಡಿ ಜಂಗಮರಾದ ನಮಗೆ ಅನ್ಯಾಯವಾಗುತ್ತಿದೆ ಯಾವುದೇ ಕಾರಣಕ್ಕೂ ವೀರಶೈವ ಜಂಗವರನ್ನು ಬೇಡಿ ಜಗಮ ಎಂದು ಪರಿಗಣಿಸಬಾರದು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
 ಅಷ್ಟೇ ಅಲ್ಲದೆ  ಜಂಗಮ ಸಮುದಾಯದವರು ತಾವು ‘ಬೇಡ ಜಂಗಮರು’ ಎಂದು ಪ್ರತಿಪಾದಿಸುವುದಕ್ಕಾಗಿ ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಕ್ರಮ ಸಂಖ್ಯೆ: 19ರಲ್ಲಿನ Beda Jangam. Budga Jangam ಎಂಬ ಸಮುದಾಯದಗಳ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದ ಪರಿಶಿಷ್ಟ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 19ರಲ್ಲಿನ Beda Jangam, Budga Jangam ಎಂಬ ಎರಡು ಹೆಸರುಗಳು (Synonyms) ಬುಡ್ಡ ಜಂಗಮ ಸಮುದಾಯದ ಹೆಸರುಗಳಾಗಿದೆ, ಕರ್ನಾಟಕದಲ್ಲಿರುವ ಬುಡ್ಗ ಜಂಗಮ (ವೇಷ ಹಾಕಿಕೊಂಡು ಭಿಕ್ಷೆ ಬೇಡುವ ಸಮುದಾಯ) ಸಮುದಾಯಕ್ಕೆ Beda Jangam. Budga Jangam 2 2 (Synonyms). ಬುಡ್ಗ ಜಂಗಮ ಸಮುದಾಯಕ್ಕೆ ಎರಡು ಪರ್ಯಾಯ ಹೆಸರುಗಳಿರುವುದನ್ನು ಮಾನವ ಕುಲಶಾಸ್ತ್ರೀಯ ಅಧ್ಯಯನ 8.2. . (: Singh, K.S.People of India. The scheduled castes National Series Vol-2, Anthropological Survey of India, Calcutta, 1992) ಇದಲ್ಲದೆ 19 ಮತ್ತು 20ನೇ ಶತಮಾನದಲ್ಲಿ ಮದ್ರಾಸ್ ಪ್ರಾಂತ್ಯದ ಜಾತಿ ಸಮುದಾಯಗಳನ್ನು ಅವಲೋಕನೆ  ಮಾಡಿದ ಎಡ್ಕರ್ ಥರ್ಸಟನ್ ಸಹ ವೇಷ ಹಾಕಿಕೊಂಡು ಭಿಕ್ಷೆ ಬೇಡುವ ಸಮುದಾಯವಾದ ಬುಡ್ಗ ಜಂಗಮ ಸಮುದಾಯಕ್ಕೆ ‘ಬೇಡ ಜಂಗಮ’ ಎಂಬ ಪರ್ಯಾಯ ಹೆಸರಿರುವುದನ್ನು ಗುರುತಿಸಿದ್ದಾರೆ. (ನೋಡಿ: Idgar Thurston and Rangachari. K. Castes and Tribes of Southern Indian. Vol.1, Madras: Government Press, 1909) ಇದಲ್ಲದೆ ಕರ್ನಾಟಕ ಸರಕಾರವು 2016ರಲ್ಲಿ ಕರ್ನಾಟಕದ ಪರಿಶಿಷ್ಟ ಜಾತಿಗಳಲ್ಲಿನ 49 ಅಲೆಮಾರಿ ಸಮುದಾಯಗಳನ್ನು ಗುರುತಿಸಿ ಅಧಿಕೃತ ಪಟ್ಟಿಯನ್ನು ಹೊರಡಿಸಿದೆ. ಸರಕಾರದ 4 : 2 10 22 2015 5. 2:12.01.2016) 2ರಲ್ಲಿ ಸರಕಾರವು ಬುಡ್ಗ ಜಂಗಮ ಸಮುದಾಯವನ್ನು ಪಟ್ಟಿ ಮಾಡಿದೆಯಲ್ಲದೆ, ಈ ಸಮುದಾಯನ ಕುಲಕಸಬುಗಳನ್ನು ‘ಹಗಲು ವೇಷ, ಬುದ್ರಕಲೆ, ಭೈರಾಗಿವೇಷ, ಕೊಂಡಮಾಮನ ಜ್ಯೋತಿಷ್ಯ, ಭಿಕ್ಷಾಟನೆ’ ಎಂದು ಉಲ್ಲೇಖಿಸಿದೆ.
