ಸಿದ್ದು ಸವದಿ ಶಿಕ್ಷಣ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನ: ಮಹಾವೀರ ಪ್ರಭುಗಳು

Ravi Talawar
ಸಿದ್ದು ಸವದಿ ಶಿಕ್ಷಣ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನ: ಮಹಾವೀರ ಪ್ರಭುಗಳು
WhatsApp Group Join Now
Telegram Group Join Now

ರನ್ನ ಬೆಳಗಲಿ: ಜು.೧೬.,ಸಿದ್ದು ಸವದಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದಿ ಸಂಸ್ಥೆ ಬನಹಟ್ಟಿಯ ಶ್ರೀ ಪ್ರಭುಲಿಂಗೇಶ್ವರ ಇಂಟರ್ನ್ಯಾ?ನಲ್ ಶಾಲೆ ಚಿಮ್ಮಡ ಶಾಲೆಯಲ್ಲಿ ಸೋಮವಾರ ದಂದು “ದೇಶದ ಚಿತ್ತ ಯುವ ಜನರತ್ತ ” ಎಂಬ ವಿ?ಯದ ಮೇಲೆ ಉಪನ್ಯಾಸ ಕಾರ್ಯಕ್ರಮ ಜರುಗಿತು.

ದಿವ್ಯ ಸಾನಿದ್ಯ ವಹಿಸಿದಪೂಜ್ಯ ಶ್ರೀ ಮಹಾವೀರ ಪ್ರಭುಗಳು,ಸುಕ್ಷೇತ್ರ ಹಳಿಂಗಳಿ ಶ್ರೀಗಳು ಸವದಿಯವರ ಶೈಕ್ಷಣಿಕ ಕ್ಷೇತ್ರದ ಕೊಡುಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಒಬ್ಬ ಕೂಲಿ ಕಾರ್ಮಿಕನ ಮಗನು ಉತ್ತಮ ಶಿಕ್ಷಣ ಪಡೆಯಲು ಅನುಕೂಲಕರವಾಗುವಂತೆ ಎಲ್ಲಾ ರಂಗದಲ್ಲಿಯೂ ಕೂಡ ಅವಕಾಶ ಕಲ್ಪಿಸಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದಮಾನ್ಯ ಆರಳಿ ನಾಗರಾಜಅವರು ಮಕ್ಕಳನ್ನು ಉದ್ದೇಶಿಸಿ, ಶೈಕ್ಷಣಿಕ ಸಾಧನೆಗೆ ಶಿಸ್ತು ಬದ್ಧ ಜೀವನ, ತಂದೆ ತಾಯಿಯರ ಸೇವೆ ಜೊತೆಗೆ ನಿತ್ಯ ಮನೆ ಪಾಠವನ್ನು ಕಡ್ಡಾಯವಾಗಿ ಮಾಡಿಕೊಂಡು ಬರುವುದು, ಅಂದಿನ ಕೆಲಸವನ್ನು ಅಂದೆ ಪೂರ್ಣಗೊಳಿಸುವುದು ಉತ್ತಮ ವಿದ್ಯಾರ್ಥಿಯ ಲಕ್ಷಣವಾಗುತ್ತವೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಸಿದ್ದು ಸೌವದಿ ಶಾಸಕರು, ತೇರದಾಳ ಮತಕ್ಷೇತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾ?, ದೇಶ ದೇಶಾಭಿಮಾನದ ಕುರಿತು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆ ಆಡಳಿತ ಮಂಡಳಿಯವರಾದ ಬಾಬಗೌಡ ಪಾಟೀಲ, ಪ್ರಾಚಾರ್ಯರಾದ ರಮೇಶ ಪೂಜಾರಿ.ಮಾಹಾಂತೇಶ ಗೋಕಾಕ ಹಾಗೂ ವಿದ್ಯಾರ್ಥಿಗಳು,ಶಿಕ್ಷಕರು, ಪಾಲಕ,ಪೋ?ಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article