ಬೆಳವಡಿ: ಯುವಕರು ಮಾನಸಿಕ ಮತ್ತು ದೈಹಿಕ ಶಕ್ತಿಯೊಂದಿಗೆ ಜ್ಞಾನ, ಸಂಸ್ಕಾರ, ಶಿಸ್ತು ಸಂಪದಾನೆ ಮಾಡಿದರೆ ದೇಶದ ಭವಿಷ್ಯವೆ ಬದಲಾಗುತ್ತದೆ ಎಂಬ ವಿವೇಕಾನಂದರ ಘೋಷಣೆಯಂತೆ ನಾವೆಲ್ಲರು ದೇಶದ ಸುಭದ್ರತೆಗಾಗಿ ಯುವ ಶಕ್ತಿಯನ್ನು ಸಶಕ್ತಗೊಳಿಸೊಣ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಗ್ರಾಮದ ಸರ್ಕಾರಿ ಎಮ್.ಆರ್.ಪಾಟೀಲ ಪ್ರೌಢಶಾಲೆಯಲ್ಲಿ ಅದಿವ್ಯಕ್ತ ಪರಿಷತ್, ಸ್ವಾಮಿ ವಿವೇಕಾನಂದ ಚಾರಿಟೆಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ವಿವೇಕಾನಂದರ162ನೇ ದಿನಾಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ಕೇವಲ ಕಾವಿದಾರಿಗಳಾಗದೆ, ಆಧ್ಯಾತ್ಮದ ತಜ್ಞರು, ಲೇಖಕರು, ಮತ್ತು ಉದಾತ್ತ ವಿಚಾರಕಗಳಿಂದ ಅಮೆರಿಕೆಯ ಶಿಕ್ಯಾಗೊ ಪಟ್ಟಣದಲ್ಲಿ ಉಜ್ವಲವಾದ ಭಾಷಣದ ಮೂಲಕ ವಿಶ್ವ ವಿಖ್ಯಾತಿಯಾದರು. ಅವರ ಸಂದೇಶಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಯಶಸ್ವಿಯಾಗಲಿದ್ದಾರೆ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ಮೇಲೆ ನಡೆಯೊಣ ಎಂದು ಯುವಜನತೆಯನ್ನು ಪ್ರೇರೇಪಿಸುವ ಉತ್ಸಾಹಭರಿತ ಸಂದೇಶವನ್ನು ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಮಾತನಾಡಿ, ಸ್ವಾಮಿ ವಿವೇಕಾನಂದ ಜಯಂತಿ ಶ್ರದ್ಧಾಪೂರ್ವಕವಾಗಿ ಮತ್ತು ವಿಜೃಂಭಣೆಯಿಂದ ಶಾಲಾ ಕಾಲೇಜುಗಳಲ್ಲಿ ಆಚರಿಸುವದರಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಸಿಗಲಿದೆ .ಯುವಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಅವರಲ್ಲಿರುವ ಶಕ್ತಿಯನ್ನು ಪರಿಚಯಿಸಲು ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ನೊಟರಿ ಸಿ.ಎಸ್.ಚಿಕ್ಕನಗೌಡರ ನೇತೃತ್ವದಲ್ಲಿ ಯುವ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆ, ಶ್ರದ್ಧೆ, ಪರಿಶ್ರಮ ವಿಷಯದ ಮೇಲೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ್ವಾಮಿ ವಿವೇಕಾನಂದ, ಪರಮಹಂಸ ಹಾಗೂ ತಾಯಿ ಶಾರದೆಯ ಪಾತ್ರದಲ್ಲಿ ವಿದ್ಯಾರ್ಥಿಗಳು ಕಾಣಿಸಿಕೊಂಡು ಗಮನ ಸೆಳೆದರು.
ರಾಷ್ಟ್ರಮಟ್ಟದ ಯೋಗ ಪಟುಗಳಾದ ಶಂಕರ ಯಳ್ಳೂರ, ಸೋಮಲಿಂಗ ಮಾರೆಪ್ಪನವರ ಅವರನ್ನು ಸತ್ಕರಿಸಲಾಯಿತು.ಬೈಲಹೊಂಗಲ ನ್ಯಾಯವಾದಿ ಸಂಘದ ಉಪಾಧ್ಯಕ್ಷ ಎ.ಎಂ ಶಿದ್ರಾಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಯೋಧ ಬಸವರಾಜ್ ಬಳಿಗಾರ, ನ್ಯಾಯವಾದಿ ,ಎಸ್.ವಿ.ಸಿದ್ದಮನಿ, ಭಾವಾಖಾನ ಮಾತನಾಡಿದರು.
ಕಾರ್ಯಕ್ರಮದಲ್ಲಿ, ಎಮ್.ವಿ. ಕಾಜಗಾರ, ಎಸ್.ವಾಯ್.ಪಾಟೀಲ, ಸಿದ್ದಲಿಂಗ ಬೋಳಶೆಟ್ಟಿ, ವಿಶ್ವನಾಥ ಪೂಜಾರ, ರಮೆಶ ರಾಯೊಜಿ, ಶಂಕರ ಪಾತ್ತಾರ, ಮುಖ್ಯೋಪಾಧ್ಯಾಯ ಎಸ್.ಸಿ.ಗುಗ್ಗರಿ ಸ್ವಾಗತಿಸಿದರು. ಎಸ್.ವಾಯ್.ಪಾಟೀಲ ಧನ್ಯವಾದಗಳನ್ನು ತಿಳಿಸಿದರು.