ಜಮಖಂಡಿ;ತರಕಾರಿ ವ್ಯಾಪಾರಿಗಳಿಗೆಂದೆ ಸಿಂಧೂರ ಲಕ್ಷ್ಮಣ ಮಾರುಕಟ್ಟೆಯನ್ನು ಸಿದ್ಧಪಡಿಸಲಾಗಿದ್ದು ಮಾರುಕಟ್ಟೆ ಪ್ರದೇಶದ ಬೀದಿಬದಿ ಯಲ್ಲಿ ತರಕಾರಿ ಮಾರಾಟ ಮಾಡುವ ಪ್ರತಿಯೊಬ್ಬರೂ ಇದೇ ಸ್ಥಳದಲ್ಲಿ ತರಕಾರಿ ಮಾರಾಟ ಮಾಡಬೇಕು ಅದಕ್ಕಾಗಿ ಸಿದ್ಧತೆ ಮಾಡಲಾಗಿದೆ ಎಂದು ಪೌರಾಯುಕ್ತ ಜ್ಯೋತಿ ಗಿರೀಶ ಹೇಳಿದರು. ಬುಧವಾರ ಪೂರ್ವಾಹ್ನ ನಗರದ ಹಿಂದು ರುದ್ರಭೂಮಿ, ಕುಂಬಾರ ಕೆರೆ, ಸಿಂಧೂರ ಲಕ್ಷ್ಮಣ ಮಾರುಕಟ್ಟೆ ಪ್ರದೇಶಗಳಲ್ಲಿ ನಡೆದಿರುವ ಅಭಿವೃದ್ಧಿಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಾಗಿದೆ ಬೀದಿಬದಿ ವ್ಯಾಪಾರಿಗಳಿಂದ ದ್ವಿಚಕ್ರವಾಹನಗಳ ನಿಲುಗಡೆ, ಪುಟ್‌ಪಾತ್‌ಗೆ ಜಾಗವಿಲ್ಲ ದಂತಾಗಿದ್ದು ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಮಾರುಕಟ್ಟೆ ಪ್ರದೇಶಕ್ಕೆ ಸ್ಥಳಾಂತರಿಸಲಾಗುವದು ಎಂದು ತಿಳಿಸಿದರು, ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಹಣ್ಣು, ಹೂಗಳನ್ನು ಬೀದಿಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಚನ್ನಮ್ಮ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವದು ಎಂದು ಹೇಳಿದರು. ನಗರದ ಮಾರುಕಟ್ಟೆಯ ಮುಖ್ಯರಸ್ತೆಯಲ್ಲಿ ಜನದಟ್ಟಣೆ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಯ ವತಿಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಅಂದರೆ ನಗರದ ಅಭಿವೃದ್ಧಿಯ ಜೊತೆಗೆ ನಗರದ ಸೌಂದರೀ ಕರಣಕ್ಕೂ ಅನುಕೂಲ ವಾಗಲಿದೆ ಎಂದು ಹೇಳಿದರು. ನಗರದಲ್ಲಿರುವ ವೃತ್ತಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನಗರಸಭೆಯ ಆಸ್ತಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಶಾಶ್ವತವಾಗಿ ನಗರಸಭೆಗೆ ಆದಾಯ ತಂದುಕೊಡುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಿರವರಿಸಿದರು. ಕಿರಿಯ ಅಭಿಯಂತರರಾದ ಮೆಹಬೂಬ್‌ಜಾನ್. ಹಾಗೂ ಸಿಬ್ಬಂದಿಗಳಿದ್ದರು.


