ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿವೆ ಧಾರವಾಡ ಕೃಷಿ ವಿ ವಿ ಯಿಂದ ಮೆಂತ್ಯ, ಹಸಿರುಕಾಳು 

Ravi Talawar
ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿವೆ ಧಾರವಾಡ ಕೃಷಿ ವಿ ವಿ ಯಿಂದ ಮೆಂತ್ಯ, ಹಸಿರುಕಾಳು 
WhatsApp Group Join Now
Telegram Group Join Now
ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಸಿರುಕಾಳು, ಮೆಂತ್ಯ ಮತ್ತು ಇತರ ಒಣ ಬೀಜಗಳನ್ನು ಕಳುಹಿಸಿದೆ. ಗಗನಯಾತ್ರಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಮತ್ತು ಬಾಹ್ಯಾಕಾಶ ಪರಿಸರದಲ್ಲಿ ಇವುಗಳ ಬೆಳೆಯುವ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಈ ಪ್ರಯೋಗ ಮಾಡಲಾಗುತ್ತಿದೆ. ಈ ಕುರಿತು ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಯೋಜನೆಯ ಪ್ರಧಾನ ಅಧಿಕಾರಿ ಡಾ. ರವಿಕುಮಾರ್ ಹೊಸಮನಿ ನೀಡಿರುವ ಮಾಹಿತಿ
ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನಾವು ಕಳುಹಿಸಿರುವ ಬೀಜಗಳಿಗೆ ನೀರನ್ನು ಸೇರಿಸುವ ಮೂಲಕ ಬೀಜಗಳನ್ನು ಜೀವಂತ ಇಟ್ಟು, 2 ರಿಂದ 4 ದಿನಗಳಲ್ಲಿ ಮೊಳಕೆಯೊಡೆಯವಂತೆ ಮಾಡುತ್ತಾರೆ. ನಂತರ, ಬೀಜಗಳನ್ನು ಫ್ರೀಜ್ ಮಾಡಿ ಭೂಮಿಗೆ ಹಿಂತಿರುಗಿಸುವ ಮೊದಲು ನಿಲ್ದಾಣದಲ್ಲಿ ಸಂರಕ್ಷಿಸಲಾಗುತ್ತದೆ. ಅವುಗಳು ಹಿಂತಿರುಗಿದ ನಂತರ, ಕೃಷಿ ವಿವಿಯಲ್ಲಿ ಮೊಳಕೆಯ ಪ್ರಮಾಣವನ್ನು ಅವುಗಳ ಪೋಷಕಾಂಶ ಗುಣಮಟ್ಟವನ್ನು ಫೈಟೊಹಾರ್ಮೋನ್ ಡೈನಾಮಿಕ್ಸ್‌ನಲ್ಲಿನ ಬದಲಾವಣೆಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಗಳಿಗೆ ಹೊಂದುಕೊಳ್ಳುವ ಕುರಿತು ನಾವು ವಿಶ್ಲೇಷಿಸುತ್ತೇವೆ ಎಂದು ಡಾ. ರವಿಕುಮಾರ್ ಹೊಸಮನಿ ವಿವರಿಸಿದರು.ಈ ಸಂಶೋಧನೆಯಿಂದ, ಭವಿಷ್ಯದಲ್ಲಿ ಅಂತರಿಕ್ಷಯಾನದ ವೇಳೆ ಭಾರತೀಯರ ಆಹಾರದ ಭಾಗವಾಗಿ ಆರೋಗ್ಯಕರ ಸಲಾಡ್‌ ಬಳಸಬಹುದೇ? ನಮ್ಮ ಧಾನ್ಯಗಳು ಪೂರಕವಾಗಲಿವೆಯೇ ಎಂಬುದನ್ನು ತಿಳಿಯುವುದು ನಮ್ಮ ಗುರಿ ಎಂದೂ ಅವರು ತಿಳಿಸಿದ್ದಾರೆ
ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿವೆ ಧಾರವಾಡ ಕೃಷಿ ವಿ ವಿ ಯಿಂದ ಮೆಂತ್ಯ, ಹಸಿರುಕಾಳು
ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಸಿರುಕಾಳು, ಮೆಂತ್ಯ ಮತ್ತು ಇತರ ಒಣ ಬೀಜಗಳನ್ನು ಕಳುಹಿಸಿದೆ. ಗಗನಯಾತ್ರಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಮತ್ತು ಬಾಹ್ಯಾಕಾಶ ಪರಿಸರದಲ್ಲಿ ಇವುಗಳ ಬೆಳೆಯುವ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಈ ಪ್ರಯೋಗ ಮಾಡಲಾಗುತ್ತಿದೆ.
WhatsApp Group Join Now
Telegram Group Join Now
Share This Article