ವಿಜಯನಗರ(ಹೊಸಪೇಟೆ): ದಲಿತ ಪರಿಶಿಷ್ಟ ಜಾತಿ ಅಲೆಮಾರಿ ಸಿಳ್ಳೆಕ್ಯಾತ ಸಮುದಾಯದ ೧೪-ವರ್ಷದ ಅರುಣಾ ಬಾಲಕಿ ಮೇಲೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆಯೊಂದಿಗೆ ಸೂಕ್ತ ಕಾನೂನು ಕ್ರಮ ಮತ್ತು ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಜಿಲ್ಲಾಧಿಕಾರಿ ಮುಖಾಂತರ
ಮನವಿ ನೀಡಲಾಯಿತು.
ಬೆಂಗಳೂರು ನಗರ ಜಿಲ್ಲೆ ಮಾಗಡಿ ರಸ್ತೆಯ ತಾವರಕೇರಿಯಿಂದ ಗಾರೆ ಕೆಲಸ ಮಾಡಿಕೊಂಡು ಜೀವನೋಪಾಯ ದುಡಿಯಲು ಹೋಗಿದ್ದು, ಕೊಪ್ಪಳ ಜಿಲ್ಲೆಯ ಹೊಸಬಂಡಿ ಹರ್ಲಾಪುರ ಗ್ರಾಮದ ದಲಿತ ಪರಿಶಿಷ್ಟ ಜಾತಿ ಅಮಾರಿ ಸಿಳ್ಳೆಕ್ಯಾತ ಸಮುದಾಯದ ನಾಗಪ್ಪ ಮತ್ತು ರೇಣುಕಮ್ಮಾ ದಂಪತಿಗಳ ೧೪ ವರ್ಷದ ಅರುಣಾ ಎಂಬ ಹೆಣ್ಣುಮಗಳನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಮಾರಕಾಸ್ತ್ರಗಳಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.
ಪೋಲಿಸರು ಆರೋಪಿಗಳನ್ನು ಬಂಧಿಸಿ ಎಫ್.ಐ.ಆರ್. ದಾಖಲಿಸಿದ್ದಾರೆ. ರಾಜ್ಯದ ಎಲ್ಲಾ ಅಲೆಮಾರಿ ಸಮುದಾಯದವರು ಮುಖಂಡರುಗಳುಯ ರಾಮನಗರ ಜಿಲ್ಲೆಯ ನೊಂದ ಕುಟುಂಭವನ್ನು ಬೇಟಿಯಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಅಲೆಮಾರಿ, ದಲಿತ ಸಂಘಟನೆಗಳು ಉಗ್ರವಾಗಿ ಹೋರಾಟ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.
ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಾಗೂ ನೊಂದ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಮತ್ತು ಮಹಿಳಾ ಮಕ್ಕಳ ಆಯೋಗ, ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಅಲೆಮಾರಿ ಮುಖಂಡರುಗಳೂ ಮತ್ತು ದಲಿತಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳು ಜಿಲ್ಲಾ ಅನುಷ್ಠಾನ ಸಮಿತಿ, ಸದಸ್ಯರುಗಳು, ಗೌರವ ಸದಸ್ಯರುಗಳು ಸರ್ವ ಸದಸ್ಯರುಗಳು ಈ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗೆ ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಿದ್ದುಬೆಳಗಲ್, ಕಿನ್ನೂರಿ ಶೇಖಪ್ಪ, ಜೆ.ರಮೇಶ, ಶೇಖರ್, ಜಂಬಯ್ಯ ನಾಯ್ಕ್, ಸತ್ಯಮೂರ್ತಿ, ರಮೇಶ್, ಹಂಪಯ್ಯ, ಮಾರುತಿ, ರಾಜಕುಮಾರ್, ಲಿಂಗಪ್ಪ, ಪಕ್ಕೀರಪ್ಪ ಬಾದಿಗಿ, ಚೌಡಪ್ಪ, ಎಸ್.ಕೆ.ಹನುಮಕ್ಕ, ಅಂಜಲಿಬೆಳಗಲ್, ಇನ್ನು ಮುಂತಾದವರು ಉಪಸ್ಥಿತರಿದ್ದರು.