ರನ್ನ ಬೆಳಗಲಿ:ಸೆ. ೨೪.,ಪಟ್ಟಣದ ಶ್ರೀ ಬಂದಲಕ್ಷ್ಮೀ ಗದ್ದುಗೆ ಗುಡಿ ಆವರಣದಲ್ಲಿ ಮಂಗಳವಾರ ದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ ಹಾಗೂ ಶ್ರೀ ಆದಿಶಕ್ತಿ ಸೇವಾ ಸಂಘ ರನ್ನ ಬೆಳಗಲಿ ಆಶ್ರಯದಲ್ಲಿ ನವರಾತ್ರಿ ಸಾಂಸ್ಕೃತಿಕ ಸಂಭ್ರಮದ ಉದ್ಘಾಟನೆ ಜರುಗಿತು.
ಸಿದ್ದು ಸಾಂಗಲೀಕರ ನ್ಯಾಯವಾದಿ ಕಾರ್ಯಕ್ರಮ ಉದ್ಘಾಟಿಸಿ,ವೈಭವದ ನಮ್ಮೂರ ದಸರಾ ಮೈಸೂರು ಉತ್ಸವದಂತಾಗಲಿ ಎಂದು ಹೇಳುವುದರೊಂದಿಗೆ, ೯ ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ಎಲ್ಲಾ ನಾಗರಿಕರ ಸಹಕಾರ ಅತಿ ಮುಖ್ಯವಾಗಿದೆ. ರಾಜ್ಯ ಮತ್ತು ಅಂತರಾಜ್ಯ ಮಟ್ಟದ ಕಲಾವಿದರನ್ನು ಕರೆಸಿ ಅವರ ಪ್ರತಿಭೆಯನ್ನ ಗೌರವಿಸುವ ವೇದಿಕೆಯಾಗಿ ಬೆಳೆಯಲಿ ಎಂದು ತಿಳಿಸಿದರು.
ಮಹಾದೇವ ಕುಲಗೋಡ ಪತ್ರಕರ್ತರು ನವರಾತ್ರಿ ಉತ್ಸವವು ಯಶಸ್ವಿಯಾಗಿ ಪೂರ್ಣಗೊಳ್ಳಲಿ, ಎಲ್ಲಾ ಕಲೆಗಳ ಕಲಾವಿದರು ಈ ವೇದಿಕೆಯಿಂದ ಗುರುತಿಸುವಂತಾಗಲಿ ಎಂದು ತಿಳಿಸಿದರು.
ರುದ್ರಯ್ಯ ಸಾಲಿಮಠ ಸಾನಿಧ್ಯ ವಹಿಸಿದರು, ಅಧ್ಯಕ್ಷ ಮಹಾಲಿಂಗ ಪುರಾಣಿಕ, ಗೌರವ ಅಧ್ಯಕ್ಷ ಲಕ್ಕಪ್ಪ ಮೆಡ್ಯಾಗೋಳ,ಮಹಾದೇವ ಮುರನಾಳ,ಚಿನ್ನಪ್ಪ ಪೂಜಾರಿ, ಮುತ್ತಪ್ಪ ಸಿದ್ದಾಪೂರ, ಪ್ರಕಾಶ ಕೊಣ್ಣೂರ,ವಿಠ್ಠಲ ಜೀರಗಾಳ ಮತ್ತು ರಾಜಕುಮಾರ್ ಗಲಗಲಿ ಕಲಾತಂಡ, ಸಾರ್ವಜನಿಕರು ಉಪಸ್ಥಿತರಿದ್ದರು.