ಬೈಲಹೊಂಗಲ: ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ರೈತರ ಪ್ರಗತಿಗೆ ಬೆಂಬಲ ನೀಡುವ ಪ್ರಮುಖ ಆರ್ಥಿಕ ಮೂಲವಾಗಿದ್ದು ಅದರ ಸದುಪಯೋಗ ಪಡೆಸಿಕೊಂಡು ತಮ್ಮ ಆದಾಯ ದ್ವಿಗುಣಗೊಳಿಸಿ ಆರ್ಥಿಕವಾಗಿ ಸದೃಢರಾಗಬೇಕೆಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ಕೆನರಾ ಬ್ಯಾಂಕ್ ಗ್ರಾಹಕರಿಗೆ ಕೃಷಿ ಮತ್ತು ಮಹಿಳಾ ಸ್ವಸಾಹಯ ಸಂಘಗಳಿಗೆ ಸಾಲ ವಿತರಣಾ ಮೇಳ ಹಾಗೂ ಆರ್ಥಿಕ ಜಾಗೃತಿ ಸಭೆಯಲ್ಲಿ ಮಾತನಾಡಿ, ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾದ ಬೆಲೆಸಾಲ, ಜಮೀನು ಅಭಿವೃದ್ಧಿಗಾಗಿ, ಪಂಪಸೆಟ್, ಪೈಪಲೈನ್, ಕೃಷಿಯಂತ್ರೊಪಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಧದ ಸಾಲ ಸೌಲಭ್ಯ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ನೀಡುವ ಬ್ಯಾಂಕ್ ಸಾಲದ ಸಹಾಯವನ್ನು ಕೆನರಾ ಬ್ಯಾಂಕ್ ಮಾಡುತ್ತಿದೆ.
ರಾಜ್ಯದಲ್ಲಿ ಸ್ಥಾಪನೆಯಾಗಿ ಇಂದು 23 ಲಕ್ಷ ಕೋಟಿ ರೂಪಾಯಿ ವ್ಯವಾಹರ ಅನೇಕ ದೇಶಗಳಲ್ಲಿ ನಡೆಸುತ್ತಾ ದೇಶದಲ್ಲಿ ಕರ್ನಾಟಕದ ಬ್ಯಾಂಕ್ ಒಂದು 3ನೇ ಸ್ಥಾನದಲ್ಲಿರುವದು ಕನ್ನಡಿಗರಿಗೆ ಹೆಮ್ಮೆ. ಬ್ಯಾಂಕ್ ನಿಂದ ನೀಡುವ ಸಾಲಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲತೆ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ ನಮ್ಮ ಉತ್ತಮ ಬೆಳವಣಿಗೆಯೊಂದಿಗೆ ಬ್ಯಾಂಕ್ ಜೋತೆ ಒಳ್ಳೆಯ ಆರೋಗ್ಯಕರ ಸಂಬಂಧವನ್ನಿಟ್ಟುಕೊಂಡು ದೇಶದ ಪ್ರಗತಿಗೆ ಕೈ ಜೋಡಿಸೊಣ ಎಂದರು.
