ಕೊಪ್ಪಳ ಸಪ್ಟೆಂಬರ್ 3, ನ್ಯಾಯದ ಹರಿಕಾರ ಪ್ರವಾದಿ ಪೈಗಂಬರ್ ಮೊಹಮ್ಮದ್ (ಸ) ರವರ ಸೀರತ್ ಅಭಿಯಾನ 2025, ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಂದಿನಿಂದ ರಾಜ್ಯ ವ್ಯಾಪಿ ಏಕಕಾಲಕ್ಕೆ ಆರಂಭಗೊಂಡಿದೆ ಎಂದು ಕರ್ನಾಟಕ ಸಾಲಿಡಾರಿಟಿ ಯೂತ್ ಮೂಮೆಂಟ್ ಕಾರ್ಯದರ್ಶಿಯಾಗಿರುವ ಇಲಿಯಾಸ್ ನಾಲ್ ಬಂದ್ ರವರು ಹೇಳಿದರು,
ಅವರು ಬುಧವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಸೆ, 03 ರಿಂದ 14 ರವರೆಗೆ ರಾಜ್ಯವ್ಯಾಪಿ ಅಭಿಯಾನ ಆರಂಭಗೊಂಡಿದೆ,
ಅಭಿಯಾನದ ವಿವರ
ದಿ : 03 ರ ಬುದುವಾರದಂದು ಅಭಿಯಾನದ ಮೊದಲ ದಿನದ ಕಾರ್ಯಕ್ರಮವಾಗಿ ಕಾಗೋಷ್ಠಿ ಗೋಷ್ಠಿಗಳು ನಡೆಸುವುದು ಅದು ಆರಂಭ ಗೊಂಡಿದೆ, ಮುಸ್ಲಿಂ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಲಹಾ ಸಮಿತಿಯ ರಚನೆ ಮಾಡಲಾಗುವುದು
ದಿ : 05-ರ ಶುಕ್ರವಾರದಂದು “ಪ್ರವಾದಿ ಮುಹಮ್ಮದರನ್ನು (ಸ) ಅರಿಯಿರಿ” ಮತ್ತು ” ಭಾರತಿಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ (ಸ) ಆದರ್ಶದ ಔಚಿತ್ಯ” ಎರಡು ಪುಸ್ತಕಗಳ ಬಿಡುಗಡೆ ಕಾರ್ಯ ಕ್ರಮ ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗುವುದು,
ಸಾಹಿತಿಗಳು, ವೈದ್ಯರು, ಪ್ರೋಫೆಸರ್‌ಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಣ್ಯರನ್ನು ಭೇಟಿಯಾಗಿ ಅಭಿಯಾನದ ಪರಿಚಯಿಸಿ ಪುಸ್ತಕ ನೀಡುವುದು.
ಯು ಜಿ ಮತ್ತು ಪಿ ಜಿ ಮತ್ತು ಶಿಕ್ಷಕರಿಗಾಗಿ (ಪುರುಷ ಮತ್ತು ಮಹಿಳೆಯರು) ದಿ : 20- ರ ಶನಿವಾರರಂದು ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದೆ ಆಲಾ ಸಭಾಂಗಣದಲ್ಲಿ ಮಧ್ಯಾಹ್ನ 03-00 ಗಂಟೆಗೆ ಪ್ರಬಂಧ ಸ್ಪರ್ದೇ ಏರ್ಪಡಿಸಲಾಗಿದೆ ಎಂದು ವಿವರಿಸಿದರು
ಸಮಾಜಸೇವೆ ಸೆ 03 ರಿಂದ 14 ರವರೆಗೆ ಸಾರ್ವಜಿಕ ಸ್ಥಳ, ವಾರ್ಡ್‌ಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು.
ದಿ: 06-ರ ಶನಿವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಣೆ ಮತ್ತು ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಗುವುದು
ದಿ : 10 ರ ಬುದುವಾರದಂದು ವೃದ್ಧಾಶ್ರಮಕ್ಕೆ ಭೇಟಿ ನೀಡುವುದು.
ಭಾಗ್ಯನಗರ, ಮುನಿರಾಬಾದ, ಗಿಣಿಗೇರಾ, ಕಿನ್ನಾಳ, ಗೊಂಡಬಾಳ, ಕುದರಿಮೋತಿ-ಮಂಗಳೂರು, ಹಾಲಳ್ಳಿ, ಕೋಳೂರು, ಹನಕುಂಟಿ ಮತ್ತು ಲಾಚನಕೇರಾ ಗ್ರಾಮಗಳಲ್ಲಿ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್(ಸ) ಸೀರತ್ ಅಭಿಯಾನ -2025 ರ ಪರಿಚಯಿಸುವುದು. ಅಭಿಯಾನದ ಪ್ರಯುಕ್ತ ಸನ್ಮಾರ್ಗ ವಾರಪತ್ರಿಕೆ ವಿಷೇಶಾಂಕ ಬಿಡುಗಡೆ ಮಾಡಲಾಗುವುದು,
ಅಭಿಯಾನದ ಪ್ರಯುಕ್ತ ಮಹಿಳೆಯರಿಗಾಗಿರುವ ಅನುಪಮಾ ಮಾಸ ಪತ್ರಿಕೆಯಿಂದ ವಿಷೇಶಾಂಕ ಬಿಡುಗಡೆ ಗೊಳಿಸಲಾಗುವುದು
ಸೆಪ್ಟೆಂಬರ್ 03 ರಿಂದ 14 ರವರೆಗೆ ರಾಜ್ಯವ್ಯಾಪಿ ಅಭಿಯಾನ ವನ್ನು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಈ ಅಭಿಯಾನಕ್ಕೆ ಸಾರ್ವಜನಿಕರು ಪಾಲ್ಗೊಂಡು ಪ್ರೋತ್ಸಾಹ ನೀಡಿ ಅಭಿಯಾನವು ಯಶಸ್ವಿಯಾಗಲು ಸಹಕರಿಸಬೆಕೆಂದು ಕರ್ನಾಟಕ ಸಾಲಿದಾರಿಟಿ ಯೂತ್ ಮುಮೆಂಟ್ ಕಾರ್ಯದರ್ಶಿಯಾಗಿರುವ ಇಲಿಯಾಸ್ ನಾಲ್ಬಂದ್ ರವರು ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿ ಪ್ರಕಟಣೆ ಮೂಲಕ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಲು ಮನವಿ ಮಾಡಿ ಕೊಳ್ಳುತ್ತಾ ಸರ್ವರನ್ನು ಸ್ವಾಗತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದ ಅಧ್ಯಕ್ಷರಾದ ಸೈಯದ್ ಹಿದಾಯತ್ ಅಲಿ, ರಾಬ್ತಾ ಎ ಮಿಲ್ಲತ್ ಸಂಸ್ಥೆಯ ಅಧ್ಯಕ್ಷ ,ಎಂ ಲಾಯಕ್ ಅಲಿ, ಹ್ಯೂಮನ್ ರಿಲೀಫ್ ಸೊಸೈಟಿ ಪ್ರಾದೇಶಿಕ ಅಧ್ಯಕ್ಷ ,ಅಜಗರ್ ಖಾನ್ ಮತ್ತು ಸಾಲಿಡಾರಿಟಿ ಯೂಥ್ ಮುಮೆಂಟ್ ಕೊಪ್ಪಳ ಘಟಕದ ಅಧ್ಯಕ್ಷರಾದ ಏಜಾಜ್ ಅಹಮದ್ ಶರೀಫ್ ಸೇರಿರಂತೆ ಅನೇಕರು ಉಪಸ್ಥಿತರಿದ್ದರು,