ಮಾತಂದರಿಂದ ವಿಘ್ನ : ಸಿದ್ದನಗೌಡರ ಖಂಡನೆ

Pratibha Boi
ಮಾತಂದರಿಂದ ವಿಘ್ನ : ಸಿದ್ದನಗೌಡರ ಖಂಡನೆ
WhatsApp Group Join Now
Telegram Group Join Now

ಬೈಲಹೊಂಗಲ: ಮದ್ದೂರಿನಲ್ಲಿ ವಿಘ್ನೇಶ್ವರನ ವಿಸರ್ಜನೆಯಲ್ಲಿ ಮಂತಾದರ ತಂದ ವಿಘ್ನವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಮಾಡಿರುವ ಅಮಾನುಷ ಪೊಲೀಸ್ ಲಾಠಿ ಚಾರ್ಜ ಖಂಡನೀಯ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ರಾಜ್ಯ ಸರ್ಕಾರದ ಕ್ರಮ ಖಂಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಸಮಯದಲ್ಲಿ ಯಾರು ಕಲ್ಲೆಸೆದರು ಎಂದು ಪೋಲಿಸ್ ಇಲಾಖೆ ತನಿಖೆ ಮಾಡಿ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆಯಾಗದಂತೆ ತಡೆಯುವದನ್ನು ಬಿಟ್ಟು ಕಲ್ಲೆಸೆದವರ ರಕ್ಷಣೆಗೆ ಸರ್ಕಾರ ನಿಂತಿರುವದನ್ನು ನೋಡಿದರೆ ಇದೆನು ಪೋಲಿಸ್ ರಾಜ್ಯವೆ? ಅಥವಾ ಪ್ರಜಾಪ್ರಭುತ್ವ ರಾಜ್ಯವೆ ಸಂಶಯವಾಗಿದೆ.
ಕಲ್ಲು ಹೊಡೆಯುವವರಿಗೆ ರಕ್ಷಣೆ ಕೊಡಲಾಗುತ್ತದೆ. ಕಲ್ಲು ಹೊಡೆದುದನ್ನು ಪ್ರಶ್ನೆ ಮಾಡಿದ ಬಾಲಕಿಯ ಮೇಲೆ ಪೋಲಿಸ್ ಪೇದೆಲಾಠಿ ಚಾರ್ಜ್ ಮಾಡಿದ್ದು ಅಕ್ಷ್ಯಮ್ಯ ಅಪರಾಧವಾಗಿದ್ದು ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬುವದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಪೋಲಿಸರ ಮೇಲೆಯೂ ಕಲ್ಲು ಬಿದ್ದಿವೆ ಅವರು ಪೇಟ್ಟು ತಿಂದಿದ್ದಾರೆ ಆದರು ಇದರ ತನಿಖೆ ಮಾಡದೆ ಪ್ರತಿಭಟನೆ ನಿರತ ಅಮಾಯಕರ ಮೇಲೆ ಲಾಠಿ ಚಾರ್ಜ ಯಾವ ರೀತಿಯ ಮಾನವೀಯತೆ ಇರುವ ಸರಕಾರ ಇದು. ಧಾರ್ಮಿಕ ಆಚರಣೆಯಲ್ಲಿ ಬಂದೋಬಸ್ತ್ ಏರ್ಪಡಿಸಲು ಯೋಗ್ಯತೆ ಇಲ್ಲವೆಂದಾದರೆ ಗೃಹ ಸಚಿವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಾರೆ.
ಈ ಸರಕಾರ ಪೊಲೀಸರ ಕೈಯನ್ನು ಕಟ್ಟಿ ಹಾಕುತ್ತಿದೆ. ಪೊಲೀಸರಿಗೆ ಸರಿಯಾಗಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಈ ಸರಕಾರ ಬಿಡುತ್ತಿಲ್ಲ. ಸ್ವತಂತ್ರವಾಗಿ ತನಿಖೆ ಮಾಡಲು ಈ ಸರಕಾರ ಬಿಡುತ್ತಿದೆಯೇ ಎಂಬ ಸಂಶಯವಿದೆ.
ಪೊಲೀಸ್ ಮ್ಯಾನುವಲ್ ಮೂಲಕ ಬಂದೋಬಸ್ತ್ ಕರ್ತವ್ಯದ ಯೋಜನೆ ಆಗುತ್ತಿಲ್ಲ. ತುಷ್ಟೀಕರಣದ ಪರಾಕಾಷ್ಠೆಗೆ ಹೋಗಿ, ಹಿಂದೂ ಧಾರ್ಮಿಕ ಸಂಸ್ಥೆಗಳು, ಹಿಂದೂ ಧಾರ್ಮಿಕ ಆಚರಣೆಗಳನ್ನು, ಹಿಂದೂ ಭಾವನೆಗಳನ್ನು ಕೆದಕುವ ದುಷ್ಟ ಶಕ್ತಿಗಳಿಗೆ ಪ್ರಚೋದನೆ ನೀಡುತ್ತಿದೆ. ಅದರ ಪರಿಣಾಮವಾಗಿ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆದಿದೆ. ಇದು ಹಿಂದೂವಿರೋಧಿ ಸರಕಾರ. ಕಾನೂನು ಸುವ್ಯವಸ್ಥೆ ಕುಸಿದು ಹೋಗಿರುವ ಸರಕಾರ, ರಾಜಾರೋಷವಾಗಿ ಕಾನೂನಿನ ದುರ್ಬಳಕೆ ನಡೆಸುವ ಸರಕಾರ ಎಂದು ದೂರಿದರು.
ಪೊಲೀಸರು ತಮ್ಮ ಕರ್ತವ್ಯ ಮಾಡುವುದನ್ನು ಮರೆತು ರಾಜಕೀಯ ಅಣತಿಯಂತೆ ಕುಣಿಯುವ ಅನಿವಾರ್ಯತೆ ರಾಕ್ಯದಲ್ಲಿ ಸೃಷ್ಟಿಯಾಂದತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Share This Article