ಸಿಂಪಲ್‌ ಸುನಿ ಹೊಸ ಸಿನಿಮಾ ಮೋಡ ಕವಿದ ವಾತಾವರಣ  ಹೊಸ ಹೀರೋ  ಶೀಲಮ್

Ravi Talawar
ಸಿಂಪಲ್‌ ಸುನಿ ಹೊಸ ಸಿನಿಮಾ ಮೋಡ ಕವಿದ ವಾತಾವರಣ  ಹೊಸ ಹೀರೋ  ಶೀಲಮ್
WhatsApp Group Join Now
Telegram Group Join Now
       ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಖ್ಯಾತ ನಿರ್ದೇಶಕ ಸಿಂಪಲ್‌ ಸುನಿ ಇದೀಗ ಮತ್ತೊಬ್ಬ ಹೊಸ ಹೀರೋವನ್ನು ಸಿನಿಮಾಪ್ರೇಕ್ಷಕರ ಎದುರು ತರುತ್ತಿದ್ದಾರೆ. ಸುನಿ ಅವರ ಹೊಸ ಚಿತ್ರ ‘ಮೋಡ ಕವಿದ ವಾತಾವರಣ’ ಸಿನಿಮಾ ಮೂಲಕ ಶೀಲಮ್‌ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ.
      ನಿರ್ದೇಶಕ ಸುನಿ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ, ಸಣ್ಣ ಪುಟ್ಟ ಪಾತ್ರಗಳಲ್ಲೂ ಕಾಣಿಸಿಕೊಂಡಿರುವ ಶೀಲಮ್‌ ನ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ಕೊನೆ ದಿನದ ಚಿತ್ರೀಕರಣ ನಡೆಸಲಾಯಿತು.
     ಈ ಸಂದರ್ಭದಲ್ಲಿ ಮಾತನಾಡಿದ  ನಿರ್ದೇಶಕ ಸಿಂಪಲ್‌ ಸುನಿ “ಇದೊಂದು  ಸರಳ ಪ್ರೇಮಕಥೆಯ ನನ್ನ ಲೈಫ್‌ನಲ್ಲಿ ಬೇರೆ ರೀತಿ ಸಿನಿಮಾ. ನನ್ನ ಲೈಫ್‌ಗೇ ಬೂಸ್ಟ್‌ ಕೊಡ್ತು. ಇದಾದ ಬಳಿಕ ಕೈಗೆತ್ತಿಕೊಂಡಿರುವ ಸಿನಿಮಾವೇ ‘ಮೋಡ ಕವಿದ ವಾತಾವರಣʼ. ಹೊಸ ಹೀರೋ ನಮ್ಮ ಮನೆ ಮಗ. ಶಿಲಮ್‌ ನನ್ನ ಬ್ರದರ್” ಎಂದು ಮಾಹಿತಿ ನೀಡಿದರು.
     ನಟ ಶೀಲಮ್‌ “ಗುರುಪೂರ್ಣಿಮಾ ದಿನ ಸುನಿ ಸರ್‌ ತಮ್ಮ ಶಿಷ್ಯನನ್ನು ಲಾಂಚ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿರುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಟೆಕ್ನಿಷಿಯನ್‌ ದೊಡ್ಡ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಒಂದೊಳ್ಳೆ ಟೀಂ ಜೊತೆ ಲಾಂಚ್‌ ಆಗುತ್ತಿರುವುದು ಖುಷಿ ಇದೆ” ಎಂದರು.
      ನಟಿ ಸಾತ್ವಿಕಾ “ಇದು ನನ್ನ ಡ್ರೀಮ್‌ ಪ್ರಾಜೆಕ್ಟ್.‌ ಸುನಿ ಸರ್‌ ಜೊತೆ ಕೆಲಸ ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರ ಬಳಿ ಕಲಿಯುವುದು ತುಂಬಾನೇ ಇದೆ. ಈ ಜರ್ನಿಯಲ್ಲಿ ಬಹಳಷ್ಟು ಕಲಿತಿದ್ದೇನೆ. ಶೀಲಮ್‌ ಡಿಡಿಕೇಟರ್‌ ಆಕ್ಟರ್.‌ ಅವರು ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ” ಎಂದು ಹೇಳಿದರು.
     ‘ಮೋಡ ಕವಿದ ವಾತಾವರಣʼ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ರೀ-ರೆಕಾರ್ಡಿಂಗ್‌ ಕೆಲಸಗಳೆಲ್ಲ ಬಹುತೇಕ ಮುಗಿದು ಚಿತ್ರದ ರಿಲೀಸ್‌ಗೆ ತಯಾರಾಗಿದೆ.  ಸೈಂಟಿಫಿಕ್‌ ಫಿಕ್ಷನ್‌ ಪ್ರೇಮಕಥಾಹಂದರವನ್ನು ಹೊಂದಿರುವ ‘ಮೋಡ ಕವಿದ ವಾತಾವರಣʼವನ್ನು ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.‌  ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ವಿದೆ.
WhatsApp Group Join Now
Telegram Group Join Now
Share This Article