ಆದರೆ ಕರ್ನಾಟಕದಲ್ಲಿರುವ ವೀರಶೈವ ಜಂಗಮರು ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 19ರಲ್ಲಿರುವ ‘ಬೇಡ ಜಂಗಮ’ ಸಮುದಾಯ ಎಂದರೆ ನಾವೇ ಎಂದು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತು ಈಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತಮ್ಮನ್ನೂ ಒಳಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ವೀರಶೈವ ಜಂಗಮರು ಅಲೆಮಾರಿ ಬುಡ್ಗ ಜಂಗಮರಂತೆ ಅಸ್ಪೃಶ್ಯರ ವೇಷ ಹಾಕಿಕೊಂಡು ಭಿಕ್ಷೆ ಬೇಡುವ ಸಮುದಾಯವಲ್ಲ, ಆದರೂ ಸಹ ಈ ವೀರಶೈವ ಜಂಗಮರು ತಾವು ‘ಬೇಡ ಜಂಗಮರು’ ಎಂದು ಹೇಳಿಕೊಳ್ಳುತ್ತಾ ನೈಜ ಪರಿಶಿಷ್ಟ ಜಾತಿಗೆ ಸೇರಿದ ಬುಡ್ಗ ಜಂಗಮ ಸಮುದಾಯ ಲಭ್ಯವಾಗಬೇಕಾದ ಸಾಂವಿಧಾನಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ.
 ನಾಗ ಮೋಹನ್ ದಾಸ್  ಆಯೋಗ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಸಮುದಾಯದ ಗಣತಿಯನ್ನೂ ಮಾಡಬೇಕೆಂದು ಒತ್ತಾಯಿಸಿ ಸಮೀಕ್ಷೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ತಮ್ಮಈ ಕಾರಣದಿಂದ ಸರಕಾರ ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಇವೆರಡೂ ಸದರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
 ಸರಕಾರವು ಈ ಕುರಿತು ತುರ್ತು ಕ್ರಮವಹಿಸದೇ ಇದ್ದಲ್ಲಿ ಆಯೋಗದ ಮೂಲಕ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತಾಂತ್ರಿಕವಾದ  ಪ್ರಮಾದವು ಸಂಭವಿಸುತ್ತದೆ. ಇದಲ್ಲದೆ ಶತಮಾನಗಳ ಕಾಲದಿಂದ ಅಸ್ಪೃಶ್ಯರಾಗಿಯೇ ಬಂದ ನೈಜ ಪರಿಶಿಷ್ಟ ಸಮುದಾಯವಾದ ಬುಡ್ಗ ಜಂಗಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ.ಮತ್ತು ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಸಂವಿಧಾನ ಕಲ್ಪಿಸಿರುವ ಸೌಲಭ್ಯಗಳು ಬುಡ್ಗ ಜಂಗಮ ಸಮುದಾಯಕ್ಕೆ ಸಿಗುವುದಿಲ್ಲ. ಈ ಕಾರಣದಿಂದಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ಮೂಲಕ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೇಯಲ್ಲಿ ವೀರಶೈವ ಜಂಗಮ ಸಮುದಾಯವನ್ನು ‘ಬೇಡ ಜಂಗಮ’ ಎಂದು ದಾಖಲಿಸಿಕೊಳ್ಳಬಾರದು ಎಂದು ನಾವು ವಿನಯಪೂರ್ವಕವಾಗಿ ಆಗ್ರಹಿಸುತ್ತಿದ್ದೇವೆ.
 ಈ ಸಂದರ್ಭದಲ್ಲಿ ಗಂಗಾಧರ, ಗೂಳಪ್ಪ ಅಗ್ನಿ, ಕೊಂಡಪ್ಪ ನಾಗೇಶ್ ಬಾಬು, ಅಜ್ಜಪ್ಪ ಸೇರಿದಂತೆ ಹಲವಾರು ಜನ ಬುಡ್ಗಜಂಗಮ ಸಮುದಾಯದ ಜನರಿದ್ದರು.
WhatsApp Group Join Now
Telegram Group Join Now
Share This Article