ಬಳ್ಳಾರಿ ಸೆ 30.: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ ನಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ ಇದು ಸುತ್ತಮುತ್ತಲ ಸುಮಾರು ಐವತ್ತು ಅರವತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳವಾಗಿದೆ ದುರಂತವೆಂದರೆ ಈ ಸಿರಿಗೆರಿ ಕ್ರಾಸ್ ನಲ್ಲಿ ಒಂದು ಬಸ್ ತಂಗುದಾಣವಾಗಲಿ ಮತ್ತು ಶೌಚಾಲಯವಾಗಲಿ ಇರುವುದಿಲ್ಲ ಇಲ್ಲಿ ಬಂದು ಹೋಗುವ ಪ್ರಯಾಣಿಕರಿಗೆ ಅತ್ಯಂತ ಮುಖ್ಯವಾಗಿ ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ಹಿರಿಯ ನಾಗರಿಕರಿಗೆ ಒಂದು ಬಸ್ ತಂಗುಧಾನ ಮತ್ತು ಶೌಚಾಲಯವನ್ನು ನಿರ್ಮಿಸಿ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಸಿರಿಗೇರಿ ಗ್ರಾಮ ಘಟಕದ ಅಧ್ಯಕ್ಷರಾದ ಸಿರಿಗೇರಿ ವಿರೂಪಾಕ್ಷಿ ಇಂದು ಬಳ್ಳಾರಿ ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸರತಿ ಸಾಲಿನಲ್ಲಿ ನಿಂತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಿರಿಗೇರಿ ಕ್ರಾಸ್ ನಲ್ಲಿ ಪ್ರತಿನಿತ್ಯ ನೂರಾರು ಬಸ್ಸುಗಳು ಸಂಚರಿಸುತ್ತಿದ್ದು ಜೊತೆಗೆ ಸಾವಿರಾರು ಪ್ರಾಣಿಗಳು ಸಹ ಬಂದು ಹೋಗುತ್ತಿದ್ದಾರೆ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಪ್ರಕೃತಿ ಕರೆ ಬಂದಲ್ಲಿ ಬಯಲು ಶೌಚಾಲಯ ಗತಿಯಾಗಿರುತ್ತದೆ ಬಯಲು ಶೌಚಾಲಯಕ್ಕೆ ಹೋಗಲು ಮುಜುಗರ ಪಟ್ಟ ಕೆಲವು ಹೆಣ್ಣು ಮಕ್ಕಳು ದಿನಗಟ್ಟಲೆ ಶೌಚಾಲಯಕ್ಕೆ ಹೋಗುವುದನ್ನು ಮುಂದೂಡಿ ತಮ್ಮ ತಮ್ಮ ಮನೆಗಳಿಗೆ ಹೋಗುವವರೆಗೂ ಕಾಯುತ್ತಾರೆ ಇದರಿಂದ ಅವರಿಗೆ ಹಲವು ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆ ಇರುತ್ತದೆ ಕೂಡಲೇ ಸಿರಿಗೇರಿ ಕ್ರಾಸ್ ನಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣ ಮತ್ತು ಶೌಚಾಲಯವನ್ನು ನಿರ್ಮಿಸಿಕೊಟ್ಟು ಈ ಪ್ರದೇಶದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಮನವಿ ಪತ್ರವನ್ನು ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸ್ಥಳದಲ್ಲಿದ್ದ ಸಿರುಗುಪ್ಪ ಶಾಸಕ ಬಿ ಎಂ ನಾಗರಾಜ್ ಅವರಿಗೆ ಮನವಿ ಪತ್ರವನ್ನು ನೀಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು, ಇದಕ್ಕೆ ಸ್ಪಂದಿಸಿದ ಶಾಸಕ ಬಿಎಮ್ ನಾಗರಾಜ್ಆದಷ್ಟು ಬೇಗನೆ ಸಿರಿಗೇರಿ ಕ್ರಾಸ್ ನಲ್ಲಿ ಬಸ್ ತಂಗುದಾಣ ಮತ್ತು ಶೌಚಾಲಯವನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ಸಿರಿಗೇರಿ ವಿರುಪಾಕ್ಷಿ ಪತ್ರಕರ್ತರಿಗೆ ಮಾಹಿತಿ ನೀಡಿದರು.


