ಪಾಕಿಸ್ತಾನ ಪರ ಘೋಷಣೆ ದೇಶದ್ರೋಹ: ಸಿದ್ದರಾಮಯ್ಯ, ಸಿಎಂ

Ravi Talawar
ಪಾಕಿಸ್ತಾನ ಪರ ಘೋಷಣೆ ದೇಶದ್ರೋಹ: ಸಿದ್ದರಾಮಯ್ಯ, ಸಿಎಂ
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 30: ಬಸವ ಜಯಂತಿ ಪ್ರಯುಕ್ತ ನಗರದಲ್ಲಿಂದು ಬಸವಣ್ಣನ ಪ್ರತಿಮೆ ಪುಷ್ಪನಮನ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತಾಡಿದರು. ಪಾಕಿಸ್ತಾನ ಪರ ಘೋಷಣೆ (pro Pakistan slogan) ಕೂಗಿದ ವ್ಯಕ್ತಿಯೊಬ್ಬನನ್ನು ಮಂಗಳೂರಲ್ಲಿ ಹತ್ಯೆ ಮಾಡಲಾಗಿದೆ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ಅವನು ಘೋಷಣೆ ಕೂಗಿದಾಗ ನೀನು ಅಲ್ಲಿದ್ಯಾ? ಎಂದು ಮರು ಪ್ರಶ್ನಿಸಿದರು. ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಅದು ತಪ್ಪು ಮತ್ತು ದೇಶದ್ರೋಹ, ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ ಎಂಬ ಆರೋಪದಲ್ಲಿ ಒಬ್ಬನನ್ನು ಕೊಲ್ಲಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ವರದಿ ಬಂದ ಬಳಿಕ ನಿಜಾಂಶ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

WhatsApp Group Join Now
Telegram Group Join Now
Share This Article