ವಯನಾಡಿನ ಸಂತ್ರಸ್ತರಿಗೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ತಲಾ 100 ಮನೆ ವಾಗ್ದಾನ: ಪಿಣರಾಯಿ ವಿಜಯನ್

Ravi Talawar
ವಯನಾಡಿನ ಸಂತ್ರಸ್ತರಿಗೆ  ಸಿದ್ದರಾಮಯ್ಯ, ರಾಹುಲ್ ಗಾಂಧಿ ತಲಾ 100 ಮನೆ ವಾಗ್ದಾನ: ಪಿಣರಾಯಿ ವಿಜಯನ್
WhatsApp Group Join Now
Telegram Group Join Now

ತಿರುವನಂತಪುರ ಆಗಸ್ಟ್ 03 : ಭೂಕುಸಿತದಿಂದ ಹಾನಿಗೀಡಾದ ವಯನಾಡ್ಚೂರಲ್‌ಮಲ-ಮುಂಡಕೈ ಪ್ರದೇಶದ ಪುನರ್ವಸತಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಹೆಚ್ಚು ಸುರಕ್ಷಿತ ಪ್ರದೇಶವನ್ನು ನೋಡಿ ಅಲ್ಲಿ ಟೌನ್ ಶಿಪ್ ನಿರ್ಮಿಸಲಾಗುವುದು. ಅದಕ್ಕಾಗಿ ಚರ್ಚೆ ಆರಂಭವಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೋರಲು ನೀಡಿರುವ ಕ್ಯೂಆರ್ ಕೋಡ್ ದುರ್ಬಳಕೆ ಆಗಿರುವ ಸಾಧ್ಯತೆ ಗಮನಕ್ಕೆ ಬಂದಿದೆ. ಪ್ರಸ್ತುತ QR ಕೋಡ್ ಅನ್ನು ಹಿಂಪಡೆಯಲಾಗುತ್ತದೆ. ಬದಲಿಗೆ ಯುಪಿಐ ನೀವು ಐಡಿ ಮೂಲಕ ಗೂಗಲ್ ಪೇನಲ್ಲಿ ದೇಣಿಗೆ ನೀಡಬಹುದು ಎಂದು ಪಿಣರಾಯಿ ಹೇಳಿದ್ದಾರೆ.

ಹಿಂದಿನ ವಯನಾಡ್ ಕಲೆಕ್ಟರ್ ಮತ್ತು ಪ್ರಸ್ತುತ ಜಂಟಿ ಭೂ ಕಂದಾಯ ಆಯುಕ್ತರಾದ ಗೀತಾ ಐಎಎಸ್ ಅವರ ನೇತೃತ್ವದಲ್ಲಿ ವಯನಾಡ್ ಸೆಲ್ ಅನ್ನು ರಚಿಸಲಾಗುವುದು. ಇದು ಮನೆ ಮತ್ತು ಭೂಮಿ ಸೇರಿದಂತೆ ಸಹಾಯದ ಕೊಡುಗೆಗಳನ್ನು ಸಂಘಟಿಸಲು ಸಹಾಯ ಮಾಡುತ್ತದೆ. ಸಂವಹನಕ್ಕಾಗಿ ಮೀಸಲಾದ ಇ-ಮೇಲ್ ಐಡಿ ಮತ್ತು ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ. ಮೂರು ದೂರವಾಣಿ ಸಂಖ್ಯೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article