ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸುವ ಉದ್ದೇಶದಿಂದ ಮುಂದಾಲೋಚನೆ ಇಲ್ಲದೆ ಬಿಟ್ಟಿ ಭಾಗ್ಯಗಳನ್ನ ಘೋಷಿಸಿ ಇಂದು ಜನಸಾಮನ್ಯರ ಮೇಲೆ ತೆರೆಗೆ ಹೊರೆ ಹೊರೆಸಿ ಒಂದು ಕಡೆ ಕೊಟ್ಟಾಂಗ ಇನ್ನೊಂದು ಕಡೆಯಿಂದ ದುಪ್ಪಟ್ಟು ವಸೂಲಿ ಮಾಡುವ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಖಂಡನೀಯ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಡಿಸೈಲ್ ಮತ್ತು ಪೆಟ್ರೋಲ ದರ ಏರಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ.
ಶನಿವಾರ ಪತ್ರಿಕಾಪ್ರಕಟಣೆ ಹೊರಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ್ ಬಂದಾಗಿನಿಂದ ಬರಗಾಲವಿದ್ದರು ರೈತರಿಗೆ ಸಾಹಯ ಮಾಡದೆ ಕಿಸಾನ್ ಸಮ್ಮಾನದ ರಾಜ್ಯ ಸರ್ಕಾರದ 4ಸಾವಿರ ರೂಪಾಯಿ ಸಾಹಯಧನ ಕಿತ್ತುಕೊಂಡರು.
ಕಂದಾಯ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿತ್ತು. ಮಕ್ಕಳ ರೈತವಿದ್ಯಾಸಿರಿ ಕಸಿದುಕೊಂಡು ಬಿತ್ತನೆ ಬೀಜದ ದರ ದುಪ್ಪಟ್ಟು ಮಾಡಿ ರೈತರ ಜೀವನದ ಮೇಲೆ ಬರೆ ಎಳೆದ ಸರ್ಕಾರ ಇಂದು ಡಿಸೈಲ್ ಬೆಲೆಯನ್ನು 3ರೂ.50ಪೈಸೆ ಹಾಗೂ ಪೆಟ್ರೋಲ ದರ 3.ರೂಪಾಯಿ ಹೆಚ್ಚಳ ಮಾಡಿರುವದು ಖಂಡನೀಯವಾಗಿದೆ.
ಪೆಟ್ರೋಲ ಮತ್ತು ಡಿಸೈಲ್ ಬೆಲೆ ಏರಿಸುವ ಮೂಲಕ ಎಲ್ಲಾ ವಸ್ತುಗಳ ಹಾಗೂ ಸೇವೆಯ ಬೆಲೆ ಏರಿಕೆಗೆ ಹಾದಿ ಮಾಡಿಕೊಟ್ಟ ಕಾಂಗ್ರೆಸ್ ಸರ್ಕಾರ ತನ್ನ ಬೆಲೆ ಏರಿಕೆಯ ನೀತಿಯಿಂದ ಹಿಮದೆ ಸರಿಯದಿದ್ದರೆ ಉಗ್ರ ಹೋರಾಟ ನಡೆಸಬೆಕಾದಿತು ಜನರ ಅಕ್ರೋಶವನ್ನು ಎದರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