ಈದ್ ಮಿಲಾದ್ ಅಂಗವಾಗಿ: ಅಥಣಿಯ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸರಳ ಆಚರಣೆ

Pratibha Boi
ಈದ್ ಮಿಲಾದ್ ಅಂಗವಾಗಿ: ಅಥಣಿಯ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸರಳ ಆಚರಣೆ
WhatsApp Group Join Now
Telegram Group Join Now
ಅಥಣಿ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಅಥಣಿಯ ಮುಸ್ಲಿಂ ಸಮುದಾಯದವರು ವಿಶಿಷ್ಟ ರೀತಿಯಲ್ಲಿ ಹಬ್ಬವನ್ನು ಆಚರಿಸಿದರು. ಚಿಕ್ಕೋಡಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಆಸೀಫ್ ತಾಂಬೋಳಿ ಅವರ ನೇತೃತ್ವದಲ್ಲಿ, ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಡ ರೋಗಿಗಳು ಮತ್ತು ಬಾಣಂತಿಯರಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಸರಳತೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಸೀಫ್ ತಾಂಬೋಳಿ, ಮೊಹಮ್ಮದ್ ಪೈಗಂಬರ್ ಅವರ 1500ನೇ ಜಯಂತಿಯ ದಿನದಂದು, ಅಂಜುಮನ್-ಎ-ಇಸ್ಲಾಂ ಕಮಿಟಿ ಮತ್ತು ಫಾರೂಕಿ ಮಸೀದಿ ಜಮಾತ್ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಾಹನು ನಾಡಿನ ಸಮಸ್ತ ಜನರ ಮೇಲೆ ತನ್ನ ಅನುಗ್ರಹವನ್ನು ನೀಡಲಿ ಎಂದು ಈದ್ ಮಿಲಾದ್ ದಿನದಂದು ನಾನು ಪ್ರಾರ್ಥಿಸುತ್ತೇನೆ” ಎಂದರು.
ಮಸೀದಿಯ ಇಮಾಮ್ ಹಫೀಜ್ ಮಲಂಗ್ ಮಾತನಾಡಿ, ಮೊಹಮ್ಮದ್ ಪೈಗಂಬರ್ ಅವರು ಜನಿಸಿದ ಮತ್ತು ಇಹಲೋಕ ತ್ಯಜಿಸಿದ ದಿನವೂ ಇದೇ ಆಗಿದೆ. ಆದ್ದರಿಂದ, ಈದ್ ಮಿಲಾದ್ ದಿನವನ್ನು ಡಿಜೆ ಹಾಡುಗಳನ್ನು ಹಾಕಿ ಸಂಭ್ರಮಿಸುವುದಲ್ಲ, ಬದಲಾಗಿ ದೇವರ ಸ್ಮರಣೆ ಮಾಡುವ ಮೂಲಕ ಸರಳವಾಗಿ ಆಚರಿಸಬೇಕು. ಈ ಹಿನ್ನೆಲೆಯಲ್ಲಿ ಆಸೀಫ್ ತಾಂಬೋಳಿ ಅವರು ಹಣ್ಣು ಹಂಪಲುಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಷಯ” ಎಂದು ಶ್ಲಾಘಿಸಿದರು.
ಈ ಮಾನವೀಯ ಕಾರ್ಯಕ್ರಮದಲ್ಲಿ ರಿಯಾಝ್ ಸನದಿ, ಫರೀದ್ ಅವಟಿ, ಹಾಜಿ ಅಬೀದ್ ಮಾಸ್ಟರ್, ಡಾ. ಇಸ್ಮಾಯಿಲ್ ಮೊಮೀನ್, ಇರ್ಸಾದ್ ಮನಗೂಳಿ, ಝುಬೇರ್ ನಾಲಬಂದ, ಅಹೆತೇಶಾಮ್ ಖಾಜಿ , ಇಕ್ರಾಮ ತಿಗಡಿಕರ, ಉಮರ ನಾಲಬಂದ , ರಾಜು ಶೇಖ, ಶಾಹಿದ್ ಬೆಳಗಾಂವಕರ, ವಾಹೀದಮುಲ್ಲಾ, ಅಷ್ಪಾಕ್ ದ್ರಾಕ್ಷಿ, ಅರ್ಬಾಜ ಮೊಮಿನ್, ಸೊಹೆಲ್ ಹಿಪ್ಪರಗಿ, ಶೌಕತ್ ಚೌಧರಿ ಸೇರಿದಂತೆ ಹಲವು ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article