ಧಾರವಾಡ : ತಾಲೂಕಿನ ಮನಸೂರ ಗ್ರಾಮದ ರುದ್ರಭೂಮಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರಾದ ಸಿಲಿಕಾನ್ ಚೇಂಬರ್‌ನ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ನಡೆಯಿತು.
ಹಸ್ತಾಂತರ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರದೀಪ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗ್ರಾಮಪಂಚಾಯತ್‌ಗೆ ಸಿಲಿಕಾನ್ ಚೇಂಬರ್ ನಿರ್ವಹಣೆ ಬಗ್ಗೆ ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಕೆ.ಎಸ್.ಅಮ್ಮಿನಭಾವಿ, ಗ್ರಾಮ ಪಂಚಾಯತ ಸದಸ್ಯರು, ಹಿರಿಯರಾದ ಮಲ್ಲನಗೌಡ ಪಾಟೀಲ,
ಶಂಕರ, ತಾಲೂಕು ಗ್ರಾಮಾಂತರ ಯೋಜನಾಧಿಕಾರಿ ಮೇದಪ್ಪಗೌಡ ನಾವೂರು, ಮೇಲ್ವಿಚಾರಕ ಮಹಾದೇವ ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಿಲಿಕಾನ್ ಚೇಂಬರ್‌ನ ಹಸ್ತಾಂತರ ಕಾರ್ಯಕ್ರಮ
