ಬಳ್ಳಾರಿ. ಸೆ. 17: ಸಿದ್ದರಾಮಯ್ಯ ಅಹಿಂದ ನಾಯಕರಲ್ಲ ಅವರು ಕುರುಬ ಸಮುದಾಯಕ್ಕೆ ಮಾತ್ರ ನಾಯಕ ಅವರು ಸಮಾಜದಲ್ಲಿ ಅಥವಾ ರಾಜಕಾರಣದಲ್ಲಿ ಯಾರನ್ನು ಬೆಳೆಯಲು ಬಿಡುವುದಿಲ್ಲ, ಒಬ್ಬರ ಮೇಲೆ ಒಬ್ಬರನ್ನೂ ಎತ್ತಿ ಕಟ್ಟಿ ಡಿಕೆಶಿ ಮತ್ತು ವಾಲ್ಮೀಕಿ ಜನಾಂಗದ ನಾಯಕರುಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ, ಮಧುಗಿರಿ ರಾಜಣ್ಣ, ಬಿ ನಾಗೇಂದ್ರ ಅವರುಗಳನ್ನು ಸರ್ಕಾರ ಉಳಿಸಿಕೊಳ್ಳಲು ಹೋಗಿ ನಾಯಕ ಸಮುದಾಯದ ಇಬ್ಬರು ಮುಖಂಡರನ್ನು ಬಲಿಪಶು ಮಾಡಿದ್ದಾರೆ, ಎಷ್ಟು ಮೀಸಲಾತಿಯಲ್ಲಿ ಗೆದ್ದ ಶಾಸಕರು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬಾರದು ಎಂದು ಎಲ್ಲಾ ಪಕ್ಷದ ವಾಲ್ಮೀಕಿ ಜನಾಂಗದ ಶಾಸಕರನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ಜೋಳದ ರಾಶಿ ತಿಮ್ಮಪ್ಪ ಅಗ್ರಹಿಸಿದರು.
ಅವರು ಒಕ್ಕೂಟದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಕುರುಬ ಜಾತಿಯನ್ನು ಸೇರಿಸಲು ಸಿದ್ದರಾಮಯ್ಯನವರು ಹುನ್ನಾರ ನಡೆಸಿದ್ದಾರೆ ಇದರಿಂದ ನಿಜವಾದ ಬುಡಕಟ್ಟು ಜನಾಂಗಕ್ಕೆ ಸೇರಿದ ವಾಲ್ಮೀಕಿ ನಾಯಕರಿಗೆ ಅನ್ಯಾಯವಾಗಲಿದೆ ಜೇನು ಕುರುಬ, ಕಾಡು ಕುರುಬ ಅಂತಹ ಬುಡಕಟ್ಟು ಸಮುದಾಯಗಳನ್ನು ಪರಿಶಿಷ್ಟ ಪಂಗಡ ಜಾತಿಯಲ್ಲಿ ಸೇರಿಸಲು ನಮ್ಮ ಅಭ್ಯಂತರವಿಲ್ಲ, ಆದರೆ ಕುರುಬರನ್ನು ಎಸ್ ಟಿ ಜನಾಂಗಕ್ಕೆ ಸೇರಿಸಲು ನಮ್ಮ ತೀವ್ರವಾದ ವಿರೋಧವಿದೆ ಎಂದರು.
ರಾಜ್ಯ ಸರ್ಕಾರ ನಡೆಯುತ್ತಿರುವ ಜಾತಿ ಜನಗಣತಿಯಲ್ಲಿ ಎಲ್ಲಾ ವಾಲ್ಮೀಕಿ ಜನಾಂಗದವರು ಜಾತಿ ಕಾಲಮ್ ನಲ್ಲಿ ಕೇವಲ ವಾಲ್ಮೀಕಿ ಎಂದು ಮಾತ್ರ ಬರೆಸಿ ಎಂದು ರಾಜ್ಯದ ವಾಲ್ಮೀಕಿ ಜನಾಂಗಕ್ಕೆ ಮನವಿ ಮಾಡಿದರು.
ವಾಲ್ಮೀಕಿ ಮುಖಂಡ ಹಾಗೂ ಹಿರಿಯ ವಕೀಲರಾದ ಬಿ ಜಯರಾಮ್ ಮಾತನಾಡಿ, ಕುರುಬ ಜಾತಿಯನ್ನು ಎಷ್ಟೇ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಭಾರಿ ಕೆಂದ್ರಕ್ಕೆ ಖಡತ ಸಲ್ಲಿಕೆ ಆಗಿದೆ ಆದರೆ
ಕೇಂದ್ರದಿಂದ ಫೈಲ್ ರಿಟರ್ನ್ ಆಗಿದೆ, ಕಾನೂನಿನ ಅನ್ವಯ ಬುಡಕಟ್ಟು ಜನಾಂಗವನ್ನು ಮಾತ್ರ ಎಸ್. ಟಿ ಪಂಗಡಕ್ಕೆ ಸೇರಿಸಲು ಸಾಧ್ಯ. ಇತರರನ್ನು ಸೇರಿಸಲು ಅಸಾಧ್ಯ, ಈ ಪ್ರಸ್ತಾವನೆಯನ್ನು ಕೈ ಬಿಡಿ ಎಂದು ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಮುದಿ ಮಲ್ಲಯ್ಯ ಮಾತನಾಡಿ, ಜಿಲ್ಲೆಯಲ್ಲಿ ಬಹಳಷ್ಟು ಮುರಾರ್ಜಿ ವಸತಿ ಶಾಲೆಯಲ್ಲಿ ಪ್ರವೇಶಗಳು ಖಾಲಿ ಇದ್ದು ಅವುಗಳನ್ನು ತುಂಬಲು ಅಧಿಕಾರಿಗಳು ಕ್ರಮ ಕೈಗೊಂಡಿರುವುದಿಲ್ಲ ಮುರಾರ್ಜಿ ಶಾಲೆಯ ಉಸ್ತುವಾರಿಯನ್ನು ಸಹಾಯಕ ಆಯುಕ್ತರಿಗೆ ವಹಿಸಿಕೊಡಲಾಗಿದೆ ಅವರಿಗೆ ಈ ವಸತಿ ಶಾಲೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸೀಟ್ಗಳು ಖಾಲಿ ಉಳಿದು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಮುಖ್ಯಸ್ಥರನ್ನಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿಯನ್ನು ನಿಯೋಜಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.