ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಅವರು ಮಾತನಾಡುವಾಗ ಎಡವಿ ಸಾಕಷ್ಟು ವಿವಾದ ಮಾಡಿಕೊಂಡಿದ್ದು ಇದೆ. ಈಗ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್ ಸಿವಿಲ್ ಕೋಡ್) ಜಾರಿಗೆ ಬಂದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ದೇಶಾದ್ಯಂತ ಮಾಂಸಾಹಾರವನ್ನು ಬ್ಯಾನ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅವರ ಹೇಳಿಕೆ ಈಗ ಸಾಕಷ್ಟು ಟೀಕೆಗಳನ್ನು ಎದುರಿಸಿದೆ.
ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಬಗ್ಗೆ ಶತ್ರುಘ್ನ ಸಿನ್ಹಾಗೆ ಪ್ರಶ್ನೆ ಮಾಡಲಾಯಿತು. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘UCCನ ಉತ್ತರಾಖಂಡದಲ್ಲಿ ಪ್ರಾಥಮಿಕ ಹಂತದಲ್ಲಿ ಜಾರಿಗೆ ತಂದಿದ್ದು ಖುಷಿ ಇದೆ. ಇದು ದೇಶದಾದ್ಯಂತ ಬರಬೇಕು ಎಂಬುದು ನನ್ನ ಆಗ್ರಹ’ ಎಂದು ಅವರು ಹೇಳಿದ್ದಾರೆ.