ಯೋನಿಕ್ಸ್ ಸಂಸ್ಥೆಯ ಟೆಂಡರ್ ಪ್ರಕ್ರಿಯೆಯನ್ನು ಸರಳೀಕರಣ; ಇ-ಕಾಮರ್ಸ್ ಪೋರ್ಟಲ್ ಅನಾವರಣ

Ravi Talawar
ಯೋನಿಕ್ಸ್ ಸಂಸ್ಥೆಯ ಟೆಂಡರ್ ಪ್ರಕ್ರಿಯೆಯನ್ನು ಸರಳೀಕರಣ; ಇ-ಕಾಮರ್ಸ್ ಪೋರ್ಟಲ್ ಅನಾವರಣ
WhatsApp Group Join Now
Telegram Group Join Now

ಬೆಂಗಳೂರು: ಕಿಯೋನಿಕ್ಸ್ ಸಂಸ್ಥೆಯ ಟೆಂಡರ್ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇ-ಕಾಮರ್ಸ್ ಪೋರ್ಟಲ್ ಅನಾವರಣಗೊಳಿಸಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಕಿಯೋನಿಕ್ಸ್ ಕಚೇರಿಯಲ್ಲಿ ಇ-ಕಾಮರ್ಸ್ ಪೋರ್ಟಲ್ ಅನ್ನು ಅನಾವರಣಗೊಳಿಸಿದರು. ಇ-ಕಾಮರ್ಸ್ ಪೋರ್ಟಲ್ ಟೆಂಡರ್ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಸರ್ಕಾರದ ಬೇರೆ ಬೇರೆ ಇಲಾಖೆಗಳು ತಮಗೆ ಅವಶ್ಯವಾದ ಸಾಮಗ್ರಿಗಳನ್ನು ನಿಯಮಬದ್ಧವಾಗಿ ಹಾಗೂ ಪಾರದರ್ಶಕತೆಯಿಂದ ಕೂಡಿದ ದರಗಳಲ್ಲಿ ಕೊಳ್ಳಲು ಅನುಕೂಲವಾಗುವಂತೆ ‘ಕಿಯೋನಿಕ್ಸ್’ ಸಂಸ್ಥೆಯ ಇ-ಕಾಮರ್ಸ್ ಪೋರ್ಟಲ್ ಸಿದ್ಧಪಡಿಸಿದೆ.

ಸರ್ಕಾರದ ವಿವಿಧ ಇಲಾಖೆಗಳು ತಮಗೆ ಅವಶ್ಯವಾಗುವ ಸಾಮಗ್ರಿಗಳನ್ನು ಜಾಗತಿಕ ಸ್ಪರ್ಧಾತ್ಮಕ ದರಗಳಲ್ಲಿ ಹೊಂದಲು ಅನುಕೂಲವಾಗುವಂತೆ ಕಿಯೋನಿಕ್ಸ್‌ ಹೊಸ ಇ-ಕಾಮರ್ಸ್‌ ಪೋರ್ಟಲ್‌ನ್ನು ಸಿದ್ಧಪಡಿಸಲಾಗಿದೆ. ಕಂಪ್ಯೂಟರ್ ಆಧಾರಿತ ಆದೇಶ, ಪಾವತಿ, ವಿತರಣೆಯವರೆಗಿನ ಎಲ್ಲಾ ಹಂತಗಳು ಇ-ಕಾಮರ್ಸ್ ಪೋರ್ಟಲ್‌ನಲ್ಲಿ ತರಲಾಗಿದೆ. ಕಳೆದ ಎರಡು ವರ್ಷಗಳಿಂದ ಕಿಯೊನಿಕ್ಸ್‌ ಸಂಸ್ಥೆ ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳಿ

WhatsApp Group Join Now
Telegram Group Join Now
Share This Article