ಕೆನರಾ ಲಿಡ್ ಬ್ಯಾಂಕ್ ಅಧಿಕಾರಿ ಪ್ರಶಾಂತ ಗೋಡಕೆ ಮಾತನಾಡಿ, ಕೆನರಾ ಬ್ಯಾಂಕ್ ನಿಂದ ರೈತರ ಮಕ್ಕಳಿಗೆ ಶಿಕ್ಷಣ ಸಾಲ, ಆಧುನಿಕ ಕೃಷಿಯಲ್ಲಿ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ತಯಾರಿಕೆಗೆ, ಬೃಹತ್ ಒಕ್ಕೂಲ ಯಂತ್ರಗಳ ಖರೀದಿ, ವಾಹನ ಸಾಲ, ಮಹಿಳೆಯರಿಗೆ ಉಳಿತಾಯ ಯೋಜನೆಗಳು, ಸ್ವ ಉದ್ಯೋಗ ನಿಧಿ, ಜೀವ ವಿಮೆಗಳು ಇದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಬೈಲಹೊಂಗಲ ಕೆನರಾ ಬ್ಯಾಂಕ್ ಮುಖ್ಯ ಪ್ರಭಂಧಕ ಅನುರಾಗ ಮೇಹೆರಾ, ಸಂಪಗಾಂವ ಶಾಖಾಧಿಕಾರಿ ರಾಜಶ್ರೀ, ಮುಳಕೂರ ಪ್ರಭಂಧಕ ದೀಲಿಪಕುಮಾರ್ ಹಾಗೂ ಬ್ಯಾಂಕ್ ಸಿಬ್ಬಂದಿ ಅಲಿನಾ ಡಿಸೊಜಾ, ಸಂದೀಪ ಯರಗಟ್ಟಿ, ಮಾತನಾಡಿ, ಕೆನರಾ ಬ್ಯಾಂಕ್ ನಲ್ಲಿ 0 ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆದು ವರ್ಷಕ್ಕೆ 40ರೂಪಾಯಿ ತುಂಬಿದರೆ ಅಪಘಾತವಾದಲ್ಲಿ 2ಲಕ್ಷ ಪರಿಹಾರ, 5ಸಾವಿರ ಬ್ಯಾಲೆನ್ಸ್ ಇರುವ ಉಳಿತಾಯ ಖಾತೆಯನ್ನು ಹೆಣ್ಣುಮಕ್ಕಳ ಹೆಸರಿನಿಂದ ತೆರೆದರೆ ಅವರ ಆರೋಗ್ಯದಲ್ಲಿ ಬರುವ ಮಾರಣಾಂತಿಕ ರೋಗಗಳ ವೆಚ್ಚವನ್ನು ಬ್ಯಾಂಕ್ ಬರಿಸುವದರೊಂದಿಗೆ ಅವರ ಜೀವ ವಿಮೆಯನ್ನು ಒದಗಿಸುತ್ತದೆ. ಮೊಬೈಲ್ ಮೂಲಕ ಹಣ ಲಪಟಾಯಿಸುವ ಮೋಸ ವಂಚನೆ ಹೆಚ್ಚಾಗಿದ್ದು ಗ್ರಾಹಕರು ಬ್ಯಾಂಕ್ ಶಾಖೆಗೆ ಬಂದು ಅಧಿಕೃತ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ತಮ್ಮ ಆನ್ ಲೈನ್ ವ್ಯವಹಾರ ಮಾಡಬೇಕು ಎಂದರು.
ಗೀತಾ ಖಾನಪೆಟ್, ಸಂದ್ಯಾ ಬುಲಾಖೆ ಮಾತನಾಡಿ, ಮೊಬೈಲ್ ಮೂಲಕ ಹಣ ಕಳೆದುಕೊಂಡಾಗ ತಕ್ಷಣ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕ ಮಾಡಿಕೊಂಡು ತಮ್ಮ ಶ್ರಮದ ಹಣ ಲಪಟಾಯಿಸುವವರಿಂದ ಮರಳಿ ಪಡೆಯಬಹುದು. ಅದಕ್ಕಾಗಿ ಜಾಣರಾಗಿ ಜಾಗುರಕಾರಾಗಿರಿ. ಅಟಲ್ ಪೆನ್ಷ್ಯನ್ ಯೋಜನೆ ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಬಗ್ಗೆ ರೈತರು ಆಸಕ್ತಿ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಬೈಲಹೊಂಗಲ, ಸಂಪಾಗಾಂವ ಮತ್ತು ನಯಾನಗರ ಕೆನರಾ ಬ್ಯಾಂಕ್ ದ ನೂರಾರು ಗ್ರಾಹಕ ರೈತರು, ಸ್ವಸಹಾಯ ಗುಂಪು ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉತ್ತಮ ರೈತ ಗ್ರಾಹಕರಿಗೆ ಮತ್ತು ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಿಸಿದರು.